ರಾಜ್ಯ

ಬೆಂಗಳೂರು ನಗರ ಸಂಚಾರಿ ಪೊಲೀಸ್ ಈಗ ಬಾಡಿ ವೋರ್ನ್ ಕ್ಯಾಮರಾದೊಂದಿಗೆ ಸಜ್ಜು

Sumana Upadhyaya
ಬೆಂಗಳೂರು: ಕರ್ತವ್ಯದಲ್ಲಿರುವಾಗ ಜಿಪಿಎಸ್ ಆಧಾರಿತ ಬಾಡಿ ವೊರ್ನ್ ಕ್ಯಾಮರಾಗಳನ್ನು ಧರಿಸಲು ಬೆಂಗಳೂರು ನಗರದ ಸುಮಾರು 50 ಸಂಚಾರಿ ಪೊಲೀಸರು ಆರಂಭಿಸಿದ್ದಾರೆ.
ವಾಹನ ಚಾಲಕರ ವಿರುದ್ಧ ಸುಳ್ಳು ಕೇಸುಗಳನ್ನು ಸಂಚಾರಿ ಪೊಲೀಸರು ದಾಖಲಿಸುತ್ತಾರೆ ಎಂದು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸ್ ವಿಭಾಗ ಈ ಕ್ರಮ ಕೈಗೊಂಡಿದೆ. ಸಂಚಾರ ನಿಯಮವನ್ನು ಉಲ್ಲಂಘಿಸಿದವರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳದಿರುವುದನ್ನು ತಡೆಯಲು, ಅವರ ಬಗ್ಗೆ ದಾಖಲೆ ಸಲ್ಲಿಸಲು ಮತ್ತು ಸಂಚಾರಿ ಪೊಲೀಸರು ಲಂಚ ಪಡೆಯುತ್ತಾರೆ ಎಂಬ ಸವಾರರ ಆರೋಪಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. 
ಇದೀಗ ನಗರದ 50 ಸಂಚಾರಿ ಪೊಲೀಸರಲ್ಲಿ ಈ ಕ್ಯಾಮರಾಗಳಿದ್ದು ಇದು 150 ಗ್ರಾಂಗಿಂತ ಕಡಿಮೆ ತೂಕ ಹೊಂದಿದೆ. ಸಂಚಾರ ನಿಯಮ ಉಲ್ಲಂಘಿಸಿದವರ ದಾಖಲೆ ಕ್ಯಾಮರಾಗಳಲ್ಲಿ ಅಳವಡಿಕೆಯಾಗುತ್ತದೆ ಮತ್ತು ಇದರಲ್ಲಿ ಅತ್ಯುತ್ತಮ ಗುಣಮಟ್ಟದ ವಿಡಿಯೊ ಮತ್ತು ಆಡಿಯೊಗಳನ್ನು 10 ಗಂಟೆಗಳ ಕಾಲ ಸಂವಹನ ನಡೆಸಬಹುದು.
ಈ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್.ಹಿತೇಂದ್ರ, ಈ ಪ್ರಾಯೋಗಿಕ ಯೋಜನೆಗೆ ಸಿಗುವ ಪ್ರತಿಕ್ರಿಯೆಯನ್ನು ನೋಡಿಕೊಂಡು ಹೆಚ್ಚುವರಿ ಬಾಡಿ ವೊರ್ನ್ ಕ್ಯಾಮರಾಗಳನ್ನು ಖರೀದಿಸುತ್ತೇವೆ. ಈ ಕ್ಯಾಮರಾಗಳನ್ನು ಬಳಸುವ ಬಗ್ಗೆ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡುತ್ತೇವೆ ಎಂದು ಹೇಳಿದರು.
ಹಲವು ವಾಹನ ಸವಾರರು ಕೂಡ ಈ ಕ್ಯಾಮರಾ ಅಳವಡಿಕೆಯನ್ನು ಸ್ವಾಗತಿಸಿದ್ದಾರೆ. ವ್ಯವಸ್ಥೆಯಲ್ಲಿ ಹೆಚ್ಚು ಪಾರದರ್ಶಕತೆ ಬರುತ್ತದೆ ಎನ್ನುತ್ತಾರೆ. ಆದರೆ ಕೆಲವರು ಇದನ್ನು ವಿರೋಧಿಸಿದ್ದಾರೆ. ಪ್ರಯಾಣಿಕರ ಖಾಸಗಿತನಕ್ಕೆ ಧಕ್ಕೆಯುಂಟಾಗುತ್ತದೆ ಎಂಬುದು ಅವರ ವಾದ.
SCROLL FOR NEXT