ರಾಜ್ಯ

ಕೆ.ಜಿ.ಹಳ್ಳಿ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿ ಇರ್ಷಾದ್ ಬಂಧನ

Manjula VN

ಬೆಂಗಳೂರು: ಹೆಚ್'ಬಿಆರ್ ಲೇಔಟ್'ನಲ್ಲಿ ನಡೆದಿದೆ ಎನ್ನಲಾಗಿದ್ದ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.

ಇರ್ಷಾದ್ ಬಂಧಿತ ಆರೋಪಿಯೆಂದು ಗುರ್ತಿಸಲಾಗಿದೆ. ಬಂಧಿತ ಆರೋಪಿ ಯುವತಿಯ ಸಂಬಂಧಿಯೇ ಆಗಿದ್ದಾನೆಂದು ಮೂಲಗಳಿಂದ ತಿಳಿದುಬಂದಿದೆ.

ಹೆಚ್ ಬಿಆರ್ ಲೇಔಟ್ ನಲ್ಲಿ ಬುರ್ಖಾ ತೊಟ್ಟಿದ್ದ ಯುವತಿ ಕಾಲೇಜಿಗೆ ಹೋಗುತ್ತಿದ್ದಳು. ಈ ವೇಳೆ ಯುವತಿಯನ್ನು ಹಿಂಬಾಲಿಸಿದ್ದ ಯುವಕನೊಬ್ಬ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ವೇಳೆ ಯುವತಿಯ ಕೈ ಹಾಗೂ ತುಟಿಗೆ ಗಾಯವಾಗಿತ್ತು.

SCROLL FOR NEXT