ರಾಜ್ಯ

ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ 500 ವಿದೇಶಿಗರ ವಿರುದ್ಧ ಕೇಸು

Sumana Upadhyaya
ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ಸುಮಾರು 330 ಅಪರಾಧ ಪ್ರಕರಣಗಳಲ್ಲಿ 500ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಭಾಗಿಯಾಗಿದ್ದಾರೆ. ಅವರಲ್ಲಿ ಶೇಕಡಾ 60ರಷ್ಟು ಮಂದಿ ಜಾಮೀನಿನ ಮೇಲೆ ಹೊರಬಂದಿದ್ದು ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ ಎಂದು ನಗರ ಪೊಲೀಸರು ನಡೆಸಿದ ಆಂತರಿಕ ಅಧ್ಯ ಯನದಿಂದ ತಿಳಿದುಬಂದಿದೆ.
ಮಾದಕ ವಸ್ತು ಕಳ್ಳಸಾಗಣೆ, ವೇಶ್ಯಾವಾಟಿಕೆ, ಸೈಬರ್ ಅಪರಾಧಗಳು, ಕಳ್ಳತನ ಮತ್ತು ದಾಳಿಯಲ್ಲಿ ಸಿಕ್ಕಿಹಾಕಿಕೊಂಡವರೇ ಅಧಿಕ ಮಂದಿಯಾಗಿದ್ದಾರೆ. ಶೇಕಡಾ 60 ಮಂದಿ ಜಾಮೀನಿನ ಮೇಲೆ ಹೊರಬಂದಿದ್ದು, ಶೇಕಡಾ 30 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಶೇಕಡಾ 5ರಷ್ಟು ಮಂದಿ ತಲೆಮರೆಸಿಕೊಂಡಿದ್ದಾರೆ ಮತ್ತು ಇನ್ನು ಶೇಕಡಾ 5 ಮಂದಿ ವಿದೇಶಿ ಪ್ರಜೆಗಳ ವಿರುದ್ಧ ಯಾವುದೇ ಸಾಕ್ಷ್ಯಗಳು ಸಿಗದ ಕಾರಣ ಬಿಟ್ಟುಬಿಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿದೇಶಿಗರ ಕಾಯ್ದೆ ಮತ್ತು ಪಾಸ್ ಪೋರ್ಟ್ ಕಾಯ್ದೆಯಡಿ ದಾಖಲಾದ ಕೇಸುಗಳನ್ನು ಈ ಕೇಸುಗಳು ಪ್ರತ್ಯೇಕಿಸುತ್ತದೆ. ಕಾಲಾವಧಿಗಿಂತ ಹೆಚ್ಚಿನ ಸಮಯ ನಗರದಲ್ಲಿ ಇರುವುದು ಕೂಡ ಬೆಂಗಳೂರಿನ ಪೊಲೀಸರಿಗೆ ತೀವ್ರ ಆತಂಕವನ್ನು ತಂದೊಡ್ಡಿದೆ.
ವರದಿ ಪ್ರಕಾರ, 2015ರ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ 23,516 ವಿದೇಶಿಗರಲ್ಲಿ 1,087 ಮಂದಿ ನಿಗದಿತ ಕಾಲ ಮೀರಿ ವಾಸವಾಗಿದ್ದರು. ಕೆಲವರು ಭಾರತವನ್ನು ತೊರೆದರೆ ಇನ್ನು ಕೆಲವರು ತಮ್ಮ ವೀಸಾವನ್ನು ನವೀಕರಿಸಿಕೊಂಡಿದ್ದಾರೆ. ಇದೀಗ ನಗರ ಪೊಲೀಸರು ವಿದೇಶಿಯರಿಗೆ ಪ್ರಾದೇಶಿಕ ನೋಂದಣಿ ಕಚೇರಿ(ಎಫ್ಆರ್ಆರ್ಒ)ದ ಸಹಾಯದಿಂದ ಕಾಲಾವಧಿ ಮೀರಿ ವಾಸಿಸುತ್ತಿರುವ 6 32 ಮಂದಿಯನ್ನು ಗುರುತಿಸಿದ್ದು ಅವರನ್ನು ಕಳುಹಿಸುವ ಯೋಜನೆ ರೂಪಿಸುತ್ತಿದ್ದಾರೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.
SCROLL FOR NEXT