ರಾಜ್ಯ

ಬಿಸಿಲಿನಿಂದ ಬಸವಳಿದಿದ್ದ ರಾಜ್ಯದ ಹಲವೆಡೆ ವರುಣನ ಸಿಂಚನ: ಇಂದು ಹೆಚ್ಚು ಮಳೆ ಸಾಧ್ಯತೆ

Shilpa D

ಬೆಂಗಳೂರು: ರಾಜ್ಯದ ಹಲವೆಡೆ ನಿನ್ನೆಯಿಂದ ಮೋಡ ಕವಿದ ವಾತಾವರಣವಿದ್ದು, ಕರ್ನಾಟಕದ ವಿವಿಧ ಭಾಗಗಳಲ್ಲಿ ಭಾನುವಾರ ಸಾಧಾರಣ ಮಳೆಯಾಗಿದೆ. ಸೋಮವಾರ ಕೂಡ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗು ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಬೆಂಗಳೂರು ನಗರದ ಹೊರವಲಯದಲ್ಲಿ ನಿನ್ನೆ ಅಲ್ಲಲ್ಲಿ ತುಂತುರು ಮಳೆಯಾಗಿದೆ, ಕೊಡುಗು ಮತ್ತು ಬೆಳಗಾವಿ ಜಿಲ್ಲೆಯಲ್ಲೂ ಕೂಡ ಸಾಧಾರಣ ಮಳೆಯಾಗಿರುವ ವರದಿಯಾಗಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ಸಮೀಪದ ಚೆಂಬಲ್ಲೂರು ಹಾಗೂ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಪಟ್ಟಣಕುಡಿಯಲ್ಲಿ ಸುಮಾರು 9 ಮಿಮಿ ಮಳೆಯಾಗಿದೆ, ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ 8 ಎಂಎಂ ಮಳೆಯಾಗಿರುವ ವರದಿಯಾಗಿದೆ.

ಚಾಮರಾಜನಗರದ ಕೆಲ ಭಾಗಗಳು, ಮೈಸೂರು, ಹಾಸನ, ಬೆಂಗಳೂರು ಗ್ರಾಮಾಂತರ, ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ  ಸಣ್ಣ ಪ್ರಮಾಣದ ಮಳೆಯಾಗಿದೆ.

ಮಾರ್ಚ್ ಮೊದಲ ವಾರದಲ್ಲಿ  ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 7.06 ಟಿಎಂಸಿ ನೀರಿದೆ, ಕಳೆದ ವರ್ಷ ಈ ವೇಳೆಗೆ ಜಲಾಯಶದಲ್ಲಿ 13 ಟಿಎಂಸಿ ಅಡಿ ನೀರಿತ್ತು.  ಕರ್ನಾಟಕದ ದಕ್ಷಿಣ ಒಳನಾಡಿನ  ಹಲವು ಜಲಾಶಯಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ, ಉತ್ತರ ಕರ್ನಾಟಕದಲ್ಲೂ ಜಲಾಶಯಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

SCROLL FOR NEXT