ಸಾಂಕೇತಿಕ ಚಿತ್ರ 
ರಾಜ್ಯ

ಕದ್ದ ಬೈಕಿನ ಪೆಟ್ರೋಲ್ ಖಾಲಿಯಾಯ್ತು; ಪೊಲೀಸರಿಗೆ ಸಿಕ್ಕಿಬೀಳಲು ಅಷ್ಟೇ ಸಾಕಿತ್ತು!

ಬೈಕನ್ನು ಕದ್ದ ಇಬ್ಬರು ಕಳ್ಳರು ಅದರಲ್ಲಿ ಪೆಟ್ರೋಲ್ ಖಾಲಿಯಾಗಿದ್ದ ಕಾರಣ ಹಿಂತಿರುಗಿಸಲು ನೋಡುತ್ತಿದ್ದ ಸಂದರ್ಭದಲ್ಲಿ...

ಬೆಂಗಳೂರು: ಬೈಕನ್ನು ಕದ್ದ ಇಬ್ಬರು ಕಳ್ಳರು ಅದರಲ್ಲಿ ಪೆಟ್ರೋಲ್ ಖಾಲಿಯಾಗಿದ್ದ ಕಾರಣ ಹಿಂತಿರುಗಿಸಲು ನೋಡುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಮೊನ್ನೆ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಇಬ್ಬರು ಮೇದಹಳ್ಳಿ ಸೇತುವೆ ಬಳಿ ಹೀರೋ ಮೆಸ್ಟ್ರೊ ಎಡ್ಜ್ ಬೈಕನ್ನು ತಳ್ಳಿಕೊಂಡು ಹೋಗುತ್ತಿರುವುದನ್ನು ಇಬ್ಬರು ಪೊಲೀಸರು ನೋಡಿದ್ದಾರೆ. ಅವರ ಬಗ್ಗೆ ಸಂಶಯ ಬಂದು ಪೊಲೀಸರು ಅವರ ಬಳಿ ಬಂದು ನೀವು ಎಲ್ಲಿಯವರು, ಬೈಕ್ ಎಲ್ಲಿಂದ ಎಂದೆಲ್ಲ ಪ್ರಶ್ನಿಸಿದ್ದಾರೆ. ಅಲ್ಲದೆ ಬೈಕಿನಲ್ಲಿ ಕೀ ಇಲ್ಲದಿರುವುದನ್ನು ಪೊಲೀಸರು ಗಮನಿಸಿದರು. ಪೊಲೀಸರು ಬೈಕಿನ ದಾಖಲೆಗಳನ್ನು ಕೇಳಿದಾಗ  ಅವರ ಬಳಿ ಇರಲಿಲ್ಲ. 
ಕೂಡಲೇ ಕಳ್ಳರನ್ನು ಬಂಧಿಸಿದ ಪೊಲೀಸರು ಪೊಲೀಸ್ ಠಾಣೆಗೆ ಕರೆದೊಯ್ದರು. ಅವರಲ್ಲಿ ಪೆರುಮಾಳ್ ಎನ್ನುವವನು ಪೊಲೀಸ್ ಠಾಣೆಗೆ ತಲುಪುವುದರೊಳಗೆ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಮತ್ತೊಬ್ಬ ಆಂಧ್ರ ಪ್ರದೇಶ ಮೂಲದ ವಿಜಿನಾಪುರದಲ್ಲಿ ವಾಸಿಸುತ್ತಿರುವ 20 ವರ್ಷದ ಶಿವ ಎಂಬುವವನು ಪೊಲೀಸ್ ಕಸ್ಟಡಿಯಲ್ಲಿದ್ದಾನೆ.
ಪೆರುಮಾಳ್ ಬೈಕ್ ತಳ್ಳಿಕೊಂಡು ಹೋಗಲು ಮಾತ್ರ ಬಂದಿದ್ದು ತನಗೆ ಆತನ ಜೊತೆ ಯಾವುದೇ ವೈಯಕ್ತಿಕ ಸಂಪರ್ಕವಿಲ್ಲ ಎಂದು ಶಿವ ಪೊಲೀಸರಿಗೆ ಹೇಳಿದ್ದಾನೆ. ಆದರೂ ಇವರಿಬ್ಬರು ಸ್ನೇಹಿತರೆಂದು ಸಂಶಯವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆ ಮುಂದುವರಿದಿದೆ. ತನಿಖೆ ಮುಂದುವರಿದಿದೆ. ಬೈಕ್ ಸಂಖ್ಯೆ KA-03-JJ-7737 ರ ಮಾಲಿಕರು ಯಾರೂ ಇದುವರೆಗೆ ಬಂದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್