ಬೆಂಗಳೂರು: ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಎಸ್ ಎಸ್ಸಿ, ಎಸ್ ಟಿ ಜನಾಂಗದ 23 ಅಸಿಸ್ಟೆಂಟ್ ಎಂಜಿನೀಯರ್ ಗಳಿಗೆ ಸರ್ಕಾರ ನೀಡಿರುವ ಮೀಸಲಾತಿ ಆಧಾರದ ಬಡ್ತಿಗೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ಮಂಡಳಿ ವಿರೋಧ ವ್ಯಕ್ತ ಪಡಿಸಿದೆ, ಜೊತೆಗೆ ಸರ್ಕಾರ ಸಿದ್ದ ಪಡಿಸಿರುವ ಪಟ್ಟಿಯಲ್ಲಿ ಅಕ್ರಮವಾಗಿದೆ ಎಂದು ಹೇಳಿದೆ. ಹಾಗೂ ಎರಡು ತಿಂಗಳಲ್ಲಿ ಹೊಸದಾಗಿ ಪಟ್ಟಿ ಸಿದ್ದಪಡಿಸಬೇಕು ಎಂದು ಆದೇಶಿಸಿದೆ.
ಭಾಗಲಕೋಟೆ ಅಭಿವೃದ್ಧಿ ಪ್ರಾಧಿಕಾರ ಸಹಾಯಕ ಎಂಜಿನೀಯರ್ ಶರಣಬಸಪ್ಪ ಚಿತ್ತವಾಡಗಿ ಮತ್ತು ನಾಲ್ವರು ಎಂಜಿನೀಯರ್ ಗಳು ಮೇ 5 2016 ರ ಕರ್ನಾಟಕ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೆಎಟಿ ಸದಸ್. ಎ.ಪಿ ಜೋಶಿ ಜೂನ್ 9 ರಂದು ಈ ಆದೇಶ ಹೊರಡಿಸಿದ್ದಾರೆ.
23 ಸಹಾಯಕ ಎಂಜಿನೀಯರ್ ಗಳಿಗೆ ಎಇಇ ಗಳಾಗಿ ಬಡ್ತಿ ನೀಡಲಾಗಿದೆ. ಇವರೆಲ್ಲಾ 100 ರ್ಯಾಂಕಿಂಗ್ ಗಿಂತ ಕೆಳಗಿದ್ದು ಡಿಪ್ಲಮಾ ಎಂಜಿನೀಯರಿಂಗ್ ಮಾಡಿದ್ದಾರೆ, ಆದರೆ ಎಂಜಿನೀಯ್ ಪದವೀಧರರನ್ನು ಬಡ್ತಿಗೆ ಸೇವಾ ಹಿರಿತನದ ಆಧಾರವಾಗಿಸಿ ಕೊಂಡು ಪರಿಗಣಿಸಿಲ್ಲ ಎಂದು ಕೆಎಟಿ ಗೆ ಮನವಿ ಸಲ್ಲಿಸಿದ್ದರು.
23 ಎಂಜಿನೀಯರ್ ಗಳಿಗೆ ಬಡ್ತಿ ನೀಡಿ ಸರ್ಕಾರ ಮೇ 5 ರಂದು ಹೊರಡಿಸಿದ್ದ ಆದೇಶಕ್ಕೆ ಹಲವಾರು ವಿರೋಧ ವ್ಯಕ್ತವಾದ್ದರಿಂದ ಈ ಆದೇಶವನ್ನು ಜಾರಿಗೊಳಿಸಲಾಗಲಿಲ್ಲ, ಈ ಪ್ರಕರಣವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮತ್ತು ಕಾನೂನು ಇಲಾಖೆಗೆ ವಹಿಸಲಾಯಿತು.
ಸರ್ಕಾರಿ ನೌಕರಿಯಲ್ಲಿ ಬಡ್ತಿ ಮೀಸಲಾತಿ ವಿಧಾನ ಅನುಸರಿಸುವ ರಾಜ್ಯ ಸರ್ಕಾರದ 2002 ಕಾಯ್ದೆಯನ್ನು ಫೆ. 9ರಂದು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು.
ಆದೇಶ ಹೊರಡಿಸಿದ್ದ ದಿನಾಂಕದಿಂದ ಮೂರು ತಿಂಗಳೊಳಗೆ ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿ ಪಟ್ಟಿಯನ್ನು ಹೊಸದಾಗಿ ಸಿದ್ದಪಡಿಸುವಂತೆ ಸೂಚಿಸಿತ್ತು,