ಪತ್ರಿಕಾಗೋಷ್ಠಿಯಲ್ಲಿ ಕಿಶೋರ್ ಚಂದ್ರ ಹಾಗೂ ಪ್ರತಾಪ್ ರೆಡ್ಡಿ
ಬೆಂಗಳೂರು: ಅಗ್ರಿ ಗೋಲ್ಡ್ ಹಾಗೂ ಸೆವೆನ್ ಹಿಲ್ಸ್ ಸೇರಿದಂತೆ 10 ಪ್ರತಿಷ್ಠಿತ ಕಂಪೆನಿಗಳು ಕಡಿಮೆ ಮೊತ್ತಕ್ಕೆ ನಿವೇಶನ ನೀಡುವುದಾಗಿ ಹೇಳಿ ಸಾರ್ವಜನಿಕರಿಗೆ ಸುಮಾರು 3,450 ಕೋಟಿ ರು. ವಂಚಿಸಿವೆ ಎಂದು ಸಿಐಡಿ ಪೊಲೀಸ್ ಮಹಾನಿರ್ದೇಶಕ( ಡಿಜಿಪಿ) ಕಿಶೋರ್ ಚಂದ್ರ ಹಾಗೂ ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿ ಅವರು ಶನಿವಾರ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಿಶೋರ್ ಚಂದ್ರ ಅವರು, ಸಾರ್ವಜನಿಕರಿಗೆ ವಂಚಿಸಿದ ಕಂಪನಿಗಳ ಹೆಸರುಗಳನ್ನು ಹಾಗೂ ಆ ಕಂಪನಿಗಳು ಲಪಟಾಯಿಸಿದ ಹಣದ ಮೊತ್ತದ ವಿವರಗಳನ್ನು ನೀಡಿದರು.
ವಂಚನೆ ನಡೆಸಿರುವ 10 ಕಂಪನಿಗಳ ವಿರುದ್ದ ಇಲ್ಲಿಯವರೆಗೆ ೪೨೨ ಪ್ರಕರಣಗಳನ್ನು ದಾಖಲಿಸಿ 100 ಮಂದಿಯನ್ನು ಬಂಧಿಸಲಾಗಿದೆ ಎಂದು ಸಿಐಡಿ ಎಂದು ಕಿಶೋರ್ ಚಂದ್ರ ಅವರು ತಿಳಿಸಿದರು.
ಕಳೆದ ೨೦೧೩-೧೬ರೊಳಗೆ ೧೦ ಸಂಸ್ಥೆಗಳ ವಿರುದ್ಧ ದಾಖಲಾಗಿದ್ದ ೪೨೨ ಪ್ರಕರಣಗಳನ್ನು ಸಿಐಡಿ ತನಿಖೆ ಮಾಡುತ್ತಿದೆ. ಈವರೆಗಿನ ಮಾಹಿತಿಯಂತೆ ೧೭,೯೩.೪೮೦ ಸಾರ್ವಜನಿಕರು ೩೨೭೩ ಕೋಟಿ ರು.ಗಳನ್ನು ಈ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವುದು ತಿಳಿದು ಬಂದಿದೆ ಎಂದರು.
ಸಾಮಾಜಿಕ ಜಾಲತಾಣಗಳ ಮೂಲಕ ಹೂಡಿಕೆಗೆ ಸಾರ್ವಜನಿಕರನ್ನು ಪ್ರೇರೇಪಿಸುತ್ತಿದ್ದ ಈ ಕಂಪನಿಗಳು ಈಗಾಗಲೇ ಹಲವಾರು ಜನರಿಗೆ ಟೋಪಿ ಹಾಕಿವೆ. ಇಂಜಿನಿಯರ್‌ಗಳು, ಸರ್ಕಾರಿ ನೌಕರರು, ನಿವೃತ್ತ ಅಧಿಕಾರಿಗಳು, ಮಹಿಳೆಯರು ಸೇರಿದಂತೆ ಹಲವಾರು ಪ್ರಜ್ಞಾವಂತರೇ ಹಣ ಕಳೆದುಕೊಂಡಿದ್ದಾರೆ ಎಂದು ವಿವರಿಸಿದರು. ಅಲ್ಲದೆ ಇವುಗಳಲ್ಲಿ ಹಣ ಹೂಡಿಕೆ ಮಾಡಿ ಬಹಳಷ್ಟು ಮಂದಿ ಮೋಸ ಹೋಗಿದ್ದಾರೆ. ಕೆಲವರು ಮಾತ್ರ ದೂರು ಕೊಟ್ಟಿದ್ದಾರೆ. ದೂರು ಕೊಡದೇ ಇರುವವರು ಹತ್ತಿರದ ಪೊಲೀಸ್ ಠಾಣೆಗಾಗಲಿ ಅಥವಾ ಸಿಐಡಿ ಆರ್ಥಿಕ ಅಪರಾಧಗಳ ವಿಭಾಗಕ್ಕಾಗಲ್ಲಿ ನೇರ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದರು.
ಸಾರ್ವಜನಿಕರಿಗೆ ವಂಚಿಸಿದ ೧೦ ಪ್ರತಿಷ್ಠಿತ ಕಂಪೆನಿಗಳು
ಅಗ್ರಿ ಗೋಲ್ಡ್- 1,640 ಕೋಟಿ ರು.
ಹಿಂದೂಸ್ಥಾನ್ ಇನ್ ಫ್ರಾಸ್ಟ್ರಕ್ಚರ್ - 389 ಕೋಟಿ ರು.
ಮೈತ್ರಿ ಪ್ಲಾಂಟೇಶನ್ - 9.82 ಕೋಟಿ ರು.
ಗ್ರೀನ್ ಬರ್ಡ್ ಆಗ್ರೋ ಫಾರಂ ಲಿಮಿಟೆಡ್ - 53 ಕೋಟಿ ರು.
ಹರ್ಷಾ ಎಂಟರ್ ಟೈನ್ ಮೆಂಟ್- 136 ಕೋಟಿ ರು.
ಡ್ರೀಮ್ಸ್ ಇನ್ ಫ್ರಾ - 573 ಕೋಟಿ ರು.
ಸೆವೆನ್ ಹಿಲ್ಸ್ - 81 ಕೋಟಿ ರು.