ಶಶಿಕಲಾ, ಪರಪ್ಪನ ಅಗ್ರಹಾರ ಕಾರಾಗೃಹ 
ರಾಜ್ಯ

3 ವರ್ಷಗಳ ಹಿಂದೆ ಜಯಲಲಿತಾ ಜೈಲು ಸೇರಿದಾಗ ನಡೆದಿದ್ದ ಹೈಡ್ರಾಮಾ ಈ ಬಾರಿ ಇರಲಿಲ್ಲ

ಆದಾಯಕ್ಕಿಂತ ಆಧಿಕ ಆಸ್ತಿ ಹೊಂದಿದ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಜಯಲಲಿತಾ ಮೂರು ವರ್ಷಗಳ...

ಬೆಂಗಳೂರು: ಆದಾಯಕ್ಕಿಂತ ಆಧಿಕ ಆಸ್ತಿ ಹೊಂದಿದ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಜಯಲಲಿತಾ ಮೂರು ವರ್ಷಗಳ ಹಿಂದೆ ತಮಿಳುನಾಡಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆ ವೇಳೆ ಎಐಎಡಿಎಂಕೆಯ ಸಾವಿರಾರು ಮಂದಿ ಕಾರ್ಯಕರ್ತರು ಪರಪ್ಪನ ಅಗ್ರಹಾರ ಜೈಲಿನ ಮುಂದೆ ಜಮಾಯಿಸಿ, ಜಯಾ ಪರ ಘೋಷಣೆ ಕೂಗಿ ಕಣ್ಣೀರು ಹಾಕಿದ್ದರು.

ಆದರೆ ಮೂರು ವರ್ಷಗಳ ನಂತರ ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಾ ಆಪ್ತೆ ಶಶಿಕಲಾ ಮತ್ತೆ ಜೈಲು ಸೇರಿದ್ದಾರೆ. ಅದು ಇದ್ದ ವಾತಾವರಣ ನಿನ್ನೆ ಇರಲಿಲ್ಲ.

ಪರಪ್ಪನ ಆಗ್ರಹಾರ ಜೈಲಿನ ಮುಂದೆ ಪತ್ರಕರ್ತರ ಸಮೂಹವೇ ನೆರದಿತ್ತು. ಶಶಿಕಲಾರನ್ನು ನೋಡುವ ಕೂತೂಹಲದಿಂದ ಸ್ಥಳೀಯರು ಜೈಲಿನ ಬಳಿ ಆಗಮಿಸಿದ್ದರು. ಅಕ್ರಮ ಆಸ್ತಿ ಪ್ರಕರಣದಲ್ಲಿ 4 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಶಶಿಕಲಾ ಚೆನ್ನೈನಿಂದ ರಸ್ತೆ ಮಾರ್ಗವಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದರು.

ಜಯಲಲಿತಾ ಪರಪ್ಪನ ಅಗ್ರಹಾರ ಜೈಲಿಗೆ ಮೂರು ವರ್ಷಗಳ ಹಿಂದೆ ಬಂದ ವೇಳೆ ಇದ್ದ ಎಐಎಡಿಎಂಕೆ ಕಾರ್ಯಕರ್ತರು, ಮಹಿಳಾ ಬೆಂಬಲಿಗರ ಗೈರು ಎದ್ದು ಕಾಣುತ್ತಿತ್ತು, ಇದು ಶಶಿಕಲಾ ಅವರಿಗೆ ಪಕ್ಷದೊಳಗೆ ಇರುವ ಅಸಮಾಧಾನವನ್ನು ಎತ್ತಿ ತೋರಿಸುತ್ತಿತ್ತು.

ಇದು ಡಿಎಂಕೆ ಪಕ್ಷದ ಪಿತೂರಿ, ಶಶಿಕಲಾ ಜೈಲಿನಿಂದ ಹೊರಬಂದ ಮೇಲೆ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾರೆ ಎಂಬ ಆತ್ಮ ವಿಶ್ವಾಸವಿದೆ ಎಂದು ಕರ್ನಾಟಕ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಪುಗಳೆಂದಿ ಹೇಳಿದ್ದಾರೆ.

ಕೆಲವೇ ಕೆಲವು ಶಶಿಕಲಾ ಬೆಂಬಲಿಗರು ಮಾತ್ರ ಜೊತೆಯಲ್ಲಿ ಬಂದಿರುವುದಕ್ಕೆ ಏನು ಕಾರಣ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಶಾಸಕ ವಾಲಾಜಬಾದ್ ಪಿ ಗಣೇಶನ್, ನಮ್ಮ ಎಲ್ಲಾ ಶಾಸಕರು ಮುಂದಿನ ಸರ್ಕಾರ ರಚನೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ನಾವು ಎಲ್ಲರೂ ಒಗ್ಗಟ್ಟಾಗಿ ಚಿನ್ನಮ್ಮ ಅವರಿಗೆ ನಮ್ಮ ಬೆಂಬಲ ಸೂಚಿಸುತ್ತೇವೆ ಎಂದು ಹೇಳಿದ್ದಾರೆ. ಮುಂದಿನ ಎಲ್ಲಾ ನಿರ್ಧಾರಗಳನ್ನು ಶಶಿಕಲಾ ಅವರೇ ತೆಗೆದುಕೊಳ್ಳಲಿದ್ದಾರೆ.

ಇನ್ನೂ ಚೆನ್ನೈನಿಂದ ಶಶಿಕಲಾ ಜೊತೆಗೆ ಬಂದಿದ್ದ ಮನ್ನಾರ್ ಗುಡಿ ಎಐಎಡಿಎಂಕೆ ಕಾರ್ಯಕರ್ತ ಗೋಕುಲ್, ಶಶಿಕಲಾ ಅವರು ಈ ಪ್ರಕರಣದಲ್ಲಿ ಮುಗ್ದೆ, ಅವರಿಗೂ ಪ್ರಕರಣಕ್ಕೂ ಸಂಬಂಧವಿಲ್ಲ, ಅವರೇ ಪಕ್ಷವನ್ನು ಮುನ್ನಡೆಸುತ್ತಾರೆ ಎಂದು ಹೇಳಿದ್ದಾರೆ. ಕೆಲವು ಎಐಎಡಿಎಂಕೆ ಕಾರ್ಯಕರ್ತರು ಶಶಿಕಲಾ ಅವರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT