ರಾಜ್ಯ

ದೃಶ್ಯ ಮಾಧ್ಯಮ ಶಿಕ್ಷಣ, ಉದ್ಯಮ ನಿರೀಕ್ಷೆ ವಿಷಯದಲ್ಲಿ ಪ್ರಶಾಂತ್ ಜಿ.ಎಂ ಗೆ ಪಿಹೆಚ್ ಡಿ: ಪಠ್ಯಕ್ರಮ ಸುಧಾರಣೆಗೆ ನೆರವಾಗಲಿರುವ ಪ್ರಬಂಧ

Srinivas Rao BV
ಬೆಂಗಳೂರು: ಪ್ರಶಾಂತ್ ಜಿ.ಎಂ ದೃಶ್ಯ ಮಾಧ್ಯಮ ಶಿಕ್ಷಣ, ಉದ್ಯಮ ನಿರೀಕ್ಷೆ (Visual Media Education credentials and Industry expections) ವಿಷಯವಾಗಿ ಪ್ರಬಂಧ ಮಂಡಿಸಿದ್ದು, ಮಣಿಪಾಲ್ ವಿಶ್ವವಿದ್ಯಾನಿಲಯದಿಂದ  ಪಿಹೆಚ್ ಡಿ ಪದವಿ ಪಡೆದಿದ್ದಾರೆ. 
ಟಿವಿ ಹಾಗೂ ಚಲನಚಿತ್ರಗಳಿಗೆ ಸಂಬಂಧಿಸಿದ ವಿಷಯದಲ್ಲಿ ಯುವ ಆಕಾಂಕ್ಷಿಗಳಿಗೆ ತರಬೇತಿ ನೀಡಲು ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ರಚನಾತ್ಮಕ ಸಂಶೋಧನೆಯನ್ನು ಆಧರಿಸಿದ ಪಠ್ಯಕ್ರಮದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ದೃಶ್ಯ ಮಾಧ್ಯಮ ಶಿಕ್ಷಣ, ಉದ್ಯಮದ ಕುರಿತಾಗಿ ಮಂಡನೆ ಮಾಡಲಾಗಿರುವ ಪ್ರಬಂಧ ಮಹತ್ವ ಪಡೆದುಕೊಂಡಿದೆ. 
ಪ್ರಸ್ತುತ ಪತ್ರಿಕೋದ್ಯಮ ಶಿಕ್ಷಣ ನೀಡುವ ಭಾರತದಾದ್ಯಂತ ಇರುವ ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜ್ ಗಳಲ್ಲಿ ಆಡಿಯೊ ವಿಷುಯಲ್ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಬಗ್ಗೆ ಅತ್ಯಂತ ಕಡಿಮೆ ಅಂಶಗಳನ್ನು ಬೋಧಿಸಲಾಗುತ್ತಿದ್ದು, ಮಾಧ್ಯಮ ಶಿಕ್ಷಣದ ಕ್ರಿಯಾತ್ಮಕ, ತಾಂತ್ರಿಕ, ತಾಂತ್ರಿಕೇತರ ಹಾಗೂ ಮ್ಯಾನೇಜ್ ಮೆಂಟ್ ವಿಭಾಗಗಳಿಗೆ ಡಾ.ಪ್ರಶಾಂತ್ ಜಿ.ಎಂ ಅವರ ಅಧ್ಯಯನ ಉಪಯುಕ್ತವಾಗಿದೆ. 
ಈಗಿನ ಪಠ್ಯಕ್ರಮ ಪ್ರಾಯೋಗಿಕ ಅಂಶಗಳನ್ನು ಬೋಧಿಸುವಲ್ಲಿ ಹಿಂದುಳಿದಿದ್ದು, ಮಾಧ್ಯಮ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಉದ್ಯೋಗಕ್ಕೆ ಸರಿ ಹೊಂದುವ ಪರಿಣಿತಿಯನ್ನು ಸಾಧಿಸಲು ವಿಫಲರಾಗುತ್ತಿದ್ದು, ಶೈಕ್ಷಣಿಕ ಅಂಶಗಳಲ್ಲಿ ಉಂಟಾಗುತ್ತಿರುವ ಕೊರತೆಯನ್ನು ತಿಳಿಯುವ ನಿಟ್ಟಿನಲ್ಲಿ ಮಾಧ್ಯಮ ವಿದ್ಯಾರ್ಥಿಗಳು, ಬೋಧಕ ವರ್ಗ ಹಾಗೂ ಮಾಧ್ಯಮ ವೃತ್ತಿಪರರಿಂದಲೂ ಡಾ.ಪ್ರಶಾಂತ್ ಅಭಿಪ್ರಾಯ ಸಂಗ್ರಹಿಸಿದ್ದು, ಪದವಿ, ಸ್ನಾತಕೋತ್ತರ, ಡಿಪ್ಲಮಾ ಕೋರ್ಸ್ ಗಳಿಗೆ ರಚನಾತ್ಮಕ  ಪಠ್ಯಕ್ರಮದ ಅಗತ್ಯತೆಯನ್ನು ಮನಗಂಡಿದ್ದಾರೆ. 
ಏಷ್ಯಾ ಹಾಗೂ ಭಾರತದಲ್ಲಿ ಇದೇ ಮೊದಲ ಬಾರಿಗೆ ಮಾಧ್ಯಮ ಶಿಕ್ಷಣಕ್ಕೆ ಸಂಬಂಧಿಸಿದಂತೆ ತಾಂತ್ರಿಕವಾಗಿ ನಡೆದಿರುವ ಆಳವಾದ ಅಧ್ಯಯನ ಇದಾಗಿದ್ದು, ಮಣಿಪಾಲ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಕಮ್ಯುನಿಕೇಷನ್ ನ ನಿರ್ದೇಶಕರಾದ ಡಾ.ನಂದಿನಿ ಲಕ್ಷ್ಮೀಕಾಂತ ಪಿಹೆಚ್ ಡಿಗೆ ಮಾರ್ಗದರ್ಶನ ನೀಡಿದ್ದಾರೆ. 
SCROLL FOR NEXT