ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆಯಿಂದ 'ಬೆಸ್ಕಾಂ ಮಿತ್ರ' ಆ್ಯಪ್
ಬೆಂಗಳೂರು: ಬೆಂಗಳೂರು ಹಾಗೂ ಸುತ್ತಮುತ್ತಲ ಗ್ರಾಹಕರಿಗೆ ಅನುಕೂಲವಾಗುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆ (ಬೆಸ್ಕಾಂ) ‘ಬೆಸ್ಕಾಂ ಮಿತ್ರ’ೆನ್ನುವ ಮೊಬೈಲ್ ಅಪ್ಲಿಕೇಷನ್ ಒಂದನ್ನು ಹೊರತಂದಿದೆ. ಬೆಸ್ಕಾಂ ನ ಈ ನೂತನ ಆ್ಯಪ್ ಅನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬುಧವಾರ ಬಿಡುಗಡೆ ಮಾಡಿದ್ದಾರೆ.
ಬೆಸ್ಕಾಂ ಕುರಿತಂತೆ ಸಂಪೂರ್ಣ ಮಾಹಿತಿ ಈ ಆ್ಯಪ್‌ನಲ್ಲಿ ಲಭ್ಯವಿದ್ದು ಬೆಸ್ಕಾಂ ಗೆ ಸಂಬಂಧಿಸಿ ನಿಯಮಗಳು, ವಿದ್ಯುತ್ ದರ, ವಿದ್ಯುತ್ ಕಡಿತದ ಕುರಿತ ಮಾಹಿತಿ, ಹಣ ಪಾವತಿಯ ವಿವರ, ಆನ್ ಲೈನ್ ಬಿಲ್ ಪಾವತಿ ಸೌಲಭ್ಯವನ್ನು ಹೊಂದಿದೆ.
ಇಷ್ಟೇ ಅಲ್ಲದೆ ಬೆಸ್ಕಾಂ ಸಂಬಂಧಿ ದೂರುಗಳನ್ನು ಸಹ ಇದೇ ಆ್ಯಪ್ ಸಹಾಯದಿಂದ ದಾಖಲಿಸಬಹುದು. ಇದಕ್ಕಾಗಿ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದ್ದು ಬೆಸ್ಕಾಂ ನ ಅಧಿಕೃತ ಪೇಸ್ ಬುಕ್, ಟ್ವಿಟ್ಟರ್ ಖಾತೆಗಳನ್ನೂ ಸಹ ಇದರಿಂದಲೇ ಸಂಪರ್ಕಿಸಬಹುದು.
ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ಡಿ.ಕೆ. ಶಿವಕುಮಾರ್ತ್ "ಈ ಆ್ಯಪ್ ಅನ್ನು ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ವಿಸ್ತರಣೆ ಮಾಡಲಾಗುತ್ತದೆ ಎಂದಿದ್ದಾರೆ. "ಬೆಂಗಳೂರಿನಲ್ಲಿ ನಾಲ್ಕು ಉಪ ವಿಭಾಗಗಳನ್ನು ಪ್ರಾರಂಭಿಸಲಿದ್ದೇವೆ. ಅಲ್ಲದೆ ನೆಲದಾಳದಲ್ಲಿ ಕೇಬಲ್ ಅಳವಡಿಸಲು 600 ಕೋಟಿ ರೂ. ವ್ಯಯಿಸಾಲಿದ್ದೇವೆ. ಡಿ. 24ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 'ಪವರ್ ಮ್ಯಾರಥಾನ್' ಹಮ್ಮಿಕೊಳ್ಳಲಾಗಿದ್ದು ಹತ್ತು ಸಾವಿರ ಯುವಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. " ಎಂದಿದ್ದಾರೆ.
ಸದ್ಯ ಗೂಗಲ್‌ನ ಪ್ಲೇ ಸ್ಟೋರ್ ಹಾಗೂ ಆ್ಯಪಲ್‌ನ ಆ್ಯಪ್ ಸ್ಟೋರ್‌ನಲ್ಲಿ (ಐಒಎಸ್) ಈ ಆ್ಯಪ್ ಡೌನ್ ಲೋಡ್ ಗೆ ಸಿಗುತ್ತಿದೆ.