ಸಾಂದರ್ಭಿಕ ಚಿತ್ರ 
ರಾಜ್ಯ

ಕಳೆದ ವರ್ಷ ಆಸ್ತಿಗಳನ್ನು ಪರಿಶೀಲನೆ ಮಾಡದ ಬಿಬಿಎಂಪಿ

ತಮ್ಮ ಆಸ್ತಿಗಳ ನಿಜವಾದ ಅಳತೆಯನ್ನು ಸಲ್ಲಿಸುವಂತೆ ಅಥವಾ ನಿಗದಿಗಿಂತ ಮೌಲ್ಯ ಮಾಡಿರುವುದು....

ಬೆಂಗಳೂರು: ತಮ್ಮ  ಆಸ್ತಿಗಳ ನಿಜವಾದ ಅಳತೆಯನ್ನು ಸಲ್ಲಿಸುವಂತೆ ಅಥವಾ ನಿಗದಿಗಿಂತ ಮೌಲ್ಯ ಮಾಡಿರುವುದು ಕಡಿಮೆಯಾಗಿದ್ದರೆ ಕಡೆಯ ಬಾರಿಗೆ ಆಸ್ತಿಯ ನಿಜವಾದ ಮೌಲ್ಯದ ವರದಿ ನೀಡಲು ಕೊನೆಯ ಅವಕಾಶವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಐಟಿ, ಬಿಟಿ ಕಂಪೆನಿಗಳಿಗೆ, ವಾಣಿಜ್ಯ ಸಂಕೀರ್ಣಗಳು, ಟೆಕ್ ಪಾರ್ಕ್ ಮತ್ತು ನಗರದ ಆಸ್ತಿ ಮಾಲೀಕರಿಗೆ ಕಳೆದ ಡಿಸೆಂಬರ್ ನಲ್ಲಿ ಸೂಚಿಸಿತ್ತು.
ಕರ್ನಾಟಕ ನಗರ ಪಾಲಿಕೆ ಕಾಯ್ದೆ 1976ರ ಸೆಕ್ಷನ್ 110ರಡಿಯಲ್ಲಿ ಬಿಬಿಎಂಪಿ ಆಸ್ತಿಗಳ ಸ್ವೇಚ್ಛೆಯ ತಪಾಸಣೆ ಮಾಡಬಹುದು. ಅದು ನಿವಾಸದ್ದಾಗಿರಲಿ ಅಥವಾ ವಾಣಿಜ್ಯದ್ದಾಗಿರಲಿ 2000ನೇ ಇಸವಿಯಲ್ಲಿ ಜಾರಿಗೆ ಬಂದ ಸ್ವ-ಮೌಲ್ಯಮಾಪನ ಯೋಜನೆಯಡಿ ಅವುಗಳನ್ನು ಮತ್ತೆ ಅಳತೆ ಮಾಡಬಹುದು.
ಹೀಗೆ ಮಹಾನಗರ ಪಾಲಿಕೆ 2015ರಲ್ಲಿ ತಪಾಸಣೆ ಮಾಡಿತ್ತು. ಆದರೆ ನಗರದ ಶೇಕಡಾ 1 ಭಾಗವನ್ನು ಕೂಡ ಅದು ತಪಾಸಣೆ ಮಾಡಿರಲಿಲ್ಲ. 
ಬಿಬಿಎಂಪಿ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ಕೆ.ಗುಣಶೇಖರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿ,  ಈ ವರ್ಷ ಇನ್ನೂ  ಪರಿಶೀಲನೆ ಆರಂಭಿಸಿಲ್ಲ.ಮುಂದಿನ ತಿಂಗಳು ಆರಂಭಿಸುವ ಉದ್ದೇಶವಿದೆ. ಕಡಿಮೆ ಬೆಲೆಕಟ್ಟಿದ ಆಸ್ತಿಗಳ ಮಾಲೀಕರಿಗೆ ಸರಿಯಾದ ಮೌಲ್ಯ ಘೋಷಿಸುವಂತೆ ಕಳೆದ ಡಿಸೆಂಬರ್ ನಲ್ಲಿ ಆಸ್ತಿ ಮಾಲೀಕರಿಗೆ ಸೂಚಿಸಿದ್ದೆವು. ಜನವರಿ 14ರವರೆಗೆ ಆಸ್ತಿ ಮಾಲೀಕರಿಗೆ ತಮ್ಮ ಆಸ್ತಿಯ ನಿಜವಾದ ಮೌಲ್ಯವನ್ನು ಘೋಷಿಸಲು ಅವಕಾಶವಿತ್ತು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ