ಮಕ್ಕಳೊಂದಿಗೆ ಗೃಹಿಣಿ ವರಲಕ್ಷ್ಮಿ 
ರಾಜ್ಯ

72 ದಿನಗಳು ಕಳೆದರೂ ಕೈಗೆ ಬಾರದ ಜಾತಿ ಪ್ರಮಾಣ ಪತ್ರ

ತನ್ನ ಮೂರು ವರ್ಷದ ಮಗಳು ಎನ್.ನಿತ್ಯಶ್ರೀಗೆ ಜಾತಿ ಪ್ರಮಾಣಪತ್ರ ಪಡೆಯಲು ಗೃಹಿಣಿ ಎಂ.ವರಲಕ್ಷ್ಮಿಗೆ ಕಾದು...

ಬೆಂಗಳೂರು: ತನ್ನ ಮೂರು ವರ್ಷದ ಮಗಳು ಎನ್.ನಿತ್ಯಶ್ರೀಗೆ ಜಾತಿ ಪ್ರಮಾಣಪತ್ರ ಪಡೆಯಲು ಗೃಹಿಣಿ ಎಂ.ವರಲಕ್ಷ್ಮಿಗೆ ಕಾದು, ಅಲೆದು ಸಾಕಾಗಿ ಹೋಗಿದೆ. ಸ್ಥಳೀಯ ಶಾಲೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ಉಚಿತ ಸೀಟು ಪಡೆಯಲು ವರಲಕ್ಷ್ಮಿಗೆ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗಿದೆ.
ಇತರ ಹಿಂದುಳಿದ ವರ್ಗಗಳಡಿಯಲ್ಲಿ ಜಾತಿ ಪ್ರಮಾಣಪತ್ರಕ್ಕೆ ಅಗತ್ಯ ದಾಖಲೆಗಳೊಂದಿಗೆ ಕೆಲ ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿದರೂ ಕೂಡ ಇದುವರೆಗೆ ವರಲಕ್ಷ್ಮಿ ಕುಟುಂಬಕ್ಕೆ ಜಾತಿ ಪ್ರಮಾಣಪತ್ರ ಸಿಕ್ಕಿಲ್ಲ.
ಬೆಂಗಳೂರಿನ ಕೆ.ಜಿ.ರಸ್ತೆಯ ಕಂದಾಯ ಭವನದ 6ನೇ ಮಹಡಿಯಲ್ಲಿರುವ ಬೆಂಗಳೂರು ಉತ್ತರ ತಹಶಿಲ್ದಾರರ ಉಪ ಕಚೇರಿಗೆ ಕಳೆದ ಅಕ್ಟೋಬರ್ 9ರಂದು ವರಲಕ್ಷ್ಮಿ ಹೋಗಿ ತಮ್ಮ ಮಗಳನ್ನು ಶಾಲೆಗೆ ಸೇರಿಸಲು ತಮ್ಮ ಕುಟುಂಬದವರಿಗೆ ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಹಾಕಲು ಏನು ಮಾಡಬೇಕೆಂದು ಕೇಳಿದಾಗ 4 ಜನಕ್ಕೂ ಪ್ರಮಾಣಪತ್ರ ನೀಡಲು 2,000 ರೂಪಾಯಿ ನೀಡಬೇಕೆಂದು ಅಲ್ಲಿದ್ದ ಒಬ್ಬ ವ್ಯಕ್ತಿ ಕೇಳಿದರು. 
ಅಷ್ಟು ಹಣ ನೀಡಲು ಸಾಧ್ಯವಿಲ್ಲವೆಂದು ವರಲಕ್ಷ್ಮಿ ಮನೆಗೆ ಬಂದರು. ನಂತರ ತನ್ನ ಪ್ರದೇಶದಲ್ಲಿರುವ ಆರ್ ಟಿಐ ಕಾರ್ಯಕರ್ತನೊಬ್ಬನನ್ನು ವಿಚಾರಿಸಿದರು. ಕಾರ್ಯಕರ್ತ ಕಾಳಿದಾಸ ರೆಡ್ಡಿ ಎನ್ನುವವರು ಜಾತಿ ಪ್ರಮಾಣಪತ್ರ ಪಡೆಯಲು ಯಾವುದೇ ಹಣ ನೀಡಬೇಕಾಗಿಲ್ಲ ಎಂದರು.
''ನಾನು ಅವರ ಜೊತೆ ಅಕ್ಟೋಬರ್ 16ರಂದು ಕಂದಾಯ ಭವನದ ಕಚೇರಿಗೆ ಹೋದೆ. ಸಕಲ ಯೋಜನೆಯಡಿ ಪ್ರತಿ ಅರ್ಜಿಯನ್ನು ತುಂಬಬೇಕಾಗಿರುವುದರಿಂದ ಪ್ರತಿ ಅರ್ಜಿಗೆ 15 ರೂಪಾಯಿ ನೀಡಿ ಅರ್ಜಿ ಹಾಕಿದೆವು. ಸಕಲ ಸಂಖ್ಯೆಯನ್ನು ಹೊಂದಿರುವ ಮುದ್ರಿತ ಅರ್ಜಿಯನ್ನು ನೀಡಿದೆವು''ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಕಾಳಿದಾಸ ರೆಡ್ಡಿ ಹೇಳಿದರು.
ಮೂರು ದಿನಗಳ ನಂತರ ವರಲಕ್ಷ್ಮಿ ಪತಿಗೆ ಕರೆ ಬಂದು ಮಧ್ಯಾಹ್ನ ಮೂರು ಗಂಟೆಗೆ ಕಚೇರಿಗೆ ಬನ್ನಿ ಎಂದು ಹೇಳಿದರು. ಅರ್ಜಿ ಸ್ವೀಕೃತವಾಗಿದೆಯೇ, ಇಲ್ಲವೇ ಎಂದು ಅಲ್ಲಿರುವ ಅಧಿಕಾರಿಗಳು ಮಾತ್ರ ನಮಗೆ ಫೋನ್ ಮಾಡಿ ಹೇಳುತ್ತಾರೆ. ಹೀಗಾಗಿ ನಾನು ಅವರಿಗೆ ಹೋಗಬೇಡಿ ಎಂದೆ.10 ದಿನಗಳು ಕಳೆದ ನಂತರ ಒಬ್ಬ ವ್ಯಕ್ತಿ ಅವರ ಮನೆಯನ್ನು ನೋಡಲು ಬಂದನು. ಮನೆ ಬಾಗಿಲು ಹಾಕಿದ್ದರಿಂದ ನೆರೆಮನೆಯವರಲ್ಲಿ ವಿಚಾರಿಸಿದರು. ಅಗತ್ಯ ಪ್ರಮಾಣ ಪತ್ರ ನೀಡುವಾಗ ಸರ್ಕಾರದ ಕಡೆಯಿಂದ ಹೀಗೆ ತಪಾಸಣೆ ಮಾಡುವುದು ಪ್ರಕ್ರಿಯೆ ಎಂದು ವಿಚಾರಣೆಗೆ ಬಂದವನು ಹೇಳಿದ್ದಾನೆ. ಕೆಲ ದಿನಗಳ ನಂತರ ನಿಮ್ಮ ಅರ್ಜಿ ತಿರಸ್ಕೃತವಾಗಿದೆ ಎಂದು ವರಲಕ್ಷ್ಮಿಯವರಿಗೆ ಕರೆಬಂತು ಎನ್ನುತ್ತಾರೆ ಕಾಳಿದಾಸ ರೆಡ್ಡಿ. 
ಅರ್ಜಿ ಏಕೆ ತಿರಸ್ಕೃತಗೊಂಡಿತು ಎಂದು ಆರ್ ಟಿಐ ಕಾರ್ಯಕರ್ತನ ಮೂಲಕ ವರಲಕ್ಷ್ಮಿ ಕೇಳಿದ್ದಾರೆ ಮತ್ತು ತಮಗೆ ಕರೆ ಮಾಡಿದ ಮಧ್ಯವರ್ತಿಯ ಮಾಹಿತಿಯನ್ನು ಕೂಡ ಕೇಳಿದ್ದಾರೆ. ಆದರೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಕಚೇರಿಯಲ್ಲಿನ ಮಧ್ಯವರ್ತಿ ಬೇಡಿಕೆಯಿಟ್ಟ ಹಣವನ್ನು ವರಲಕ್ಷ್ಮಿ ನೀಡುತ್ತಿದ್ದರೆ ಒಂದು ವಾರದಲ್ಲಿ ಜಾತಿ ಪ್ರಮಾಣಪತ್ರ ಸಿಗುತ್ತಿತ್ತು ಎನ್ನುತ್ತಾರೆ ಕಾಳಿದಾಸ ರೆಡ್ಡಿ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವರದಿಗಾರರು ಉಪ ತಹಶಿಲ್ದಾರ ಬಿ.ಕೆ.ಚಂದ್ರಶೇಖರ್ ಅವರನ್ನು ಕೇಳಿದಾಗ, ಅರ್ಜಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT