ಆರೋಪಿ ಜಗದೀಶ್ 
ರಾಜ್ಯ

ನಾದಿನಿ ಕೊಲೆ ವಿಚಾರ ಮರೆಮಾಚಲು ಹೈಡ್ರಾಮಾ ಮಾಡಿದ ಭಾವ!

ಮಾವನ ಆಸ್ತಿಗಾಗಿ ದುರಾಸೆ ಪಟ್ಟು ತನ್ನ ಹೆಂಡತಿಯ ತಂಗಿಯನ್ನೇ ಕೊಂದು ಬಳಿಕ ಹೈಡ್ರಾಮಾ ಮಾಡಿದ ಕೊಲೆಗಾರನೋರ್ವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗಳೂರು: ಮಾವನ ಆಸ್ತಿಗಾಗಿ ದುರಾಸೆ ಪಟ್ಟು ತನ್ನ ಹೆಂಡತಿಯ ತಂಗಿಯನ್ನೇ ಕೊಂದು ಬಳಿಕ ಹೈಡ್ರಾಮಾ ಮಾಡಿದ ಕೊಲೆಗಾರನೋರ್ವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗಳೂರಿನ ನಾಯ್ಡು ಲೇ ಔಟ್ ನ ನಿವಾಸಿ 18 ವರ್ಷದ ಪವಿತ್ರಾ ಎಂಬಾಕೆ ತನ್ನ ಸ್ವಂತ ಅಕ್ಕನ ಗಂಡ ಜಗದೀಶ್ ಎಂಬಾತನಿಂದ ಹತ್ಯೆಯಾಗಿದ್ದು, ಹತ್ಯೆ ಬಳಿಕ ಕೊಲೆಗಾರ ಜಗದೀಶ್ ಪವಿತ್ರಾ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ  ಎಂದು ನಾಟಕ ಮಾಡಿದ್ದ. ಆದರೆ ಆತನ ಮಾತಿನ ಮೇಲೆ ನಂಬಿಕೆ ಇಲ್ಲದ ಸ್ಥಳೀಯರು ಗಲಾಟೆ ಮಾಡಿದಾಗ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದಾಗ ಆರೋಪಿ ಜಗದೀಶ್ ಕೊಲೆ ವಿಚಾರ ಬಾಯಿ ಬಿಟ್ಟಿದ್ದಾನೆ. ಇದೀಗ  ಆರೋಪಿ ಜಗದೀಶ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಏನಿದು ಘಟನೆ?
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮೂಲದವರಾದ ಚೆನ್ನಯ್ಯ ಮತ್ತು ಲಕ್ಷ್ಮಮ್ಮ ದಂಪತಿ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದು, ನಾಯ್ಡು ಲೇಔಟ್​ನಲ್ಲಿ 600 ಚದರಡಿ ನಿವೇಶನ ಹಾಗೂ ಚಿತ್ತೂರಿನಲ್ಲಿ ಜಮೀನು  ಹೊಂದಿದ್ದಾರೆ. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, 2ನೇ ಮಗಳು ಪವಿತ್ರಾ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಮದುವೆಗೂ ಸಿದ್ಧಳಾಗುತ್ತಿದ್ದಳು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪೋಷಕರು ಬೇರೊಬ್ಬ  ಯುವಕನೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ಬಳಿಕ ಸುಮಾರು ಆತನೊಂದಿಗೆ ಜಗಳ ಮಾಡಿಕೊಂಡಿದ್ದ ಪವಿತ್ರಾ ತವರು ಮನೆ ಸೇರಿಕೊಂಡಿದ್ದಳು. ಪೋಷಕರು ಪವಿತ್ರಾಳ ಸಂಸಾರ ಸರಿ ಹೋಗಲಿ ಎಂದು ಸಂಧಾನ ಮಾತುಕತೆ  ಕೂಡ ನಡೆಸುತ್ತಿದ್ದರು. ಏತನ್ಮಧ್ಯೆ ಮೊದಲ ಮಗಳಾದ ಭುವನೇಶ್ವರಿ ಅವರ ಗಂಡ ಜಗದೀಶ್ ಅತ್ತೆ-ಮಾವನ ಆಸ್ತಿ ಮೇಲೆ ಕಣ್ಣಿಟ್ಟಿದ್ದನಂತೆ. ನಾದಿನಿ ಸಂಸಾರ ಸರಿ ಹೋದರೆ ಎಲ್ಲಿ ಅತ್ತೆ-ಮಾವನ ಆಸ್ತಿ ಪಾಲಾಗುತ್ತದೆಯೇ ಎಂದು  ಶಂಕಿಸಿದ್ದಾನೆ. ಹೀಗಾಗಿ ನಾದಿನಿ ಪವಿತ್ರಾಳ ಸಂಸಾರ ಸರಿ ಮಾಡಲಿಕ್ಕಾಗಿ ಚಿತ್ತೂರಿಗೆ ಹೋಗಿ ಮಾಟ ಮಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಪವಿತ್ರಾಳನ್ನು ಇದೇ ಫೆಬ್ರವರಿ 25ರ ರಾತ್ರಿ ಚಿತ್ತೂರಿಗೆ ಕರೆದೊಯ್ಯಲು  ನಿರ್ಧರಿಸಿದ್ದನಂತೆ.

ಈ ನಡುವೆ ಭಾನುವಾರ ರಾತ್ರಿ ಪವಿತ್ರಾಳ ಕೊಠಡಿಗೆ ಹೋಗಿದ್ದ ಜಗದೀಶ್, ಆಕೆ ಬಾಯಿಗೆ ಬಟ್ಟೆ ತುರುಕಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ನಂತರ ಪವಿತ್ರಾ ಮೂರ್ಛೆ ಹೋಗಿದ್ದಾಳೆ. ಬಳಿಕ ಪವಿತ್ರಾಳನ್ನು ಚಿತ್ತೂರಿನ  ಸ್ವಾಮಿಗಳ ಬಳಿಗೆ ಕರೆದೊಯ್ಯುತ್ತೇನೆ ಎಂದು ಅತ್ತೆ ಲಕ್ಷ್ಮಮ್ಮ ಅವರಿಗೆ ಸುಳ್ಳು ಹೇಳಿದ್ದಾನೆ. ಅಲ್ಲಿಂದ ವೆಲ್ಲೂರಿನ ಆಸ್ಪತ್ರೆಗೆ ಪವಿತ್ರಾಳನ್ನು ದಾಖಲಿಸಿದ್ದ. ತಪಾಸಣೆ ನಡೆಸಿದ ವೈದ್ಯರು, ಪವಿತ್ರಾ ಮೃತಪಟ್ಟಿದ್ದಾಗಿ ದೃಢಪಡಿಸಿದ್ದರು.

ಅಂತೆಯೇ ಚಿತ್ತೂರು ಬಳಿ ಮಾಟಗಾರರೊಂದಿಗೆ ಚರ್ಚಿಸಿದ್ದಾನೆ. ಬಳಿಕ ಕಾರಿನಲ್ಲೇ ಶವವನ್ನು ಹಾಕಿಕೊಂಡು ಚಿತ್ತೂರಿನ ಸಂಬಂಧಿಕರ ಮನೆಗೆ ಹೋಗಿದ್ದಾನೆ. ಅವರಿಗೂ ಪವಿತ್ರಾ ಮೂರ್ಛೆ ಹೋಗಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ.  ಜಗದೀಶನ ಮಾತನ್ನು ಶಂಕಿಸಿದ ಅವರು ಗಲಾಟೆ ಮಾಡಿದಾಗ ಅನಿವಾರ್ಯವಾಗಿ ಮತ್ತೆ ಅಲ್ಲಿಂದ ಪವಿತ್ರಾಳನ್ನು ಪರೀಕ್ಷಿಸಿದ್ದ ವೆಲ್ಲೂರಿನ ಆಸ್ಪತ್ರೆಗೆ ಕರೆದೊಯ್ದಾಗ ಮತ್ತೆ ವೈದ್ಯರು ಆಕೆ ಸಾವನ್ನಪ್ಪಿರುವ ಕುರಿತು ಮಾಹಿತಿ  ನೀಡಿದ್ದಾರೆ. ಮತ್ತೆ ಸಂಬಂಧಿಕರು ಗಲಾಟೆ ಮಾಡಿದಾಗ ಜಗದೀಶನ ಕೊಲೆ ವಿಚಾರ ಹೊರಗೆ ಬಂದಿದ್ದು, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಮಗಳಾದ ಭುವನೇಶ್ವರಿ ಜೀವನವನ್ನು ಹಾಳು ಮಾಡುತ್ತೇನೆ ಎಂದು ಬೆದರಿಕೆ  ಹಾಕಿದ್ದಾನೆ.

ಜಗದೀಶನ ಬೆದರಿಕೆಯಿಂದ ಕಂಗಾಲಾದ ಕುಟುಂಬ ಪವಿತ್ರಾಳ ಮೃತದೇಹವನ್ನು ಬೆಂಗಳೂರಿಗೆ ತಂದು ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಬೆಂಗಳೂರಿನ ಸ್ಥಳೀಯ ನಿವಾಸಿಗಳು ಪವಿತ್ರಾಳ ಸಾವಿನ ಬಗ್ಗೆ ವಿಚಾರಿಸಿ  ಗಲಾಟೆ ತೆಗೆದಿದ್ದಾರೆ. ಆಗ ಸ್ಥಳಕ್ಕಾಗಮಿಸಿದ ಪೊಲೀಸರು ವಿಚಾರಿಸಿದಾಗ ಜಗದೀಶನ ಕೊಲೆ ಪುರಾಣ ಹೊರಗೆ ಬಂದಿದೆ. ಕೂಡಲೇ ಜಗದೀಶನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದು, ಆತ ತಪ್ಪೊಪ್ಪಿಗೆ ಹೇಳಿಕೆ  ನೀಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!