ಕಾರವಾರ: ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಾಂಶುಪಾಲನೊಬ್ಬನನ್ನು ಭಟ್ಕಳ ಟೌನ್ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ಪ್ರಾಂಶುಪಾಲ ಚಲಿಸುವ ಕಾರಿನಲ್ಲಿ, ಶಿಕ್ಷಕ ಹಾಗೂ ಕಾರು ಚಾಲಕನೊಂದಿಗೆ ಸೇರಿಕೊಂಡು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ.
ಉಡುಪಿ ಜಿಲ್ಲೆಯ ಬೈಂದೂರು ಟೌನ್ ಮೂಲದ 15 ವರ್ಷದ ಬಾಲಕಿ ತನ್ನ ತಾಯಿಯೊಂದಿಗೆ ಶಾಲೆಗೆ ಬಂದಿದ್ದಾಳೆ. ಬಾಲಕಿಯ ತಾಯಿ ಪ್ರಾಂಶುಪಾಲರೊಂದಿಗೆ ಮಾತನಾಡಿದ ಬಳಿಕ, ಪರೀಕ್ಷೆ ಹತ್ತಿರವಿದ್ದು ಬಾಲಕಿಗೆ ಮತ್ತಷ್ಟು ಪಾಠ ಹೇಳಿಕೊಡುವ ಅಗತ್ಯವಿದ್ದು, ಬಾಲಕಿಯನ್ನು ಶಾಲೆಯಲ್ಲಿಯೇ ಬಿಟ್ಟು ಹೋಗಿ. ಮನೆಗೆ ನಾನೇ ಕಾರಿನಲ್ಲಿ ಬಿಡುತ್ತೇನೆಂದು ಪ್ರಾಂಶುಪಾಲ ಬಾಲಕಿಯ ತಾಯಿಗೆ ತಿಳಿಸಿದ್ದಾನೆ.
ಪ್ರಾಂಶುಪಾಲನ ಮಾತನ್ನು ನಂಬಿದ ತಾಯಿ ಬಾಲಕಿಯನ್ನು ಅಲ್ಲಿಯೇ ಬಿಟ್ಟು ಮನೆಗೆ ಹೋಗಿದ್ದಾರೆ. ನಂತರ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿರುವ ಪ್ರಾಂಶುಪಾಲ, ಕರಿಕಲ್ ಅರಣ್ಯ ಪ್ರದೇಶದ ಬಳಿ ಕರೆದುಕೊಂಡು ಹೋಗಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ನಂತರ ಬಾಲಕಿ ಕಿರುಚಾಡುವುದನ್ನು ಕಂಡು ಭಯಗೊಂಡು ಆಕೆಯನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದಾರೆ.
ನಂತರ ಬಾಲಕಿ ಸ್ಥಳೀಯರ ಸಹಾಯ ಕೇಳಿಕೊಂಡು ಮನೆಗೆ ಹೋಗಿದ್ದಾಳೆ. ಬಳಿಕ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.