ಸಾಂದರ್ಭಿಕ ಚಿತ್ರ 
ರಾಜ್ಯ

ಜುಲೈಯಿಂದ ರಾಜಧಾನಿ ಎಕ್ಸ್ ಪ್ರೆಸ್ ಸಂಚಾರ ಮಾರ್ಗ ಬದಲಾವಣೆ

ಕೆಎಸ್ಆರ್ ಬೆಂಗಳೂರು-ಎಚ್ ನಿಜಾಮುದ್ದೀನ್-ಕೆಎಸ್ಆರ್ ಬೆಂಗಳೂರು ವಾರದಲ್ಲಿ ಮೂರು...

ಬೆಂಗಳೂರು: ಕೆಎಸ್ಆರ್ ಬೆಂಗಳೂರು-ಎಚ್ ನಿಜಾಮುದ್ದೀನ್-ಕೆಎಸ್ಆರ್ ಬೆಂಗಳೂರು ವಾರದಲ್ಲಿ ಮೂರು ದಿನ ಸಂಚರಿಸುವ ರಾಜಧಾನಿ ರೈಲು ಸಂಖ್ಯೆ 22693/22694 ಜುಲೈ 1ರಂದು  ಬದಲಾದ ಮಾರ್ಗದಲ್ಲಿ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಮತ್ತು ಜುಲೈ 2ರಂದು ಹೆಚ್.ನಿಜಾಮುದ್ದೀನ್ ನಿಲ್ದಾಣದಿಂದ ಸಂಚರಿಸಲಿದೆ.
ದಕ್ಷಿಣ ಪಶ್ಚಿಮ ರೈಲ್ವೆ ಹೊರಡಿಸಿರುವ ಪ್ರಕಟಣೆಯಲ್ಲಿ, ಬದಲಾದ ಮಾರ್ಗ ಸಂಚಾರದಲ್ಲಿ ರೈಲು ಧರ್ಮಾವರಂ, ಅನಂತಪುರ್, ಗುಂಟಕಲ್, ರಾಯಚೂರು ಮತ್ತು ಸೇರಂನಲ್ಲಿ ನಿಲುಗಡೆಯಾಗಲಿದೆ. ಈ ಹಿಂದೆ ರೈಲು ಧರ್ಮಾವರಂ, ಗೂಟಿ ಮತ್ತು ದೋನೆಯಲ್ಲಿ ನಿಲುಗಡೆಯಾಗುತ್ತಿತ್ತು.
ರೈಲು ಸಂಖ್ಯೆ 22691 ಕೆಎಸ್ಆರ್ ರಾಜಧಾನಿ ಎಕ್ಸ್ ಪ್ರೆಸ್ ಧರ್ಮಾವರಂಗೆ 11.20ಕ್ಕೆ ಆಗಮಿಸಿ, 11.22ಕ್ಕೆ ಹೊರಡಲಿದೆ. ಅನಂತಪುರಂಗೆ 11.53ಕ್ಕೆ ಆಗಮಿಸಿ 11.55ಕ್ಕೆ ಹೊರಡಲಿದೆ. ಗುಂಟಕಲ್ ಗೆ ಮಧ್ಯರಾತ್ರಿ 1.5ಕ್ಕೆ ಆಗಮಿಸಿ 1.10ಕ್ಕೆ ಹೊರಡಲಿದೆ. ರಾಯಚೂರಿಗೆ 2.43ಕ್ಕೆ ಆಗಮಿಸಿ 2.45ಕ್ಕೆ ಹೊರಡಲಿದೆ. ಸೇರಂಗೆ 4.44ಕ್ಕೆ ಆಗಮಿಸಿ 4.45ಕ್ಕೆ ಹೊರಡಲಿದೆ.
ರೈಲು ಸಂಖ್ಯೆ 22692 ಹೆಚ್ ನಿಜಾಮುದ್ದೀನ್-ಕೆಎಸ್ಆರ್ ಬೆಂಗಳೂರು ವಾರದಲ್ಲಿ ಮೂರು ದಿನ ಸಂಚರಿಸುವ ರಾಜಧಾನಿ ಎಕ್ಸ್ ಪ್ರೆಸ್ ಸೇರಂಗೆ 8.59ಕ್ಕೆ ಆಗಮಿಸಿ 9 ಗಂಟೆಗೆ ಹೊರಡಲಿದೆ. ರಾಯಚೂರಿಗೆ 11.8ಕ್ಕೆ ಆಗಮಿಸಿ 11.10ಕ್ಕೆ ಹೊರಡಲಿದೆ. ಗುಂಟಕಲ್ ಗೆ 1 ಗಂಟೆಗೆ ಆಗಮಿಸಿ 1.5ಕ್ಕೆ ಹೊರಡಲಿದೆ. ಅನಂತಪುರಕ್ಕೆ 2.18ಕ್ಕೆ ಆಗಮಿಸಿ 2.20ಕ್ಕೆ ಹೊರಡಲಿದೆ ಮತ್ತು ಧರ್ಮಾವರಂಗೆ 3.25ಕ್ಕೆ ಆಗಮಿಸಿ 3.30ಕ್ಕೆ ಹೊರಡಲಿದೆ.
ಕೆಎಸ್ಆರ್ ಬೆಂಗಳೂರಿನಿಂದ ಸತ್ಯಸಾಯಿ ಪ್ರಶಾಂತಿ ನಿಲಯಂ ಮತ್ತು ಸಿಕಂದರಾಬಾದ್ ನಿಂದ ಹೆಚ್ ನಿಜಾಮುದ್ದೀನ್ ಸ್ಟೇಷನ್ ಗೆ ಹೊರಡುವ ರೈಲಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
ಬೇಸಿಗೆಗೆ ವಿಶೇಷ ರೈಲು: ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ತಿರುಚಿರಾಪಳ್ಳಿಯಿಂದ ಕೃಷ್ಣರಾಜಪುರಂಗೆ ವಾರಕ್ಕೆ ಎರಡು ದಿನ ವಿಶೇಷ ರೈಲುಗಳ ವ್ಯವಸ್ಥೆಯಿರುತ್ತದೆ. ರೈಲು ಸಂಖ್ಯೆ 06049/06050 ತಿರುಚಿರಾಪಳ್ಳಿ-ಕೃಷ್ಣರಾಜಪುರಂ-ತಿರುಚಿರಾಪಳ್ಳಿ ವಾರಕ್ಕೆ ಎರಡು ದಿನ ಸಂಚರಿಸಲಿದೆ.
ರೈಲು ಸಂಖ್ಯೆ 06049 ತಿರುಚಿರಾಪಳ್ಳಿ-ಕೃಷ್ಣರಾಜಪುರಂ ಭಾನುವಾರ ಮತ್ತು ಬುಧವಾರಗಳಂದು ತಿರುಚಿರಾಪಳ್ಳಿಯಿಂದ 6 ಗಂಟೆಗೆ ಹೊರಟು ಕೃಷ್ಣರಾಜಪುರಂಗೆ 14.30ಕ್ಕೆ ಅದೇ ದಿನ ತಲುಪಲಿದೆ.
ರೈಲು ಸಂಖ್ಯೆ 06050 ಕೃಷ್ಣರಾಜಪುರಂನಿಂದ ತಿರುಚಿರಾಪಳ್ಳಿಗೆ ಭಾನುವಾರ ಮತ್ತು ಬುಧವಾರದಂದು 21.30ಕ್ಕೆ ಹೊರಟು ತಿರುಚಿರಾಪಳ್ಳಿಗೆ 6.15ಕ್ಕೆ ಸೋಮವಾರ ಮತ್ತು ಗುರುವಾರದಂದು ತಲುಪಲಿದೆ.
ಮೊದಲ ರೈಲು ಇಂದು ಸಂಚರಿಸಿ ಕೊನೆಯ ರೈಲು ಜೂನ್ 28ರಂದು ಸಂಚರಿಸಲಿದೆ. ರೈಲು ತಿರುಚಿರಾಪಳ್ಳಿ ಕೋಟೆ, ಕುಲಿತಲೈ, ಕರೂರ್, ಮೊಹನೂರು, ನಮಕ್ಕಲ್, ರಾಸಿಪುರಂ, ಸೇಲಂ,  ಕುಪ್ಪಂ ಮತ್ತು ಬಂಗಾರಪೇಟೆಗಳಲ್ಲಿ ನಿಲುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!