ನೂತನ ಪೊಲೀಸ್ ಆಯುಕ್ತ ಪ್ರವೀಣ್‌ ಸೂದ್ ಹಾಗೂ ನಿರ್ಗಮಿತ ಆಯುಕ್ತ ಎನ್ ಎಸ್ ಮೇಘರಿಕ್ 
ರಾಜ್ಯ

ಜನ ಸ್ನೇಹಿ ಪೊಲೀಸ್ ವ್ಯವಸ್ಥೆಗೆ ಒತ್ತು: ನೂತನ ಪೊಲೀಸ್ ಆಯುಕ್ತ ಪ್ರವೀಣ್ ಸೂದ್

ಬೆಂಗಳೂರಿನಲ್ಲಿ ಜನ ಸ್ನೇಹಿ ಪೊಲೀಸ್ ವ್ಯವಸ್ಥೆಗೆ ಒತ್ತು ನೀಡುವುದಾಗಿ ನೂತನ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು ಹೇಳಿದ್ದಾರೆ.

ಬೆಂಗಳೂರು: ಬೆಂಗಳೂರಿನಲ್ಲಿ ಜನ ಸ್ನೇಹಿ ಪೊಲೀಸ್ ವ್ಯವಸ್ಥೆಗೆ ಒತ್ತು ನೀಡುವುದಾಗಿ ನೂತನ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು ಹೇಳಿದ್ದಾರೆ.

ಹೊಸ ವರ್ಷದ ಮೊದಲ ದಿನವೇ ರಾಜಧಾನಿ ಬೆಂಗಳೂರು ಪೊಲೀಸರ ನೂತನ ಸಾರಥಿಯಾಗಿ ಹಿರಿಯ ಐಪಿಎಸ್‌ ಅಧಿಕಾರಿ ಪ್ರವೀಣ್‌ ಸೂದ್‌ ಅವರು ಅಧಿಕಾರ ಸ್ವೀಕರಿಸಿದರು. ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಭಾನುವಾರ  ನಡೆದ ಸರಳ ಸಮಾರಂಭದಲ್ಲಿ ನಿರ್ಗಮಿತ ಪೊಲೀಸ್‌ ಆಯುಕ್ತ ಎನ್‌.ಎಸ್‌. ಮೇಘರಿಕ್‌ ಅವರಿಂದ "ಬ್ಯಾಟನ್‌' ಪಡೆಯುವ ಮೂಲಕ ಪ್ರವೀಣ್ ಸೂದ್ ಅವರು ಅಧಿಕಾರ ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಪ್ರವೀಣ್ ಸೂದ್ ಅವರು, ಬೆಂಗಳೂರು ನಾಗರೀಕರನ್ನೂ ಒಳಗೊಂಡ ಜನಸ್ನೇಹಿ ಪೊಲೀಸ್ ವ್ಯವಸ್ತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ  ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸುವುದೇ ತಮ್ಮ ಗುರಿಯಾಗಿದ್ದು, ಇದಕ್ಕೆ ನಾಗರಿಕರ ಸಹಕಾರ ಕೂಡ ಅತ್ಯಗತ್ಯ ಎಂದು ಹೇಳಿದರು. ಇನ್ನು ಬೆಂಗಳೂರು ನಾಗರಿಕರನ್ನು ಪ್ರತಿನಿತ್ಯ ಬಾದಿಸುತ್ತಿರುವ ಟ್ರಾಫಿಕ್  ಸಮಸ್ಯೆಗೆ ಆದ್ಯತೆ ನೀಡಲಾಗುವುದು. ಕೇವಲ ದಂಡ ಸಂಗ್ರಹವೇ ನಮ್ಮ ಗುರಿಯಲ್ಲ. ನಾಗರಿಕರು ಕೂಡ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು ಎಂದು ಸೂದ್ ಮನವಿ ಮಾಡಿದರು. ಅಂತೆಯೇ ಮಹಿಳೆ ಮತ್ತು ಮಕ್ಕಳ ಮೇಲಿನ  ದೌರ್ಜನ್ಯ ತಡೆಯುವ ಸಲುವಾಗಿ ಹೆಚ್ಚುವರಿ ವೀಕ್ಷಣಾ ತಂಡಗಳನ್ನು ನಿಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಭಾನುವಾರ ಬೆಳಗ್ಗೆ 11.30 ರ ಹೊತ್ತಿಗೆ ಆಯುಕ್ತರ ಕಚೇರಿಗೆ ಆಗಮಿಸಿದ ಪ್ರವೀಣ್‌ ಸೂದ್‌ ಅವರಿಗೆ ನಿರ್ಗಮಿತ ಆಯುಕ್ತ ಮೇಘರಿಕ್‌ ಅಧಿಕಾರ ಹಸ್ತಾಂತರಿಸಿ ಶುಭಕೋರಿ ತೆರಳಿದರು. ಆನಂತರ ಹಿರಿಯ ಅಧಿಕಾರಿಗಳ ಜತೆ  ಅನೌಪಚಾರಿಕವಾಗಿ ಸಭೆ ನಡೆಸಿದ ನೂತನ ಆಯುಕ್ತ ಸೂದ್ ಅವರು, ಅಧಿಕಾರಿ ಮತ್ತು ಸಿಬ್ಬಂದಿ ವರ್ಗದಿಂದ ಅಭಿನಂದನೆ ಸ್ವೀಕರಿಸಿದರು. ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಹೊಸ ವರ್ಷದ ಶುಭಾಶಯ ಕೋರಿದ  ಪ್ರವೀಣ್‌ ಸೂದ್‌, ಮಧ್ಯಾಹ್ನ 2 ಗಂಟೆಗೆ ಡಿಜಿಪಿ ಓಂಪ್ರಕಾಶ್‌ ಅವರನ್ನು ಭೇಟಿಯಾದರು. ಅಧಿಕಾರ ಸ್ವೀಕಾರಕ್ಕೂ ಮುನ್ನ ಬೆಳಗ್ಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹಾಗೂ ಗೃಹ ಸಚಿವರ  ಸಲಹೆಗಾರ ಕೆಂಪಯ್ಯ ಅವರಿಗೂ ನೂತನ ವರ್ಷದ ಶುಭ ಕೋರಿದರು.

ಇದೇ ವೇಳೆ ಆಯುಕ್ತರೊಂದಿಗೆ ಮೂವರು ನೂತನ ಹೆಚ್ಚುವರಿ ಆಯುಕ್ತರು ಸಹ ಅಧಿಕಾರ ಸ್ವೀಕರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ