ರಾಜ್ಯ

ಉಡುಪಿ: 60 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದ ಗೂಳಿ ರಕ್ಷಣೆ ಮಾಡಿದ ಸಾಮಾಜಿಕ ಕಾರ್ಯಕರ್ತ

Shilpa D

ಉಡುಪಿ: 60 ಅಡಿ ಆಳದ ಪ್ರಪಾತಕ್ಕೆ ಬಿದ್ದ ಗೂಳಿಯನ್ನು ಸುರಕ್ಷಿತವಾಗಿ ಮೇಲಕ್ಕೇತ್ತಲಾಗಿದೆ. ನಗರದ ಹೊರ ವಲಯದಲ್ಲಿರುವ ಕುಕ್ಕಿಕಟ್ಟೆಯಲ್ಲಿ ಮೂರು ದಿನಗಳ ಹಿಂದೆ ರೈಲ್ವೆ ಹಳಿ ಮೇಲ್ಗಡೆಯ ದಂಡೆಯಲ್ಲಿ ಮೇಯುತ್ತಿದ್ದ ಗೂಳಿಗೆ ರೈಲು ಡಿಕ್ಕಿ ಹೊಡೆದು ಪ್ರಪಾತಕ್ಕೆ ಬಿದ್ದಿತ್ತು.

ಮಂಗಳವಾರ ಬೆಳಗ್ಗೆ ಗೂಳಿ ಪ್ರಪಾತದಲ್ಲಿ ಬಿದ್ದಿರುವುದನ್ನು ನೋಡಿದ ಸಾಮಾಜಕ ಕಾರ್ಯಕರ್ತ ವಿಷ್ಣುಶೆಟ್ಟಿ ಕೂಡಲೇ ಅದರ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಿದರು. ಆದರೆ ಪ್ರಪಾತಕ್ಕೆ ಬಿದ್ದು 2 ದಿನ ವಾಗಿದ್ದರಿಂದ ಆಹಾರ ನೀರು ಇಲ್ಲದೇ ಗೂಳಿ ಕೇವಲ ಉಸಿರಾಡುತ್ತಿತ್ತು.ಈ ವೇಳೆ ಅಲೆವೂರ್ ಯೂತ್ ಕ್ಲಬ್ ಗೂಳಿ ರಕ್ಷಿಸಲು ಕಾರ್ಯಾಚರಣೆ ಆರಂಭಿಸಿತು.

ಗೂಳಿಗೆ ನೀರು ಮತ್ತು ಮೇವು ನೀಡಲಾಯಿತು. ಕತ್ತಲಾಗಿದ್ದರಿಂದ ಕಾರ್ಯಾಚರಣೆ ಕಾರ್ಯ ಬುಧವಾರ ಬೆಳಗ್ಗೆಗೆ ಮುಂದೂಡಲಾಯಿತು. ಅರ್ಥ್ ಮೂವರ್ ಮೂಲಕ  ತಾತ್ಕಾಲಿಕ ರಸ್ತೆ ಮಾಡಿ ಚಲನೆಯಿಲ್ಲದೆ ಮಲಗಿದ್ದ ಗೂಳಿ ಇದ್ದ ಜಾಗಕ್ಕೆ ತೆರಳಿದರು. ಕ್ರೇನ್ ಬಳಸಿಕೊಂಡು ಗೂಳಿಯನ್ನು ಮೇಲೇತ್ತಲಾಯಿತು.

ಪಶು ವೈದ್ಯ ಡಾ. ಸಂದೀಪ್ ಶೆಟ್ಟಿ ಗೂಳಿಗೆ ಪ್ರಥಮ ಚಿಕಿತ್ಸೆ ನೀಡಿ ಗೂಳಿಯ ಸೊಂಟಕ್ಕೆ ಬೆಲ್ಟ್ ಕಟ್ಟಿ ಮೇಲಕ್ಕೆತ್ತಲಾಯಿತು. ಈ ವೇಳೆ ಗೂಳಿಗೆ ಅರಿವಳಿಕೆ ಮದ್ದು ನೀಡಿ ಮೇಲೆತ್ತಲಾಯಿತು. ಸುಮಾರು 3 ಗಂಟೆಗಳ ಕಾರ್ಯಾಚರಣೆ ನಂತರ ಗೂಳಿಯನ್ನು ಪ್ರಪಾತದಿಂದ ರಕ್ಷಿಸಲಾಯಿತು.ಗೂಳಿಯ ಮುಂದಿನ ಜವಾಬ್ದಾರಿಯನ್ನು ಕೂಡ ಈ ಯುವಕರೇ ವಹಿಸಿಕೊಂಡಿರೋದು ಶ್ಲಾಘನೀಯ.

SCROLL FOR NEXT