ಸಾಂದರ್ಭಿಕ ಚಿತ್ರ 
ರಾಜ್ಯ

ಐಆರ್ ಸಿಟಿಸಿಯಿಂದ ರೈಲು ನಿಲ್ದಾಣಗಳಲ್ಲಿ ಬೇಸ್ ಕಿಚನ್ ಸ್ಥಾಪನೆಗೆ ನಿರ್ಧಾರ

ರೈಲುಗಳಲ್ಲಿ ನೀಡುವ ಆಹಾರದ ಗುಣಮಟ್ಟ ಕಳಪೆಯಾಗುತ್ತಿದೆ ಎಂದು ಪ್ರಯಾಣಿಕರ ದೂರನ್ನು ಗಣನೆಗೆ...

ಬೆಂಗಳೂರು: ರೈಲುಗಳಲ್ಲಿ ಮತ್ತು ರೈಲು ನಿಲ್ದಾಣಗಳಲ್ಲಿ ನೀಡುವ ಆಹಾರದ ಗುಣಮಟ್ಟ ಕಳಪೆಯಾಗಿದೆ ಎಂದು ಪ್ರಯಾಣಿಕರ ದೂರನ್ನು ಗಣನೆಗೆ ತೆಗೆದುಕೊಂಡಿರುವ ರೈಲ್ವೆ ಮಂಡಳಿ, ರೈಲಿನ ಕ್ಯಾಟರಿಂಗ್ ಕಾರ್ಯನಿರ್ವಹಣೆಯನ್ನು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮಕ್ಕೆ(ಐಆರ್ ಸಿಟಿಸಿ) ಹಸ್ತಾಂತರಿಸಲು ನಿರ್ಧರಿಸಿದೆ. ಏಳು ವರ್ಷಗಳ ನಂತರ ನಿಗಮ ತನ್ನ ಈ ಕಾರ್ಯವನ್ನು ಮತ್ತೆ ತೆಗೆದುಕೊಳ್ಳಲಿದೆ.
ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಐಆರ್ ಸಿಟಿಸಿಯ ಹಿರಿಯ ಅಧಿಕಾರಿಗಳು, ನಿಗಮದ ಈ ನಡೆಯಿಂದ ಆಹಾರದ ಗುಣಮಟ್ಟ ಹೆಚ್ಚಲಿದೆ. ಫೆಬ್ರವರಿ 27ರಂದು ರೈಲ್ವೆ ಇಲಾಖೆ ಹೊರಡಿಸಿರುವ ಯೋಜನೆ ಪ್ರಕಾರ, ರೈಲುಗಳಲ್ಲಿ ನೀಡುವ ಆಹಾರ ತಾಜಾ ಮತ್ತು ಬಿಸಿಯಾಗಿರಬೇಕೆಂದು ನಿಗಮಕ್ಕೆ ರೈಲ್ವೆ ನಿಲ್ದಾಣಗಳಲ್ಲಿ ಅಡಿಗೆ ಮನೆಗಳನ್ನು(ಬೇಸ್ ಕಿಚನ್) ಸ್ಥಾಪಿಸುವಂತೆ ಸೂಚಿಸಲಾಗಿತ್ತು ಎಂದು  ಹೇಳಿದ್ದಾರೆ.
ಇನ್ನೊಂದು ತಿಂಗಳೊಳಗೆ ನಮ್ಮ ವ್ಯಾಪಾರದ ಮಾದರಿಯನ್ನು ಸಲ್ಲಿಸುತ್ತೇವೆ. ಮೂಲ ಅಡಿಗೆಮನೆ ಯಾವ್ಯಾವ ನಿಲ್ದಾಣಗಳಲ್ಲಿ ಸ್ಥಾಪಿಸಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರದ ಹಂತದಲ್ಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ವಿವರಗಳನ್ನು ನೀಡಲು ಉನ್ನತ ಮಟ್ಟದ ಸಭೆಯನ್ನು ದೆಹಲಿಯಲ್ಲಿ ನಡೆಸಲಾಗಿದೆ.
ಯೋಜನೆ ಪ್ರಕಾರ, ಬೇಸ್ ಕಿಚನ್ ಇನ್ನು 6 ತಿಂಗಳೊಳಗೆ ಸ್ಥಾಪಿಸಬೇಕು. ರೈಲು ನಿಲ್ದಾಣದ ಒಳಗೆ ಜಾಗವನ್ನು ನೀಡಬೇಕೆಂದಿರುವುದರಿಂದ ಇದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಅಡಿಗೆಮನೆಯಲ್ಲಿ ಅಗತ್ಯಪಟ್ಟ ಮೂಲಸೌಕರ್ಯಗಳನ್ನು ನಿರ್ಮಿಸಬೇಕಾಗುತ್ತದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಆದರೆ ರೈಲ್ವೆ ನಿಗಮದ ಈ ನಡೆ ಪ್ರಯಾಣಿಕರಿಗೆ ಮುಂದಿನ ದಿನಗಳಲ್ಲಿ ಯಾವ ರೀತಿ ಅನುಕೂಲವಾಗುತ್ತದೆ ಎಂಬುದು ಸದ್ಯದ ಪ್ರಶ್ನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ಭಾರತೀಯರು ಬಗ್ಗದೇ ಹೋದರೆ...": ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾನೇರ ಬೆದರಿಕೆ!

SCO summit: ಟ್ರಂಪ್ ಗೆ ಸೆಡ್ಡು; ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

BJP, RSS ನಡುವೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಂಘರ್ಷ ಇಲ್ಲ: ಮೋಹನ್ ಭಾಗವತ್

ಧರ್ಮಸ್ಥಳ ಪ್ರಕರಣ: ದೂರುದಾರನ ಮಂಪರು ಪರೀಕ್ಷೆಗೆ ಸೌಜನ್ಯ ತಾಯಿ ಒತ್ತಾಯ; ಹೊಸ ದೂರು ದಾಖಲು!

Thyroid Cancer: ಗುರುತೇ ಸಿಗಲಾರದಷ್ಟು ಬದಲಾದ ನಟ! 'ರಾಯ್' ಗೆ ಬೇಕಾಗಿದೆ ನೆರವು; Video

SCROLL FOR NEXT