ರಾಜ್ಯ

ಬೆಂಗಳೂರು ರೈಲ್ವೆ ವಲಯಕ್ಕೆ ನಿರಾಶಾದಾಯಕವಾದ ರೈಲ್ವೆ ಬಜೆಟ್

Sumana Upadhyaya
ಬೆಂಗಳೂರು: ಮೂರು ರೈಲು ಯೋಜನೆಗಳನ್ನು ದ್ವಿಗುಣಗೊಳಿಸುವುದಕ್ಕೆ ಹಣ ಬಿಡುಗಡೆ ಮಾಡದಿರುವುದು, ನೈರುತ್ಯ ವಲಯ ರೈಲುಗಳ ಪ್ರಯಾಣಿಕರ ಸೌಕರ್ಯಗಳ ಕಡೆಗೆ ಕೇಂದ್ರ ಬಜೆಟ್ ನಲ್ಲಿ ಅತ್ಯಲ್ಪ ಹಂಚಿಕೆ ಮಾಡಿರುವುದು ಬೆಂಗಳೂರು ರೈಲ್ವೆ ವಲಯಕ್ಕೆ ಈ ಬಾರಿ ಭಾರೀ ನಿರಾಸೆಯನ್ನುಂಟುಮಾಡಿದೆ. 
ಯಲಹಂಕ ಮತ್ತು ಬೈಯಪ್ಪನಹಳ್ಳಿ ನಡುವೆ ದ್ವಿಗುಣ ರೈಲು ಹಳಿಗಳ ನಿರ್ಮಾಣಕ್ಕೆ ಮಂಜೂರಾಗದಿರುವುದರಿಂದ ಉಪ ನಗರ ರೈಲು ಯೋಜನೆಗಳಿಗೆ ಹೊಡೆತ ಬಿದ್ದಿದೆ. ಇದು ಹೆಚ್ಚಿನ ರೈಲು ಓಡಾಟಕ್ಕೆ ಅಗತ್ಯವಾಗಿತ್ತು. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಮಂಜೂರು ಒಂದೇ ಆಶಾದಾಯಕವಾಗಿದೆ.
ಈ ಬಾರಿಯ ಬಜೆಟ್ ನಲ್ಲಿ ರೈಲು ಯೋಜನೆಗಳ ಬಗ್ಗೆ ಮಂಡಿಸಲಾದ ಯೋಜನೆಗಳು, ನೀಡಲಾಗಿರುವ ಮೊತ್ತಗಳ ಬಗ್ಗೆ ಪ್ರತಿಕ್ರಿಯಿಸಿದ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ರೈಲು ಬಜೆಟ್ ನಿಜಕ್ಕೂ ನಿರಾಶಾದಾಯಕವಾಗಿದೆ. ನಮಗೆ ಅಗತ್ಯವಿರುವುದು ಯಾವುದೂ ಸಿಕ್ಕಿಲ್ಲ. ಇದರಿಂದ ಬೆಂಗಳೂರು ರೈಲು ವಲಯಕ್ಕೆ ಹಿನ್ನೆಡೆಯುಂಟಾಗಿದೆ ಎನ್ನುತ್ತಾರೆ.
SCROLL FOR NEXT