ರಾಜ್ಯ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಜಗಳ, ಹಾಸ್ಟೇಲ್ ರೂಂನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಹತ್ಯೆ

Lingaraj Badiger
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ 22 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಆತನ ಹಾಸ್ಟೇಲ್ ನ ಸಹಪಾಠಿ ರೂಂನಲ್ಲಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಗುರುವಾರ ರಾತ್ರಿ ನಡೆದಿದೆ.
ಕೊಲೆಯಾದ ವಿದ್ಯಾರ್ಥಿ ಈಸ್ಟ್ ವೆಸ್ಟ್ ಕಾಲೇಜ್ ವಿದ್ಯಾರ್ಥಿ ರೋಹಿತ್ ಎಂದು ಗುರುತಿಸಲಾಗಿದ್ದು, ಹಾಸ್ಟೆಲ್ ನಲ್ಲಿ ಸಾಮೂಹಿಕ ಶೌಚಾಲಯದ ಬಾಗಿಲು ಮುಚ್ಚಲು ಹೇಳಿದೆ ರೋಹಿತ್ ನನ್ನು ಆತನ ರೂಂ ಮೆಟ್ ರವಿಶ್ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ. 
ರವಿಶ್ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಬಿಎಂ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, ಇಬ್ಬರು ಬಿಇಎಲ್ ಮೊದಲ ಹಂತದಲ್ಲಿರುವ ದೇವರಾಜ್ ಅರಸು ಹಿಂದೂಳಿದ ವರ್ಗಗಳ ಹಾಸ್ಟೇಲ್ ನಲ್ಲಿ ವಾಸಿಸುತ್ತಿದ್ದರು. 
ಪೊಲೀಸರ ಪ್ರಕಾರ, ನಿನ್ನೆ ರಾತ್ರಿ 11 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ರೋಹಿತ್ ರೂಂನಲ್ಲಿದ್ದಾಗ ಕೂಡಿದು ಬಂದಿದ್ದ ರವಿಶ್ ಶೌಚಾಲಯಕ್ಕೆ ಹೋಗಿ ಬಾಗಿಲು ಮುಚ್ಚದೆ ಹಾಗೆ ಬಂದಿದ್ದ. ಇದರಿಂದ ಅಸಮಾಧಾನಗೊಂಡ ರೋಹಿತ್ ಶೌಚಾಲಯದ ಬಾಗಿಲು ಮುಚ್ಚು, ಅದರ ಕೆಟ್ಟ ವಾಸನೆಯಿಂದ ಇತರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತೆ ಎಂದು ಹೇಳಿದ್ದಾನೆ. ಆದರೆ ಬಾಗಿಲು ಮುಚ್ಚಲು ರವಿಶ್ ನಿರಾಕರಿಸಿದ್ದಾನೆ. ಇದರಿಂದಾಗಿ ಇಬ್ಬರ ಮಧ್ಯ ಜಗಳ ನಡೆದಿದ್ದು, ಆ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. 
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಪೊಲೀಸರು, ಆರೋಪಿ ರವಿಶ್ ನನ್ನು ಬಂಧಿಸಿದ್ದಾರೆ.
SCROLL FOR NEXT