ಮನೆಗಳಿಗೆ ತೆರಳಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿರುವ ಭವ್ಯಾ 
ರಾಜ್ಯ

ತುಮಕೂರು: ಉತ್ತಮ ವೇತನದ ಕೆಲಸ ಬಿಟ್ಟು ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ನಿಂತ ಮಹಿಳೆ

ಪ್ರತಿಯೊಂದು ಮನೆಯಲ್ಲಿಯೂ ಶೌಚಾಲಯ ಇರಬೇಕು ಎನ್ನುವ ಕನಸಿಗಾಗಿ, ಉತ್ತಮ ವೇತನ ಸಿಗುತ್ತಿದ್ದ ನೌಕರಿ ಬಿಟ್ಟ ಮಹಿಳೆಯೋರ್ವರು...

ಬೆಂಗಳೂರು: ಪ್ರತಿಯೊಂದು ಮನೆಯಲ್ಲಿಯೂ ಶೌಚಾಲಯ ಇರಬೇಕು ಎನ್ನುವ ಕನಸಿಗಾಗಿ, ಉತ್ತಮ ವೇತನ ಸಿಗುತ್ತಿದ್ದ ನೌಕರಿ ಬಿಟ್ಟ ಮಹಿಳೆಯೋರ್ವರು  ಗ್ರಾಮಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.

30 ವರ್ಷದ ಭವ್ಯರಾಣಿ  ಕಳೆದ ಆರು ವರ್ಷಗಳಿಂದ ತುಮಕೂರು ಗ್ರಾಮ ಪಂಚಾಯಿತಿಯಲ್ಲಿ ಬಯಲು ಮುಕ್ತ ಶೌಚಕ್ಕಾಗಿ ಶ್ರಮಿಸುತ್ತಿದ್ದಾರೆ. ಸರ್ಕಾರದ ಸಹಾಯ ಪಡೆಯದೇ ಗ್ರಾಮದ ಜನತೆಗೆ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ.

ತುಮಕೂರು ಜಿಲ್ಲೆ ತುರುವರೆಕೆರೆ ತಾಲೂಕು ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 24 ಗ್ರಾಮಗಳು ಬರುತ್ತವೆ. ಈ ಎಲ್ಲಾ ಗ್ರಾಮಗಳನ್ನು ಶೌಚಾಲಯದ ಮಹತ್ವ ತಿಳಿಸಿದ್ದಾರೆ ಭವ್ಯ.

ಭವ್ಯ ಮೂಲತಃ ಕರಾವಳಿ ಕರ್ನಾಟಕ ಬಂಟ್ವಾಳದ ಅನಂತಾಡಿಯವರು. ಸೋಷಿಯಲ್ ವರ್ಕ್ ನಲ್ಲಿ  ಆಳ್ವಾ ಕಾಲೇಜಿನಲ್ಲಿ ಸ್ನಾತಕೋತ್ತರ ಪಡೆದಿರುವ ಭವ್ಯ. 2010 ರಲ್ಲಿ ಸ್ವಸ್ತಿ ಎಂಬ ಎನ್ ಜಿ ನಲ್ಲಿ ತಮ್ಮ ವೃತ್ತಿ ಬದುಕು ಆರಂಭಿಸಿದರು. ಈ ವೇಳೆ ತಮ್ಮ ಸ್ನೇಹಿತೆ ಸಹೋದರಿ ಮದುವೆಗಾಗಿ ತುಮಕೂರಿಗೆ ಆಗಮಿಸಿದ್ದರು. ಅಲ್ಲಿಂದ ಭವ್ಯ ವೃತ್ತಿ ಹಾಗೂ ಜೀವನವೇ ಬದಲಾಯಿತು.

ಗ್ರಾಮದಲ್ಲಿ ಶೌಚಾಲಯಗಳ ಅಗತ್ಯತೆಯ ಅರಿವು ಮೂಡಿಸಲು ತಮ್ಮ ನೌಕರಿ ಬಿಟ್ಟು ತುಮಕೂರಿನ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಆರಂಭಿಸಿದ್ದರು, ನಂತರ ತಮ್ಮ 2 ಲಕ್ಷ ರು ಉಳಿತಾಯದ ಹಣದೊಂದಿಗೆ ಪೋಷಕರ ಸಹಾಯದಿಂದ 100 ಶೌಚಾಲಯಗಳ ನಿರ್ಮಾಣಕ್ಕೆ ಅಗತ್ಯ ಸಾಮಾನುಗಳನ್ನು ಖರೀದಿಸಿದರು. ಜೊತೆಗೆ ಮನೆಗಳಿಂದ ಹಣ ಪಡೆದರು. ತಾವು ವಾಸವಿದ್ದ ಪ್ರದೇಶದಲ್ಲಿ ಭವ್ಯರಾಣಿ ಮೊದಲ ಶೌಚಾಲಯ ನಿರ್ಮಿಸಿದರು.

ಈಗ ಈ ಹಳ್ಳಿ ಸುಂದರವಾಗಿದೆ. ಆದರೂ ಜನ ಇನ್ನೂ ಬಯಲಲ್ಲೇ ಶೌಚ ಮಾಡುತ್ತಿರುವುದು ನನದೆ ಭಯ ಮೂಡಿಸುತ್ತಿದೆ ಎಂದು ಭವ್ಯ ಹೇಳಿದ್ದಾರೆ. ಜನ ಇನ್ನೂ ಸ್ವಚ್ಚತೆ ಬಗ್ಗೆ ಏಕೆ ಜಾಗೃತರಾಗಿಲ್ಲ , ಮೂಲಭೂತ ಸೌಲಭ್ಯಗಳನ್ನು ಬಗ್ಗೆ ಏಕೆ ನಿರ್ಲಕ್ಷ್ಯ ವಹಿಸುತ್ತಾರೆ ಎಂಬ ಬಗ್ಗೆ ಪ್ರಶ್ನಿಸಿದ್ದಾರೆ. ಸರ್ಕಾರಿ ಯೋಜನೆಗಳ ಬಗ್ಗೆ ಗ್ರಾಮಗಳ ಜನತೆಯಲ್ಲಿ ಶೂನ್ಯ ಜ್ಞಾನವಿದೆ ಎದು ಅವರು ಹೇಳಿದ್ದಾರೆ.

ಹೀಗಾಗಿ ನನ್ನ ಜೀವನವನ್ನು ಸ್ವಚ್ಚತೆಯ ಅಭಿಯಾನಕ್ಕಾಗಿ ಮೀಸಲಿಟ್ಟಿದ್ದೇನೆ. ಇದರ ಜವಾಬ್ದಾರಿ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ ಎಂದು ಹೇಳುವ ಭವ್ಯ ಕಳೆದ ಆರು ವರ್ಷಗಳಲ್ಲಿ ಶೆಟ್ಟಿಗೊಂಡನಹಳ್ಳಿಯಲ್ಲಿ 443 ಶೌಚಾಲಯ ಕಟ್ಟಲು ಸಹಾಯ ಮಾಡಿದ್ದಾರೆ. ಸದ್ಯ ಗ್ರಾಮದಲ್ಲಿರುವ 1,343 ಮನೆಗಳಲ್ಲಿ 884 ಮನೆಗಳಲ್ಲಿ ಇನ್ನೂ ಶೌಚಾಲಯಗಳಿಲ್ಲ ಎಂಬ ಮಾಹಿತಿ ನೀಡಿದ್ದಾರೆ.

ಭವ್ಯರ ಈ ಹಾದಿ ಸುಗಮ ಹಾಗೂ ಸುಲಭವಾಗಿರಲಿಲ್ಲ, 2010 ರಲ್ಲಿ ಅವರು ಇಲ್ಲಿಗೆ ಬಂದಾಗ ಇದ್ದ 1,280 ಮನೆಗಳಲ್ಲಿ ಕೇವಲ 8 ಶೌಚಾಲಯಗಳು ಮಾತ್ರ ಇದ್ದವು. ಗ್ರಾಮಸ್ಥರ ಮನಸ್ಥಿತಿ ಬದಲಾಯಿಸುವುದು ತೀರಾ ಕಷ್ಟದ ಕೆಲಸವಾಗಿತ್ತು. ಶೌಚಾಲಯ ನಿರ್ಮಾಣ ಮತ್ತು ಅದರ ಬಳಕೆ ಬಗ್ಗೆ ಅವರಿಗೆ ತಿಳಿಹೇಳುವುದು ದೊಡ್ಡ ತಲೆ ನೋವಾಗಿತ್ತು ಎಂದು ಭವ್ಯ ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ನಾನು ಸ್ವಚ್ಚತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ನಿರ್ಧರಿಸಿ ಕೆಲಸ ಆರಂಬಿಸಬೇಕು ಎನ್ನುವಾಗ, ಪ್ರಧಾನಿ ನರೇಂದ್ರ ಮೋದಿ ಅರ ಸ್ವಚ್ಚ ಭಾರತ್  ಯೋಜನೆ ನನಗೆ ನೆರವಾಯಿತು ಎಂದು ಭವ್ಯ ಹೇಳಿದ್ದಾರೆ.

2019 ರೊಳಗೆ ಬಯಲು ಮುಕ್ತ ಶೌಚ ಭಾರತವನ್ನಾಗಿ ಮಾಡಲು ಕೇಂದ್ರ ಸರ್ಕಾರ ಬಯಸಿದೆ, ಆದರೆ ವಿದ್ಯಾವಂತ ಜನರ ನೆರವಿಲ್ಲದೇ ಅದು ಸಾಧ್ಯವಿಲ್ಲ ಎಂದು ಭವ್ಯ ಹೇಳಿದ್ದಾರೆ. ನನ್ನ ಪ್ರಯತ್ನದಿಂದಾಗಿ ನಾನು ಇದನ್ನು ಮಾದರಿ ಗ್ರಾಮ ಪಂಚಾಯಿತಿ ಯನ್ನಾಗಿ ಮಾಡುವುದಾಗಿ ಭವ್ಯ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT