ಸಾಂದರ್ಭಿಕ ಚಿತ್ರ 
ರಾಜ್ಯ

ಪದವಿ ಕಾಲೇಜು ಕ್ಯಾಂಪಸ್ ಗಳಿಗೆ ಹೊರಗಿನವರಿಗೆ ಮುಕ್ತ ಪ್ರವೇಶವಿಲ್ಲ: ಕಾಲೇಜು ಶಿಕ್ಷಣ ಇಲಾಖೆ ನಿಯಮ

ಇನ್ನು ಮುಂದೆ ರಾಜ್ಯದ ಡಿಗ್ರಿ ಕಾಲೇಜು ಕ್ಯಾಂಪಸ್ ಗಳ ಒಳಗೆ ಪ್ರವೇಶಿಸುವವರು ಪ್ರಾಂಶುಪಾಲರ...

ಬೆಂಗಳೂರು: ಇನ್ನು ಮುಂದೆ ರಾಜ್ಯದ ಡಿಗ್ರಿ ಕಾಲೇಜು ಕ್ಯಾಂಪಸ್ ಗಳ ಒಳಗೆ ಪ್ರವೇಶಿಸುವವರು ಪ್ರಾಂಶುಪಾಲರ ಸಮ್ಮತಿ ತೆಗೆದುಕೊಳ್ಳದೆ ಒಳಹೋದರೆ ಹತ್ತಿರದ ಪೊಲೀಸ್ ಸ್ಟೇಷನ್ ಗೆ ಹೋಗಬೇಕಾಗುತ್ತದೆ. 
ಡಿಗ್ರಿ ಕಾಲೇಜುಗಳಲ್ಲಿ ಅಧ್ಯಯನ ಮಾಡುವ ಹೆಣ್ಣು ಮಕ್ಕಳ  ರಕ್ಷಣೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಕಾಲೇಜು ಶಿಕ್ಷಣ ಇಲಾಖೆ, ಕಾಲೇಜು ಕ್ಯಾಂಪಸ್ ಒಳಗೆ ಹೊರಗಿನವರು ಪ್ರವೇಶಿಸಬಾರದೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈ ಸಂಬಂಧ ಅಧಿಕೃತ ಪ್ರಕಟಣೆ ಸದ್ಯದಲ್ಲಿಯೇ ಕಾಲೇಜುಗಳನ್ನು ತಲುಪಲಿದೆ.
ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಡಾ.ಅಜಯ್ ನಾಗಭೂಷಣ ಮಾತನಾಡಿ, ಕ್ಯಾಂಪಸ್ ಗಳಲ್ಲಿ ಹುಡುಗಿಯರ ರಕ್ಷಣೆಗಾಗಿ ಈ ಕಾನೂನು ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
ಖಾಸಗಿ ಕಾಲೇಜುಗಳು ಸೂಕ್ತ ಭದ್ರತೆಗಳನ್ನು ಒಳಗೊಂಡಿರುತ್ತವೆ.ಹೆಚ್ಚಿನ ಉನ್ನತ ಮಟ್ಟದ ಕಾಲೇಜುಗಳಲ್ಲಿ ಸಿಸಿಟಿವಿ ಕ್ಯಾಮರಾ ಮತ್ತು ಭದ್ರತಾ ಸಿಬ್ಬಂದಿಗಳಿರುತ್ತಾರೆ. ಆದರೆ ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಸರ್ಕಾರಿ ಕಾಲೇಜುಗಳಲ್ಲಿ ಸರಿಯಾದ ಭದ್ರತೆ ಸೂಕ್ತ ರಕ್ಷಣೆಗಳಿರುವುದಿಲ್ಲ. ಇದುವರೆಗೆ ಕಾಲೇಜು ಆಡಳಿತ ವರ್ಗ ಅಥವಾ ವಿದ್ಯಾರ್ಥಿಗಳ ಕಡೆಯಿಂದ ನಿರ್ದಿಷ್ಟ ದೂರುಗಳು ಬಂದಿಲ್ಲ. ಆದರೂ ಕೂಡ ಮುಂದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಕೆಲವು ಕಾಲೇಜುಗಳಲ್ಲಿ ಸರಿಯಾದ ಕಂಪೌಂಡ್ ಗಳೇ ಇರುವುದಿಲ್ಲ. ಈ ಬಗ್ಗೆ ಕೂಡಲೇ ಗಮನಹರಿಸಿ ಅಭಿವೃದ್ಧಿ ನಿಧಿಯಡಿ ಕಾಲೇಜು ಕ್ಯಾಂಪಸ್ ಗಳಿಗೆ ಭದ್ರತೆ ನೀಡಬೇಕೆಂದು ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ವಿದ್ಯಾರ್ಥಿಗಳು ಕಾಲೇಜು ಅವಧಿಯಲ್ಲಿ, ಕ್ಯಾಂಪಸ್ ಒಳಗೆ ಗುರುತು ಪತ್ರವನ್ನು ಕಡ್ಡಾಯವಾಗಿ ಧರಿಸಬೇಕೆಂದು ಇಲಾಖೆ ಕಾನೂನು ಹೊರಡಿಸಲಿದೆ.
 ಕರ್ನಾಟಕ ರಾಜ್ಯದಲ್ಲಿ 411 ಸರ್ಕಾರಿ ಡಿಗ್ರಿ ಕಾಲೇಜುಗಳಿದ್ದು 3.04 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ 1.737 ಲಕ್ಷ ಹುಡುಗಿಯರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT