ಬೆಂಗಳೂರು: ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಆಯುಷ್ ಕೋರ್ಸ್ ಗಳನ್ನು ಓದಲು ಇಚ್ಛಿಸುವ ರಾಜ್ಯದ ವಿದ್ಯಾರ್ಥಿಗಳು ಬೇರೆ ದಾರಿಯಿಲ್ಲದೆ ಎಂಜಿನಿಯರಿಂಗ್ ಸೀಟುಗಳನ್ನು ಪಡೆಯಬೇಕಾಗಿ ಬಂದಿದೆ. ಇದಕ್ಕೆ ಕಾರಣ ಸೀಟ್ ಮ್ಯಾಟ್ರಿಕ್ಸ್ ಸಿಗದಿರುವುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೃತ್ತಿಪರ ಪದವಿ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯುರ್ವೇದ, ಯುನಾನಿ, ಸಿದ್ದ ಮತ್ತು ಹೋಮಿಯೋಪತಿ ಕೋರ್ಸ್ ಗಳಿಗೆ ಸೀಟ್ ಮ್ಯಾಟ್ರಿಕ್ಸ್ ಪಡೆಯದಿರುವುದರಿಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಬೇರೆ ದಾರಿಯಿಲ್ಲದೆ ಎಂಜಿನಿಯರಿಂಗ್ ಸೀಟುಗಳನ್ನು ಪಡೆಯಬೇಕಾಗಿ ಬಂದಿದೆ. ಮೆಡಿಕಲ್ ಅಥವಾ ಡೆಂಟಲ್ ಸೀಟ್ ಪಡೆಯಲು ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ ರ್ಯಾಂಕಿಂಗ್ ನ್ನು ಪಡೆಯಬೇಕು. ಅದು ಈ ತಿಂಗಳ 26ಕ್ಕಿಂತ ಮೊದಲು ಪ್ರಕಟವಾಗುವುದಿಲ್ಲ. ಇದೇ 22ನೇ ತಾರೀಖು 6 ಗಂಟೆಯವರೆಗೆ ಅಭ್ಯರ್ಥಿಗಳು ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಮತ್ತು ಪಶುವೈದ್ಯ ಶಿಕ್ಷಣದಲ್ಲಿ ಆಯ್ಕೆಗಳನ್ನು ಮಾಡಿಕೊಳ್ಳಬಹುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೇ 23ರಂದು ಸಂಜೆ 4 ಗಂಟೆ ಸುಮಾರಿಗೆ ಅಣಕು ಹಂಚಿಕೆ(mock allotments) ಮಾಡಲಿದೆ.
ಕರ್ನಾಟಕದಲ್ಲಿ 76 ಕಾಲೇಜುಗಳು ಆಯುಷ್ ಕೋರ್ಸ್ ಗಳನ್ನು ನೀಡುತ್ತವೆ. ಅದರಲ್ಲಿ 5 ಸರ್ಕಾರಿ ಕಾಲೇಜುಗಳು, 5 ಖಾಸಗಿ ಅನುದಾನಿತ ಮತ್ತು ಉಳಿದವು ಖಾಸಗಿ ಅನುದಾನರಹಿತ ಕಾಲೇಜುಗಳಾಗಿವೆ.
ಮರುಪಾವತಿ ಇನ್ನೂ ಸಮಸ್ಯೆ: ವಿದ್ಯಾರ್ಥಿಗಳು ಸೀಟುಗಳನ್ನು ರದ್ದು ಮಾಡಿದರೆ ಕೆಲವು ಕಾಲೇಜುಗಳು ಶುಲ್ಕ ಮೊತ್ತವನ್ನು ಮರು ಪಾವತಿಸಿದರೆ ಇನ್ನು ಕೆಲವು ಮೂಲ ದಾಖಲೆಗಳನ್ನು ಹಾಗೆಯೇ ಇಟ್ಟುಕೊಳ್ಳುತ್ತವೆ. ವಿದ್ಯಾರ್ಥಿಗಳು ಸೀಟು ರದ್ದುಪಡಿಸಿದರೆ ಮೂಲ ದಾಖಲೆಗಳನ್ನು ಇಟ್ಟುಕೊಂಡು ಅವರಿಗೆ ಕಿರುಕುಳ ನೀಡಬಾರದೆಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಕಾಲೇಜುಗಳಿಗೆ ಹೇಳುತ್ತದೆ. ಆದರೆ ಆ ಸೂಚನೆಯನ್ನು ಪಾಲಿಸುವ ಕಾಲೇಜುಗಳು ವಿರಳ. ಕೆಲವು ಕಾಲೇಜುಗಳು ಶುಲ್ಕವನ್ನು ಕೂಡ ಹಿಂತಿರುಗಿಸುವುದಿಲ್ಲ.
ಆದರೆ ಕಾಲೇಜುಗಳು ಹೇಳುವುದು, ಸುಪ್ರೀಂ ಕೋರ್ಟ್ ಅವಧಿ ಮುಗಿದ ನಂತರ ವಿದ್ಯಾರ್ಥಿಗಳು ಸೀಟು ಹಿಂಪಡೆದರೆ ಆ ಸೀಟನ್ನು ಭರ್ತಿ ಮಾಡುವುದು ಹೇಗೆ? ಸಂಬಂಧಪಟ್ಟ ಕೋರ್ಸ್ ನ ಸೀಟು ಖಾಲಿಯಾಗಿರುತ್ತದೆ ಎನ್ನುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos