ಬಹು ನಿರೀಕ್ಷಿತ ಮಾಲ್ಡೀವ್ಸ್-ಭಾರತೀಯ ಸೇನೆಯ ಜಂಟಿ ತಾಲೀಮು ಆರಂಭ! 
ರಾಜ್ಯ

ಬೆಳಗಾವಿ: ಬಹು ನಿರೀಕ್ಷಿತ ಮಾಲ್ಡೀವ್ಸ್-ಭಾರತೀಯ ಸೇನೆಯ ಜಂಟಿ ತಾಲೀಮು ಆರಂಭ!

ಭಾರತ ಮತ್ತು ಮಾಲ್ಡೀವ್ಸ್ ಸೇನೆಗಳ ನಡುವಿನ ಜಂಟಿ ಸಮರಾಭ್ಯಾಸ ಎಕುವೆರಿನ್ ಕರ್ನಾಟಕದ ಬೆಳಗಾವಿಯಲ್ಲಿ ಶುಕ್ರವಾರದಿಂದ ಆರಂಭವಾಗಿದೆ.

ಬೆಳಗಾವಿ: ಭಾರತ ಮತ್ತು ಮಾಲ್ಡೀವ್ಸ್ ಸೇನೆಗಳ ನಡುವಿನ ಜಂಟಿ ಸಮರಾಭ್ಯಾಸ ಎಕುವೆರಿನ್ ಕರ್ನಾಟಕದ ಬೆಳಗಾವಿಯಲ್ಲಿ ಶುಕ್ರವಾರದಿಂದ ಆರಂಭವಾಗಿದೆ.
ಡಿಸೆಂಬರ್ 15ರಿಂದ ಆರಂಭವಾಗಿರುವ ಎಕುವೆರಿನ್ ಜಂಟಿ ಸಮರಾಭ್ಯಾಸ ಡಿಸೆಂಬರ್ 28ರವರೆಗೆ ನಡೆಯಲಿದ್ದು, ಇದು ಭಾರತೀಯ ಸೇನೆ ಮತ್ತು ಮಾಲ್ಡೀವ್ಸ್ ಸೇನೆಯ ನಡುವಿನ 8ನೇ ಆವೃತ್ತಿಯ 'ಎಕುವೆರಿನ್' ಜಂಟಿ  ತಾಲಿಮಾಗಿದೆ. ಬೆಳಗಾವಿಯ ಮರಾಠ ಸೆಂಟರ್ ಸೇನಾ ಶಿಬಿರದಲ್ಲಿ ಸಮರಾಭ್ಯಾಸ ಆರಂಭವಾಗಿದ್ದು, ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ ಕೆಂಪು ಬಾವುಟ ಪ್ರದರ್ಶನ ಮಾಡುವ ಜಂಟಿ ತಾಲೀಮಿಗೆ ಚಾಲನೆ ನೀಡಿತು.  ಪರಸ್ಪರ ಕಾರ್ಯಸಾಧ್ಯತೆ ಈ ಜಂಟಿ ತಾಲೀಮಿನ ಪ್ರಮುಖ ಉದ್ದೇಶವಾಗಿದ್ದು, ಬ್ರಿಗೇಡಿಯರ್ ಗೋವಿಂದ್ ಕಲ್ವಾದ್ ಅವರು ಜಂಟಿ ಸಮರಾಭ್ಯಾಸದ ನೇತೃತ್ವ ವಹಿಸಿಕೊಂಡಿದ್ದಾರೆ.
ಒಟ್ಟು 14 ದಿನಗಳ ಕಾಲ ನಡೆಯುವ ಈ ಸಮರಾಭ್ಯಾಸದಲ್ಲಿ ಭಾರತೀಯ ಸೇನೆಯ ಸಿರ್ಮೂರ್ ರೈಫಲ್ ಬೆಟಾಲಿಯನ್ ತಂಡದ ಸದಸ್ಯರು, ನೌಕಾಪಡೆಯ ಸೈನಿಕರು, ಮಾಲ್ಡೀವ್ಸ್ ಸೇನೆಯೊಂದಿಗೆ ಸೇರಿ ಸಮರಾಭ್ಯಾಸ  ನಡೆಸಲಿದ್ದಾರೆ.
2009ರಿಂದ ಭಾರತೀಯ ಸೇನೆ ಹಾಗೂ ಮಾಲ್ಡೀವ್ಸ್ ಸೇನೆ 'ಎಕುವೆರಿನ್' ಜಂಟಿ ಸಮರಾಭ್ಯಾಸವನ್ನು ಆಯೋಜಿಸುತ್ತಾ ಬಂದಿದ್ದು, 2016ರ ಡಿಸೆಂಬರ್ ನಲ್ಲಿ 7ನೇ ಆವೃತ್ತಿಯ 'ಎಕುವೆರಿನ್' ಸಮರಾಭ್ಯಾಸ ಮಾಲ್ಡೀವ್ಸ್ ನ ಕಧ್ಧೂ,   ಲಾಮು ಅಟಾಲ್ ನಲ್ಲಿ ನೆರವೇರಿತ್ತು. ಇದೀಗ 8ನೇ ಆವೃತ್ತಿಯ ಸಮರಾಭ್ಯಾಸ ಭಾರತದಲ್ಲಿ ಆಯೋಜನೆಯಾಗಿದ್ದು, ಪ್ರಮುಖವಾಗಿ ಕರ್ನಾಟಕದ ಬೆಳಗಾವಿ ಜಿಲ್ಲೆಯಲೇ ಜಂಟಿ ಸಮರಾಭ್ಯಾಸ ನಡೆಯಲಿದೆ. ಮಾಲ್ಡೀವ್ಸ್ ನ ಧಿವೆಹಿ  ಭಾಷೆಯಲ್ಲಿ ಎಕುವೆರಿನ್ ಎಂದರೆ ಸ್ನೇಹ ಎಂದರ್ಥ. ಹೀಗಾಗಿ ಭಾರತ-ಮಾಲ್ಡೀವ್ಸ್ ಸೇನಾ ಸಮರಾಭ್ಯಾಸಕ್ಕಾಗಿ ಎಕುವೆರಿನ್ ಎಂದೇ ನಾಮಕರಣ ಮಾಡಲಾಗಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT