ಪೋಷಕರ ಆಕ್ರಂಧನ 
ರಾಜ್ಯ

ವಿಷಾಹಾರದ ಹಿಂದೆ ಕಾಣದ ಕೈಗಳ ಸಂಚು: ಮಾಜಿ ಶಾಸಕ ಕಿರಣ್ ಕುಮಾರ್ ಆರೋಪ!

ತುಮಕೂರು ವಸತಿ ಶಾಲೆಯಲ್ಲಿ ವಿಷಾಹಾರ ತಿಂದು ಮೂವರು ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಸತಿ ಶಾಲೆಯ ಮಾಲೀಕ ಹಾಗೂ ಮಾಜಿ ಶಾಸಕ ಕಿರಣ್ ಕುಮಾರ್ ಅವರು, ಪ್ರಕರಣದ ಹಿಂದೆ ಕಾಣದ ಕೈಗಳ ಸಂಚು ಅಡಗಿರಬಹುದು ಎಂದು ಶಂಕಿಸಿದ್ದಾರೆ.

ತುಮಕೂರು: ತುಮಕೂರು ವಸತಿ ಶಾಲೆಯಲ್ಲಿ ವಿಷಾಹಾರ ತಿಂದು ಮೂವರು ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಸತಿ ಶಾಲೆಯ ಮಾಲೀಕ ಹಾಗೂ ಮಾಜಿ ಶಾಸಕ ಕಿರಣ್ ಕುಮಾರ್  ಅವರು, ಪ್ರಕರಣದ ಹಿಂದೆ ಕಾಣದ ಕೈಗಳ ಸಂಚು ಅಡಗಿರಬಹುದು ಎಂದು ಶಂಕಿಸಿದ್ದಾರೆ.

ಘಟನೆ ಬಗ್ಗೆ ಬಿಜೆಪಿ ಮಾಜಿ ಶಾಸಕ ಕಿರಣ್ ಕುಮಾರ್ ಅವರು ಗುರುವಾರ ಹೇಳಿಕೆ ನೀಡಿದ್ದು, "ಮಕ್ಕಳ ತಿನ್ನುವ ಊಟದಲ್ಲಿ ನೀಲಿ ಬಣ್ಣ ಕಾಣಿಸಿಕೊಂಡಿತ್ತು, ಹೀಗಾಗಿ ಊಟದಲ್ಲಿ ಯಾರೋ ಔಷಧ ಬೆರೆಸಿರುವ ಸಾಧ್ಯತೆ ಇದೆ ಎಂದು  ಶಂಕಿಸಿದ್ದಾರೆ. "ಪ್ರಕರಣ ಸಂಬಂಧ ಸಿಬ್ಬಂದಿಗಳನ್ನು ವಿಚಾರಿಸಿದಾಗ ಮೂವರು ಮಕ್ಕಳು ಚಪಾತಿ ಪಲ್ಯಾ ಬದಲಿಗೆ ಅನ್ನ ಸಾಂಬರ್ ತಿಂದಿದ್ದಾರೆ. ಆಗ ಸಾಂಬರ್ ನಲ್ಲಿ ವ್ಯತ್ಯಾಸ ಇದ್ದಿದ್ದು ಕಂಡು ಬಂತು. ಕೂಡಲೇ ಅಸ್ವಸ್ಥ ಮಕ್ಕಳನ್ನು  ಆಸ್ಪತ್ರೆಗೆ ದಾಖಲು ಮಾಡಲಾಯಿತು. ನಂತರ ಅಲ್ಲಿದ್ದ ಉಳಿದ ಮಕ್ಕಳು ಯಾರು ಊಟ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

"ಹಾಸ್ಟೆಲ್‍ನಲ್ಲಿ 40 ಮಂದಿ ವಿದ್ಯಾರ್ಥಿಗಳಿದ್ದು, 3ನೇ ತರಗತಿಯಿಂದ 10ನೇ ತರಗತಿವರೆಗೆನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶ್ರೇಯಸ್, ಆಕಾಂಕ್ಷ ಪಲ್ಲಕ್ಕಿ ಶಿರಾಂಪುರ ವಿದ್ಯಾರ್ಥಿಗಳಾಗಿದ್ದು, ಶಾಂತಮೂರ್ತಿ  ತಿಮ್ಮನಹಳ್ಳಿ ವಿದ್ಯಾರ್ಥಿ. ಹಾಸ್ಟೆಲ್‍ನಲ್ಲಿ ಸಿಸಿ ಕ್ಯಾಮರಾಗಳಿವೆ. ಅದನ್ನು ಪರಿಶೀಲಿಸುತ್ತೇನೆ ಎಂದು ಕಿರಣ್ ಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!