ಬೆಂಗಳೂರು: ಮರಗಳಿಗೆ ವಿಷ ಪ್ರಾಶನ ಮಾಡುವುದಿಲ್ಲ ಎಂಬ ಭರವಸೆ ನೀಡಿದ ನಂತರವೂ ಮಾರತ್ ಹಳ್ಳಿಯ ಕಳಾಮಂದಿರ್ ರಸ್ತೆಯಲ್ಲಿ 10 ಮರಗಳಿಗೆ ವಿಷ ಪ್ರಾಶನ ಮಾಡಲಾಗಿದೆ.
ಖಾಸಗಿ ಸಂಸ್ಥೆಯ 3 ಅಕ್ರಮ ಹೋರ್ಡಿಂಗ್ ಗಳನ್ನು ತೆರವುಗೊಳಿಸಲಾಗಿದ್ದು, ಅಕ್ರಮ ಹೋರ್ಡಿಂಗ್ ಗಳು ಸರಿಯಾಗಿ ಕಾಣಿಸುವುದಕ್ಕಾಗಿ ಕಳೆದ ವಾರ 30 ಮರಗಳನ್ನು ಕತ್ತರಿಸಿ ವಿಷ ಪ್ರಾಶನ ಮಾಡಲಾಗಿತ್ತು. 10 ಹೊಂಗೆ ಮರಗಳಿಗೆ ವಿಷ ಪ್ರಾಶನ ಮಾಡಿರುವ ಸ್ಥಳಕ್ಕೆ ಬಿಬಿಎಂಪಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಬಿಬಿಎಂಪಿ ತೋಟಗಾರಿಕಾ ಇಲಾಖೆ ಮುಖ್ಯಸ್ಥರಾದ ಮೀನಾಕ್ಷಿ ಲಕ್ಷ್ಮಿಪತಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಪೊಲೀಸ್ ಠಾಣೆ ಬಳಿಯೇ ಇಂತಹ ಘಟನೆ ನಡೆದಿರುವುದು ಅಚ್ಚರಿಯಾಗಿದೆ ಎಂದು ಹೇಳಿದ್ದಾರೆ.