ಹಂದಿ ಜ್ವರದ ಒಂದು ವಿಧವಾದ ಹೆಚ್ 1ಎನ್ 1 ಸೋಂಕಿನ ಗುಣಲಕ್ಷಣಗಳು 
ರಾಜ್ಯ

ಬೆಂಗಳೂರಿನಲ್ಲಿ ಮತ್ತೆ ಕಾಣಿಸಿಕೊಂಡ ಹೆಚ್ 1ಎನ್1 ಸೋಂಕು: ಮಹಿಳೆ ಬಲಿ

ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 36 ವರ್ಷದ ಮಹಿಳೆ ಮೃತಪಟ್ಟಿದ್ದು ಹೆಚ್ 1ಎನ್1...

ಬೆಂಗಳೂರು: ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 36 ವರ್ಷದ ಮಹಿಳೆ ಮೃತಪಟ್ಟಿದ್ದು ಹೆಚ್ 1ಎನ್1 ಸೋಂಕಿನಿಂದ ಎಂದು ತಿಳಿದುಬಂದಿದೆ. ಈ ವರ್ಷ ರಾಜ್ಯದಲ್ಲಿ ಹೆಚ್ 1ಎನ್1 ಜ್ವರಕ್ಕೆ ಬಲಿಯಾದ ಎರಡನೇ ಪ್ರಕರಣ ಇದಾಗಿದ್ದು, ಬೆಂಗಳೂರಿನಲ್ಲಿ ಮೊದಲಾಗಿದೆ. ಮೊದಲ ಹೆಚ್ 1ಎನ್ 1 ಸಾವು ಶಿವಮೊಗ್ಗದಲ್ಲಾಗಿತ್ತು.
ನಿನ್ನೆ ಆರೋಗ್ಯ ಇಲಾಖೆಯ ಸಾವು ಅಂಕಿಅಂಶ ಸಮಿತಿ ಹೆಚ್ 1 ಎನ್1 ಸಾವನ್ನು ದೃಢಪಡಿಸಿತು. ವೈಟ್ ಫೀಲ್ಡ್ ನ ವಿನಾಯಕ್ ನಗರದ ವಿದ್ಯಾ ಮೂರು ದಿನಗಳ ಹಿಂದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಡಾ. ಪ್ರಕಾಶ್ ಕುಮಾರ್ ತಿಳಿಸಿದ್ದಾರೆ. 
ಹೆಚ್ 1 ಎನ್ 1 ಒಂದು ಗಾಳಿಯ ಮೂಲಕ ಹರಡುವ ಸೋಂಕಾಗಿದೆ.ಹೊಸೂರು, ತಮಿಳುನಾಡುಗಳಿಂದ ಬರುವ ಜನರು ಸೋಂಕನ್ನು ತರುವ ಸಾಧ್ಯತೆಯಿದೆ. ಇಲ್ಲಿಯವರೆಗೆ ಕರ್ನಾಟಕದಲ್ಲಿ 170 ಹೆಚ್ 1 ಎನ್1 ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ 3 ಕಡೆಗಳಲ್ಲಿ ಮಾತ್ರ ಇದರ ಪರೀಕ್ಷೆ ನಡೆಯುತ್ತದೆ. ನಿಮ್ಹಾನ್ಸ್ ನಲ್ಲಿ ಉಚಿತವಾಗಿ, ನಾರಾಯಣ ನೇತ್ರಾಲಯ ಮತ್ತು ಮಣಿಪಾಲ್ ಆಸ್ಪತ್ರೆಯಲ್ಲಿ ಮತ್ತು ಮಿಲಿಟರಿಯವರಿಗೆ ಕಮಾಂಡ್ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ಇವಿಷ್ಟು ಮಾತ್ರ ಅಧಿಕೃತ ಹೆಚ್ 1 ಎನ್1 ಪರೀಕ್ಷಾ ಕೇಂದ್ರಗಳು ಎನ್ನುತ್ತಾರೆ ಡಾ. ಪ್ರಕಾಶ್.
 ಜನರು ಜ್ವರದಂತಹ ಲಕ್ಷಣಗಳನ್ನು, ಕಫ, ಶೀತಗಳನ್ನು ನಿರ್ಲಕ್ಷಿಸಬಾರದು. ಸುರಕ್ಷತೆಗಾಗಿ ಹೆಚ್ 1ಎನ್1 ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು ಎನ್ನುತ್ತಾರೆ ಅವರು.
ಪುದುಚೆರಿ ಸೇರಿದಂತೆ ದಕ್ಷಿಣ ಭಾರತದ ಅನೇಕ ಕಡೆ ಹೆಚ್ 1 ಎನ್1 ಕೇಸುಗಳು ದಾಖಲಾಗಿವೆ. ರೋಗಿಯ ದೇಹದಲ್ಲಿ ರಕ್ಷಣಾತ್ಮಕ ಅಂಶಗಳು ಕಡಿಮೆಯಿದ್ದರೆ ಸೋಂಕು ಹರಡುವ ಮತ್ತು ರೋಗ ಬರುವ ಸಾಧ್ಯತೆ ಹೆಚ್ಚು. ಇದು ಹೆಚ್ಚಿನ ತೊಂದರೆಗೆ ಈಡು ಮಾಡುತ್ತದೆ. ಆರಂಭದಲ್ಲಿಯೇ ರೋಗವನ್ನು ಪತ್ತೆಹಚ್ಚುವುದು ಒಳಿತು. ಹಲವರು ಇದು ಸಾಮಾನ್ಯ ಜ್ವರ ಎಂದುಕೊಂಡು ನಿರ್ಲಕ್ಷ್ಯ ಮಾಡುತ್ತಾರೆ ಎಂದು ಡಾ. ಪ್ರಕಾಶ್ ಹೇಳುತ್ತಾರೆ.
ಹೆಚ್ 1 ಎನ್ 1ಗೆ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತದೆ.ಇದು ವೈರಲ್ ಪರೀಕ್ಷೆಗಾಗಿ ಮಾಡುವ ಪರೀಕ್ಷೆ. ರಾಜ್ಯದಲ್ಲಿ ಬೆಂಗಳೂರಿನಲ್ಲಿ ಮಾತ್ರವಲ್ಲದೆ ಮಣಿಪಾಲ ಮತ್ತು ಉಡುಪಿಯಲ್ಲಿ ಕೂಡ ಉಚಿತ ಪರೀಕ್ಷೆ ಸೌಲಭ್ಯಗಳಿವೆ.
ಸೋಂಕು ನಿಭಾಯಿಸುವಿಕೆಗೆ ಸಿದ್ಧತೆ:ನಮ್ಮಲ್ಲಿ ಇದಕ್ಕೆ ಬೇಕಾದ ಯಂತ್ರಗಳು ಮತ್ತು ಔಷಧಗಳಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡುಗಳಿರುತ್ತವೆ. ಬೆಂಗಳೂರಿನ ರಾಜೀವ್ ಗಾಂಧಿ ಹೃದ್ರೋಗ ಸಂಸ್ಥೆಯಲ್ಲಿ ಪ್ರತ್ಯೇಕ ವಾರ್ಡು ಇದೆ. ಹೆಚ್ 1 ಎನ್1 ಸೋಂಕು ಇರುವ  ರೋಗಿಗಳನ್ನು ಗುಣಮುಖರಾಗುವವರೆಗೆ ದೂರವಿರಿಸುವುದು ಉತ್ತಮ. ಮನೆಯವರಿಗೆ ಟಾಮಿಫ್ಲೂ ಟ್ಯಾಬ್ಲೆಟ್ ಗಳನ್ನು 5 ದಿನಗಳವರೆಗೆ ಕೊಡುತ್ತೇವೆ ಎನ್ನುತ್ತಾರೆ ವೈದ್ಯರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT