ಎಸ್ ಎಲ್ ಭೈರಪ್ಪನವರ ನೂತನ ಕಾದಂಬರಿ 'ಉತ್ತರಕಾಂಡ' 
ರಾಜ್ಯ

ಎಸ್ ಎಲ್ ಭೈರಪ್ಪನವರ ಹೊಸ ಕಾದಂಬರಿ 'ಉತ್ತರಕಾಂಡ' ಭರ್ಜರಿ ಮಾರಾಟ

ಕನ್ನಡದ ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರ ನೂತನ ಕಾದಂಬರಿ 'ಉತ್ತರಕಾಂಡ' ಸೋಮವಾರ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು ಅಭೂತಪೂರ್ವ ಯಶಸ್ಸು ಕಂಡಿದೆ.

ಬೆಂಗಳೂರು: ಕನ್ನಡದ ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರ ನೂತನ ಕಾದಂಬರಿ 'ಉತ್ತರಕಾಂಡ' ಸೋಮವಾರ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು ಅಭೂತಪೂರ್ವ ಯಶಸ್ಸು ಕಂಡಿದೆ. 
ಮೊದಲ ದಿನವೇ 'ಉತ್ತರಕಾಂಡ' ಪುಸ್ತಕದ ಮೊದಲ ಆವೃತ್ತಿ ಬಿಕರಿಯಾಗಿವೆ ಎಂದು ತಿಳಿಸುತ್ತಾರೆ ಪುಸ್ತಕದ ಪ್ರಕಾಶಕರಾದ ಸಾಹಿತ್ಯ ಭಂಡಾರದ ರಾಜು. ಮಾರುಕಟ್ಟೆಯಲ್ಲಿ ವಿತರಕರು, ಮಾರಾಟಗಾರರಿಂದ ಭಾರಿ ಬೇಡಿಕೆ ಬಂದಿದ್ದು, ಪುಸ್ತಕಗಳ ಪೂರೈಕೆ ವ್ಯತಯ ಕೂಡ ಆಗುತ್ತಿದೆ. 
ಸಾಮಾಜಿಕ ಜಾಲತಾಣಗಳಲ್ಲಿ ಪುಸ್ತಕ ಪಡೆದ ಓದುಗ ಅಭಿಮಾನಿಗಳು, ಪುಸ್ತಕದ ಜೊತೆಗೆ ಸೆಲ್ಫಿ ತೆಗೆದು ಪ್ರಕಟಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. 
ರಾಮಾಯಣದ ಒಂದು ಭಾಗವಾಗಿರುವ 'ಉತ್ತರಕಾಂಡ'ವನ್ನು ಕಾದಂಬರಿ ರೂಪಕ್ಕೆ ಇಳಿಸಿದ್ದಾರೆ ಭೈರಪ್ಪ. ಈ ಹಿಂದೆ ಮಹಾಭಾರತವನ್ನು ಕೂಡ ಕಾದಂಬರಿ ರೂಪದಲ್ಲಿ ಬರೆದಿದ್ದ 'ಪರ್ವ' ಭಾರಿ ಜನಪ್ರಿಯತೆ ಪಡೆದಿತ್ತು ಮತ್ತು  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಗಳಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ