ಸಂಗ್ರಹ ಚಿತ್ರ 
ರಾಜ್ಯ

ಕುಡಿದು ವಾಹನ ಚಾಲನೆ: 21 ಸಾವಿರ ವಾಹನ ಚಾಲಕರ ಲೈಸೆನ್ಸ್ ಅಮಾನತು

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಆರೋಪದ ಮೇಲೆ ಕಳೆದ 2 ವರ್ಷಗಳಲ್ಲಿ ಸುಮಾರು 21,007 ಮಂದಿ ವಾಹನ ಚಾಲಕರ ಲೈಸೆನ್ಸ್ ಅನ್ನು ಅಮಾನತು...

ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಆರೋಪದ ಮೇಲೆ ಕಳೆದ 2 ವರ್ಷಗಳಲ್ಲಿ ಸುಮಾರು 21,007 ಮಂದಿ ವಾಹನ ಚಾಲಕರ ಲೈಸೆನ್ಸ್ ಅನ್ನು ಅಮಾನತು ಮಾಡಲಾಗಿದೆ.

ಬೆಂಗಳೂರು ನಗರ ಪೊಲೀಸರು ವಿವಿಧ ವಿಭಾಗಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಒಟ್ಟು 32,756 ಚಾಲಕರ ಲೈಸೆನ್ಸ್ ಅಮಾನತು ಮಾಡಿದ್ದಾರೆ ಎಂದು ನಗರ ಸಂಚಾರಿ ಪೊಲೀಸ್ ಹೆಚ್ಚುವರಿ ಆಯುಕ್ತ ಆರ್. ಹಿತೇಂದ್ರ ಹೇಳಿದ್ದಾರೆ. 2015 ಕ್ಕೆ ಹೋಲಿಸಿದರೇ 2017 ರಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಿವೆ. 14, 994 ರಿಂದ 17,762 ಕ್ಕೇರಿದೆ,

ಇನ್ನೂ ನಗರದಲ್ಲಿ ಅಪಘಾತ ಪ್ರಕರಣಗಳು ಕೂಡ ಹೆಚ್ಚಿವೆ. 2015 ರಲ್ಲಿ 4,828 ರಷ್ಟು ಇದ್ದದ್ದು 2016 ರಲ್ಲಿ 7,506ಕ್ಕೇರಿದೆ. ಸುಪ್ರೀಂ ಕೋರ್ಟ್ ಸಂಚಾರಿ ನಿಯಮ ಉಲ್ಲಂಘಿಸುವವರ ಲೈಸೆನ್ಸ್ ಗಳನ್ನು 3 ತಿಂಗಳ ಕಾಲ ಅಮಾನತುಗೊಳಿಸುವಂತೆ ಹೇಳಿದೆ. ಅಧಿಕ ವೇಗ, ಸಿಗ್ನಲ್ ಜಂಪ್, ಓವರ್ ಲೋಡಿಂಗ್, ಸರಕು ವಾಹನಗಳಲ್ಲಿ ಜನರ ಪ್ರಯಾಣ, ಮಧ್ಯ ಸೇವನೆ, ಮಾದಕ ವಸ್ತು ಸೇವನೆ ಮತ್ತು ಮೊಬೈಲ್ ಬಳಕೆ ಮಾಡಿ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.

ಪದೇ ಪದೇ ಮದ್ಯಸೇವಿಸಿ ಚಾನೆ ಮಾಡುವವರ ಲೈಸೆನ್ಸ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಮಾನತುಗೊಳಿಸಲಾಗಿದೆ.  ಒಂದು ಬಾರಿ ಲೈಸೆನ್ಸ್ ಅಮಾನತುಗೊಂಡರೇ ಆ ಚಾಲಕ ಯಾವುದೇ ವಾಹನವನ್ನು ಚಲಾಯಿಸುವಂತಿಲ್ಲ,  ಆದರೆ ಲೈಸೆನ್ಸ್ ಅಮಾನತುಗೊಂಡವರು ರಾಜಾರೋಷವಾಗಿ ಮತ್ತೆ ವಾಹನ ಚಲಾಯಿಸುತ್ತಿದ್ದಾರೆ. ಲೈಸೆನ್ಸ್ ಕಳೆದು ಹೋಗಿದೆ ಎಂದು ನಕಲಿ ದೂರು ದಾಖಲಿಸುತ್ತಿದ್ದಾರೆ ಎಂದು ಸಂಚಾರಿ ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT