ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಮುತ್ತ ದಟ್ಟ ಮಂಜು ಕವಿದಿದ್ದ ಕಾರಣ ಇಂದು ಬೆಳಗ್ಗೆ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿತ್ತು. ಮಂಜಿನ ವಾತಾವರಣದಿಂದ ಒಟ್ಟು ಎಂಟು ವಿಮಾನಗಳ ಹಾರಾಟ ರದ್ದಾಗಿತ್ತು. ಇನ್ನು ನಾಲ್ಕು ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಕ್ಕೆ ತೆರಳುವಂತೆ ಸೂಚಿಸಿದ್ದರೆ ಒಟ್ಟು 102 ವಿಮಾನಗಳು ವಿಳಂಬವಾಗಿ ಟೇಕ್ ಆಫ್ ಆಗಿದ್ದವು.
ಬೆಂಗಳೂರು ಬೆಂಗಲೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎಎಲ್) ಅಧಿಕಾರಿಗಳ ಪ್ರಕಾರ, ನಿತ್ಯದ ವಿಮಾನ ಕಾರ್ಯಾಚರಣೆಗಳನ್ನು ಬೆಳಗ್ಗೆ 4.58 ರಿಂದ 8.23 ರವರೆಗೆ ಸ್ಥಗಿತಗೊಳಿಸಲಾಗಿತ್ತು. ಇದರಲ್ಲಿ ಒಟ್ಟು ನಾಲ್ಕು ವಿಮಾನಗಳು ಬೇರೆ ನಿಲ್ದಾಣಗಳಿಗೆ ವರ್ಗಾವಣೆಗೊಂಡವು.ಇನ್ನು ರದ್ದು ಗೊಂಡ ಎಲ್ಲಾ ಎಂಟು ವಿಮಾನಗಳೂ ಇಂಡಿಗೋ ವಿಮಾನ ಸಂಸ್ಥೆಗೆ ಸೇರಿದವಾಗಿದ್ದವು. ಒತ್ಟು 44 ವಿಮಾನಗಳ ಆಗಮನ ಹಾಗೂ 58 ವಿಮಾನಗಳ ನಿರ್ಗಮನ ವಿಳಂಬವಾಗಿತ್ತು.
ಬೇರೆಡೆಗೆ ಸ್ಥಲಾಂತರಗೊಂಡ ನಾಲ್ಕು ವಿಮಾನಗಳಲ್ಲಿ ಬ್ರಿಟಿಷ್ ಏರ್ವೇಸ್, ಬ್ಲೂಡಾರ್ಟ್ ಮತ್ತು ಓಮನ್ ಏರ್ ಸಂಸ್ಥೆ ವಿಮಾನಗಳು ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿದಿದ್ದರೆ ಇಂಡಿಗೋ ಸಂಸ್ಥೆಯ ಒಂದು ವಿಮಾನ ಹೈದರಾಬಾದ್ ನಿಲ್ದಾಣದಲ್ಲಿ ಇಳಿದಿತ್ತು.