ಸಾಂದರ್ಭಿಕ ಚಿತ್ರ 
ರಾಜ್ಯ

ಕೆಎಸ್ಆರ್ ಟಿಸಿ ನಿವೃತ್ತ ನೌಕರರ ಪತ್ನಿಗೆ ಬಸ್ ಪಾಸು ವಿತರಣೆ: ಸರ್ಕಾರ ನಿರ್ಧಾರ

ಎಲ್ಲಾ ನಾಲ್ಕು ಸಾರಿಗೆ ನಿಗಮಗಳ ನಿವೃತ್ತ ನೌಕರರ ಪತ್ನಿಯರಿಗೆ ರಾಜ್ಯ ...

ಬೆಂಗಳೂರು: ಎಲ್ಲಾ ನಾಲ್ಕು ಸಾರಿಗೆ ನಿಗಮಗಳ ನಿವೃತ್ತ ನೌಕರರ ಪತ್ನಿಯರಿಗೆ ರಾಜ್ಯ ಸರ್ಕಾರ ಬಸ್ ಪಾಸ್ ನೀಡಲಿದೆ. ವರ್ಷಕ್ಕೆ 500 ರೂಪಾಯಿ ನೀಡಿದರೆ ಅವರು ರಾಜ್ಯದ ಯಾವುದೇ ಭಾಗದಲ್ಲಿ ಸಾಮಾನ್ಯ ಮತ್ತು ಎಕ್ಸ್ ಪ್ರೆಸ್ ಬಸ್ ನಲ್ಲಿ ಕಾಯ್ದಿರಿಸದ ಸೀಟಿನಲ್ಲಿ ಪ್ರಯಾಣಿಸಬಹುದು. 
ಬಸ್ಸಿನ ಪ್ರಯಾಣ ದರದ ಶೇಕಡಾ 50 ಭಾಗ ನೀಡಿ ಸಾರಿಗೆ ನಿಗಮದ ಅಧಿಕಾರಿಗಳು ಮತ್ತು ಅವರ ಪತ್ನಿ ಪ್ರಮುಖ ಸೇವೆಗಳ ಬಸ್ಸುಗಳಲ್ಲಿ ಪ್ರಯಾಣಿಸಬಹುದಾಗಿದೆ.
ಮುಖ್ಯಮಂತ್ರಿಗಳ ಶಿಫಾರಸಿನಂತೆ ರಾಜ್ಯ ರಸ್ತೆ ಸಾರಿಗೆ ನಿಗಮದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಮಂಡ್ಯ ಜಿಲ್ಲೆಯ ಜಕ್ಕನಹಳ್ಳಿಯಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ 2 ಎಕರೆ ಮತ್ತು ಚಿತ್ರದುರ್ಗ ಜಿಲ್ಲೆಯ ಹೊಳಕೆರೆಯಲ್ಲಿ ಬಸ್ ನಿಲ್ದಾಣಕ್ಕೆ 1 ಎಕರೆ ಭೂಮಿಯನ್ನು ಪಡೆಯುವ ಕುರಿತು ಕೂಡ ನಿರ್ಧರಿಸಲಾಯಿತು. 
ಜನವರಿ 4ರಿಂದ ಪುದುಚೆರಿಗೆ ಕೆಎಸ್ ಆರ್ ಟಿಸಿ ಹೊಸ ರಾಜಹಂಸ ಬಸ್ಸುಗಳ ಸೇವೆಯನ್ನು ಆರಂಭಿಸಲಿದೆ. ಇಲ್ಲಿಗೆ ಪ್ರಯಾಣ ದರವನ್ನು 410 ಎಂದು ನಿಗದಿಪಡಿಸಲಾಗಿದ್ದು ಬೆಂಗಳೂರಿನಿಂದ ರಾತ್ರಿ 10 ಗಂಟೆಗೆ ಬಸ್ ಹೊರಡಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!