ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಎಎಂಸಿ ಕಾಲೇಜು ಬಳಿ ಅರೆನಗ್ನ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ನಿನ್ನೆ ಪತ್ತೆಯಾಗಿದೆ.
ಸುಮಾರು 35ರಿಂದ 40 ವರ್ಷ ವಯಸ್ಸಿನ ಮಹಿಳೆಯ ದೇಹದಲ್ಲಿ ಒಳ ಉಡುಪು ಬಿಟ್ಟರೆ ಬೇರೆ ಬಟ್ಟೆಯಿರಲಿಲ್ಲ. ಶವ ಮುಖ್ಯ ರಸ್ತೆಯಿಂದ 10 ಅಡಿ ದೂರದಲ್ಲಿ ಅನಾಥವಾಗಿ ಬಿದ್ದಿತ್ತು. ದಾರಿಹೋಕರ ಮೂಲಕ ನಿನ್ನೆ ಬೆಳಗ್ಗೆ 10 ಗಂಟೆ ಸುಮಾರಿಗೆ ವಿಷಯ ಪೊಲೀಸರಿಗೆ ಗೊತ್ತಾಗಿದೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಹಿಳೆಯನ್ನು ವಿಷಯ ಗೊತ್ತಾಗುವ 10-12 ಗಂಟೆ ಮೊದಲು ಕೊಂದು ಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಇದುವರೆಗೆ ಯಾರೂ ದೂರು ನೀಡಿಲ್ಲ. ಆಕೆ ಬೆಂಗಳೂರು ಅಥವಾ ಬೇರೆ ಪ್ರದೇಶದ ಮಹಿಳೆಯಾಗಿರಬಹುದು, ಕೊಂದು ಶವವನ್ನು ಇಲ್ಲಿ ಎಸೆದು ಹೋಗಿರಬಹುದು. ದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ. ಶವ ಪತ್ತೆಯಾದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮಹಿಳೆಯ ರಾತ್ರಿ ಧರಿಸುವ ಬಟ್ಟೆ ಸಿಕ್ಕಿದೆ. ಬಲಗೈಯಲ್ಲಿ ಟ್ಯಾಟುವಿನಲ್ಲಿ ಬಿಜೈ ಎಂದು ಬರೆಯಲಾಗಿದೆ ಎಂದು ಪೊಲೀಸರು ವಿವರಿಸುತ್ತಾರೆ.
ಮಹಿಳೆಯನ್ನು ಕೊಲ್ಲುವ ಮುಂಚೆ ಅತ್ಯಾಚಾರವೆಸಗಿರಬಹುದು ಎಂಬ ವದಂತಿಯಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಬನ್ನೇರುಘಟ್ಟ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics