ರಾಜ್ಯ

ಕೇಂದ್ರದೊಂದಿಗೆ ರಾಜ್ಯ ಸಹಕರಿಸುತ್ತಿಲ್ಲ, ಗೋಯಲ್ ಹೇಳಿಕೆಗೆ ಡಿಕೆ ಶಿವಕುಮಾರ್ ಖಂಡನೆ

Shilpa D
ಬೆಂಗಳೂರು: ಕರ್ನಾಟಕ ಸರ್ಕಾರ ವಿದ್ಯುತ್ ಪ್ರಸರಣಾ ಯೋಜನೆಗಳಿಗೆ ಸರಿಯಾದ ಸಹಕಾರ ನೀಡುತ್ತಿಲ್ಲ, ಎಂಬ ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯೆಲ್ ವಿರುದ್ಧ ಅಸಮಾಧಾನಗೊಂಡಿರುವ ಸಚಿವ ಡಿ.ಕೆ ಶಿವಕುಮಾರ್, ರಾಜ್ಯ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಕೇಂದ್ರದ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ, ಆದರೆ ವಿದ್ಯುತ್ ಪ್ರಸರಣ ಮಾರ್ಗಗಳ ಅಳವಡಿಸುವ ವೇಳೆ ಈ ಭಾಗದ ರೈತರು, ಹೆಚ್ಚಿನ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದಾರೆ, ಹೀಗಾಗಿ ವಿಳಂಬವಾಗುತ್ತಿದೆ ಎಂದು ವಿವರಿಸಿದ್ದಾರೆ.. 
ಕರ್ನಾಟಕ ಪವರ್ ಕಂಪನಿ ಲಿಮಿಟೆಡ್ ಗೆ ಪರಿಹಾರ ನೀಡುವ ಹೊಣೆಗಾರಿಕೆಯಿದ್ದು, ಶೇ.15 ರಷ್ಟು ಮಾತ್ರ ಹಣ ನೀಡಬಲ್ಲದು, ಆದರೆ ಯಲಹಂಕ, ಸೋಮನಹಳ್ಳಿ, ಮತ್ತು ದೊಡ್ಡಬಳ್ಳಾಪುರ ಸುತ್ತ ಮುತ್ತ ಜಮೀನಿಗೆ ಅತಿ ಹೆಚ್ಚು ಬೆಲೆಯದೆ. ಹೀಗಾಗಿ ರೈತರು ಕಡಿಮೆ  ಹಣಕ್ಕೆ ಜಮೀನು ನೀಡಲು ನಿರಾಕರಿಸಿದ್ಡಾರೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ದರ ನೀಡುವಂತೆ ಪಿಕೆಸಿಎಲ್ ಗೆ ಮನವಿ ಮಾಡಿದ್ದೇವೆ, ಸಮಸ್ಯೆ ಬಗೆಹರಿಸಲು ನಾವು ಪ್ರತ್ನ ಪಡುತ್ತಿದ್ದೇವೆ ಎಂದು ಹೇಳಿರುವ ಶಿವಕುಮಾರ್, ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನೀಡುತ್ತೇವೆ ಎಂದು ಹೇಳಿದ ಅವರು. ಎಲ್ಲಾ ಆಸ್ತಿಗಳು ಕೇಂದ್ರ ಸರ್ಕಾರಕ್ಕೆ ಸೇರಿದ್ದು, ನಮಗೆ ಬಹಳ ಮುಖ್ಯ ಎಂದು ಹೇಳಿದ್ದಾರೆ. 
SCROLL FOR NEXT