ರಾಜ್ಯ

ಉತ್ತರ-ದಕ್ಷಿಣ ಲೈನ್ ನಲ್ಲಿ ನಮ್ಮ ಮೆಟ್ರೊ ಪ್ರಯಾಣಕ್ಕೆ 55 ರೂಪಾಯಿ ನಿಗದಿ

Sumana Upadhyaya
ಬೆಂಗಳೂರು: ಉತ್ತರ ಕಾರಿಡಾರ್ ನಿಂದ ದಕ್ಷಿಣ ಕಾರಿಡಾರ್ ಗೆ ನಮ್ಮ ಮೆಟ್ರೊದಲ್ಲಿ ಪ್ರಯಾಣಿಸಲು ತಗಲುವ ವೆಚ್ಚ 55 ರೂಪಾಯಿಗಳೆಂದು ನಿಗದಿಪಡಿಸಲಾಗಿದೆ. 23.2 ಕಿಲೋ ಮೀಟರ್ ಉದ್ದವನ್ನು ಕ್ರಮಿಸಲು ನಮ್ಮ ಮೆಟ್ರೊದಲ್ಲಿ ನಿಗದಿಪಡಿಸಿರುವ ಅತಿ ಹೆಚ್ಚಿನ ದರ ಇದಾಗಿದೆ. ಪ್ರಸ್ತುತ ಇಡೀ ಪೂರ್ವ-ಪಶ್ಚಿಮ ಕಾರಿಡಾರ್ ನಲ್ಲಿ 18.1 ಕಿಲೋ ಮೀಟರ್ ಉದ್ದವನ್ನು ಕ್ರಮಿಸಲು ಅತಿ ಹೆಚ್ಚು ಟಿಕೆಟ್ ದರ 40 ರೂಪಾಯಿಯಾಗಿದೆ. 
ಈ ದರ ನಿಗದಿಯಿಂದ ಗ್ರೀನ್ ಲೈನ್ ನಲ್ಲಿ ಮೆಟ್ರೊ ರೈಲಿನಲ್ಲಿ 1 ಕಿಲೋ ಮೀಟರ್ ಪ್ರಯಾಣಿಸಲು(ನಾಗಸಂದ್ರದಿಂದ ಯಲಚೇನಹಳ್ಳಿ) 17 ಪೈಸೆಯಷ್ಟು ಹೆಚ್ಚಿಸಲಾಗುತ್ತದೆ.ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿಗೆ ಪರ್ಪಲ್ ಲೈನ್ ನಲ್ಲಿ ಸಂಚರಿಸಲು ಕಿಲೋ ಮೀಟರ್ ಗೆ ಪ್ರಸ್ತುತ 2 ರೂಪಾಯಿ.20 ಪೈಸೆಯಷ್ಟಿದ್ದು, ಅದು 2 ರೂಪಾಯಿ 37 ಪೈಸೆಯಾಗಲಿದೆ. 
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ನಮ್ಮ ಮೆಟ್ರೊದ ಪರಿಷ್ಕೃತ ದರದ ಬಗ್ಗೆ ಮಾತನಾಡಿದ ಅಧಿಕೃತ ಮೂಲಗಳು, ಬೈಯಪ್ಪನಹಳ್ಳಿಯಿಂದ ನಾಗಸಂದ್ರದವರೆಗೆ ಸಂಪೂರ್ಣ ಉತ್ತರ-ದಕ್ಷಿಣ ಕಾರಿಡಾರ್ ನ್ನು ಪ್ರಯಾಣಿಸಲು 55 ರೂಪಾಯಿ ಬೇಕಾಗುತ್ತದೆ.
ಬೈಯಪ್ಪನಹಳ್ಳಿಯಿಂದ ಯೆಲಚೆನಹಳ್ಳಿಯವರೆಗೆ ತಲುಪಲು 50 ರೂಪಾಯಿ ವೆಚ್ಚ ತಗಲುತ್ತದೆ. ಮೆಟ್ರೊದ ಎಲ್ಲಾ ಭಾಗಗಳಿಗೆ ಇರುವ ವಿವರವಾದ ಟಿಕೆಟ್ ದರದ ಚಾರ್ಟ್ ನ್ನು ಇನ್ನು ಕೆಲ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಪ್ರಸ್ತುತ ಮೆಟ್ರೊ ನಿಲ್ದಾಣಗಳ ಟರ್ಮಿನಲ್ ಗಳ(ಕೊನೆಯ ನಿಲ್ದಾಣ) ದರಗಳನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಿದರು.
SCROLL FOR NEXT