ಘಟನೆ ನಡೆದ ಸ್ಥಳವನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಸ್ಥಳೀಯರು 
ರಾಜ್ಯ

ಬೆಂಗಳೂರು: ಕುಡಿದ ಮತ್ತಿನಲ್ಲಿ ಅತ್ತೆ-ಮಾವನನ್ನು ಕೊಂದಿದ್ದ ಅಳಿಯನ ಬಂಧನ

ಕುಡಿದ ಮತ್ತಿನಲ್ಲಿ ಅತ್ತೆ- ಮಾವನನ್ನು ಕೊಂದು ಹೆಂಡತಿ ಹಾಗೂ ನೆರೆಮನೆಯಾತನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ...

ಬೆಂಗಳೂರು: ಕುಡಿದ ಮತ್ತಿನಲ್ಲಿ ಅತ್ತೆ- ಮಾವನನ್ನು ಕೊಂದು ಹೆಂಡತಿ ಹಾಗೂ ನೆರೆಮನೆಯಾತನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ರಾತ್ರಿ ಕೋಣನಕುಂಟೆಯ ಅನ್ನಪೂರ್ಣೇಶ್ವರಿ ಲೇಔಟ್ ನಲ್ಲಿ ಸೆಂಥಿಲ್ ಕುಮಾರ್ ಎಂಬಾತ  ತನ್ನ ಅತ್ತೆ ಹಾಗೂ ಮಾವ ಮರುಗಮ್ಮ(55) ಕುಮಾರ್ (60) ರನ್ನು ಚಾಕುವಿನಿಂದ ಇರಿದಿದ್ದ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಇಬ್ಬರು ಅಸು ನೀಗಿದ್ದರು.

ಜಗಳ ಬಿಡಿಸಲು ಬಂದ ಹೆಂಡತಿ ಸತ್ಯವತಿ ಹಾಗೂ ನೆರೆಮನೆಯಾತ ಮಂಜುನಾಥ್ ಎಂಬುವರಿಗೂ ಸೆಂಥಿಲ್ ಕುಮಾರ್ ಚಾಕುವಿನಿಂದ ಇರಿದಿದ್ದಾನೆ. ಕುಮಾರ್ ಹಾಗೂ ಮರುಗಮ್ಮ ಚಿತ್ತೂರು ಜಿಲ್ಲೆಯವರು, ಬೆಂಗಳೂರಿನಲ್ಲಿ ದಿನಗೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರು. ತಮಿಳುನಾಡು ಮೂಲದ ಸೆಂಥಿಲ್ ಹಾಗೂ ಕುಮಾರ್ ಮುರುಗಮ್ಮ ದಂಪತಿ ಪುತ್ರಿ ಸತ್ಯವತಿ ಇಬ್ಬರು ಪರಸ್ಪರ ಪ್ರೀತಿಸಿ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು.

ಇಬ್ಬರು ತಮಿಳುನಾಡಿನಲ್ಲಿ ವಾಸವಿದ್ದರು, ಆದರೆ ದಿನಕಳೆದಂತೆ ಸೆಂಥಿಲ್ ಕುಮಾರ್ ಕುಡಿತದ ಚಟ ಹೆಚ್ಚಿದ್ದರಿಂದ ತಮಿಳುನಾಡಿನಿಂದ ವಾಪಸ್ ಬಂದು ಒಂದು ವರ್ಷದಿಂದ ತನ್ನ ಪೋಷಕಪ ಜೊತೆಗಿದ್ದಳು. ಪದೇ ಪದೇ ಮನೆಗೆ ಬರುತ್ತಿದ್ದ ಸೆಂಥಿಲ್ ಕುಮಾರ್ ವಾಪಸ್ ಮನೆಗೆ ಬರುವಂತೆ ಒತ್ತಾಯಿಸುತ್ತಿದ್ದ, ಇದಕ್ಕೆ ಸತ್ಯವತಿ ಪೋಷಕರು ವಿರೋಧ ವ್ಯಕ್ತ ಪಡಿಸಿದ್ದರು.

ಶುಕ್ರವಾರ ರಾತ್ರಿ ಮನೆಗೆ ಬಂದ ಸೆಂಥಿಲ್ ಮೊದಲು ಅತ್ತೆ ಮಾವನ ಜೊತೆ ಜಗಳ ಆರಂಭಿಸಿದ್ದಾನೆ, ಈ ವೇಳೆ ಅವರಿಬ್ಬರಿಗೂ ಚಾಕುವಿನಿಂದ ಚುಚ್ಚಿದ್ದಾನೆ. ಪೋಷಕರ ಆಕ್ರಂದನ ಕೇಳಿ ಅಡುಗೆ ಮನೆಯಲ್ಲಿದ್ದ ಮಗಳು ಸತ್ಯವತಿ ಕೂಡಲೇ ಓಡಿ ಬಂದಿದ್ದಾಳೆ. ಈ ವೇಳೆ ಸೆಂಥಿಲ್ ಕುಮಾರ್ ಆಕೆಯ ಕಾಲಿಗೂ ಚುಚ್ಚಿದ್ದಾನೆ. ಜಗಳ ಬಿಡಿಸಲು ಬಂದ ನೆರೆಮನೆಯ ಮಂಜುನಾಥ್ ಎಂಬುವರಿಗೆ ಚಾಕುವಿನಿಂದ ಇರಿದ ಸೆಂಥಿಲ್ ಕುಮಾರ್ ಅಲ್ಲಿಂದ ಪರಾರಿಯಾಗಿದ್ದಾನೆ. ಕೂಡಲೇ ದಾವಿಸಿದ ಅಕ್ಕಪಕ್ಕದ ಮನೆಯವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಸೆಂಥಿಲ್ ಕುಮಾರ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT