ರಾಜ್ಯ

ಸೂರ್ಯರಶ್ಮಿ ಪ್ರವೇಶದ ವಿಸ್ಮಯ ಘಳಿಗೆಗೆ ಸಾಕ್ಷಿಯಾದ ಗವಿ ಗಂಗಾಧರೇಶ್ವರ

Sumana Upadhyaya
ಬೆಂಗಳೂರು: ಇಲ್ಲಿನ ಪ್ರಖ್ಯಾತ ಗವಿ ಗಂಗಾಧರೇಶ್ವರ ದೇವಾಲಯದ ಬಲಭಾಗ ಕಿಂಡಿಯಿಂದ ಸೂರ್ಯರಶ್ಮಿ ಪ್ರವೇಶಿಸಿ ಶಿವಲಿಂಗದ ಪಾದವನ್ನು ಸ್ಪರ್ಶಿಸಿತು. ಇಂದು ಸಂಜೆ 5.19ಕ್ಕೆ ಸೂರ್ಯರಶ್ಮಿ ನಂದಿಯ ಕೊಂಬಿನ ಸುತ್ತ ಹರಿದು ಶಿವಲಿಂಗದ ಪಾದವನ್ನು ಸ್ಪರ್ಶಿಸಿದೆ. ಶಿವಲಿಂಗಕ್ಕೆ ಹೆಚ್ಚಿನ ಶಾಖ ಉಂಟಾಗಬಾರದೆಂದು ಅರ್ಚಕರು ಹಾಲಿನ ಅಭಿಷೇಕ ನೆರವೇರಿಸಿದರು.  ಈ ವಿಸ್ಮಯಕಾರಿ ಘಳಿಗೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಮಕರ ಸಂಕ್ರಮಣದ ದಿನ ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ತನ್ನ ಪಥವನ್ನು ಬದಲಿಸುತ್ತಾನೆ. ಈ ಸಂದರ್ಭದಲ್ಲಿ ಸಂಪೂರ್ಣ ಸೂರ್ಯನ ಬೆಳಕನ್ನು ಭಕ್ತರು ಸವಿಯುವುದಕ್ಕೋಸ್ಕರ ಈ ಸಂದರ್ಭದಲ್ಲಿ ಶಿವಲಿಂಗಕ್ಕೆ ಯಾವುದೇ ಅಲಂಕಾರ ಮಾಡುವುದಿಲ್ಲ. ದೇವಾಲಯದ ಹೊರಗೆ ಪರದೆಗಳಲ್ಲಿ ಸೂರ್ಯರಶ್ಮಿ ಬೀಳುವುದರ ನೇರ ಪ್ರಸಾರದ ವ್ಯವಸ್ಥೆ ಮಾಡಿರುತ್ತಾರೆ.  ವರ್ಷಕ್ಕೆ ಒಂದೇ ಒಂದು ದಿನ ಮಕರ ಸಂಕ್ರಾಂತಿಯಂದು ನಡೆಯುವ  ಅತ್ಯಂತ ಕೌತುಕದ ಘಳಿಗೆಯಿದು. 
ಗವಿಗಂಗಾಧರೇಶ್ವರ ದೇವಾಲಯದಲ್ಲಿ ಇಂದು ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ ನಡೆಯುತ್ತಲೇ ಸಾಗಿದೆ.
SCROLL FOR NEXT