ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

78 ಸಂಚಾರಿ ಆರೋಗ್ಯ ಘಟಕಗಳಿಗೆ ಮುಖ್ಯಮಂತ್ರಿ ಚಾಲನೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧಪಡಿಸಿರುವ 78 ಸಂಚಾರಿ ಆರೋಗ್ಯ ಘಟಕಗಳಿಗೆ...

78 ಸಂಚಾರಿ ಆರೋಗ್ಯ ಘಟಕಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ
Sumana Upadhyaya
Updated On : 25 Mar 2017, 7:18 am
ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧಪಡಿಸಿರುವ 78 ಸಂಚಾರಿ ಆರೋಗ್ಯ ಘಟಕಗಳಿಗೆ (ಮೊಬೈಲ್ ಮೆಡಿಕಲ್ ಯೂನಿಟ್ಸ್) ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. 
ಕೆಲವು ಗ್ರಾಮೀಣ ಪ್ರದೇಶದ ಜನರಿಗೆ, ಬೆಟ್ಟ, ಗುಡ್ಡಗಾಡು ಪ್ರದೇಶಗಳು, ದುರ್ಗಮ ಪ್ರದೇಶಗಳು, ಸಾರಿಗೆ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ವಾಸಿಸುವವರಿಗೆ ಗ್ರಾಮಸ್ಥರಿಗೆ ಕನಿಷ್ಠ ಆರೋಗ್ಯ ಸೇವೆಗಳನ್ನು ಗ್ರಾಮ ಮಟ್ಟದಲ್ಲಿ ಒದಗಿಸಲು ಕರ್ನಾಟಕ ಸರ್ಕಾರವು ಪ್ರಪ್ರಥಮ ಬಾರಿಗೆ ಸಂಚಾರಿ ಆರೋಗ್ಯ ಘಟಕಗಳ ಸೇವೆಯನ್ನು ಪ್ರಾರಂಭಿಸಿದೆ.
ಸಂಚಾರಿ ಆರೋಗ್ಯ ಘಟಕ ಸೇವೆಗೆ ಹೊಸ ಟೆಂಪೋ ಟ್ರಾವಲರ್ ವಾಹನಗಳನ್ನು ಬಳಸಲಾಗಿದೆ.ಇದನ್ನು ಸೇವೆಗೆ ಅನುಗುಣವಾಗಿ ಪ್ಯಾಬ್ರಿಕೇಶನ್ ಮಾಡಲಾಗಿದೆ. ಈ ವಾಹನದೊಳಗೆ ಅಗತ್ಯ ಪೀಠೋಪಕರಣಗಳು, ಔಷಧಿಗಳು, ಲ್ಯಾಬ್ ವಸ್ತುಗಳನ್ನು ಒದಗಿಸಲಾಗಿದೆ. ಇದರಲ್ಲಿ ತಲಾ ಓರ್ವ ಎಂ.ಬಿ.ಬಿ.ಎಸ್ ವೈದ್ಯರು, ಶುಶ್ರೂಶಕರು, ಔಷಧಿ ವಿತರಕರು, ಕಿರಿಯ ಮಹಿಳಾ ಆರೋಗ್ಯ ಸಹಾಯಕರು, ಪ್ರಯೋಗಾಲಯ ತಜ್ಞರು ಮತ್ತು ವಾಹನ ಚಾಲಕರಿರುತ್ತಾರೆ. 

Advertisement

Advertisement

ಈ ಸಂಚಾರಿ ಆರೋಗ್ಯ ಘಟಕಗಳು ಪ್ರತಿ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10-00 ಗಂಟೆಯಿಂದ ಮದ್ಯಾಹ್ನ 1-ಗಂಟೆಯವರೆಗೆ ಒಂದು ಹಳ್ಳಿಯಲ್ಲಿ ಮತ್ತು ಮಧ್ಯಾಹ್ನ 2-30 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ ಮತ್ತೊಂದು ಹಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಪ್ರತಿ ಸಂಚಾರಿ ಆರೋಗ್ಯ ಘಟಕಗಳಿಗೆ 13 ರಿಂದ 15 ಹಳ್ಳಿಗಳನ್ನು ನಿಗದಿಪಡಿಸಲಾಗಿದೆ. ಇಂತಹ ಪ್ರತಿ ಹಳ್ಳಿಗೆ ಸಂಚಾರಿ ಆರೋಗ್ಯ ಘಟಕವು ತಿಂಗಳಲ್ಲಿ ಕನಿಷ್ಠ ನಾಲ್ಕು ಅಥವಾ ಐದು ಬಾರಿ ಭೇಟಿ ನೀಡುತ್ತದೆ. 
ಸಂಚಾರಿ ಆರೋಗ್ಯ ಘಟಕವು ನಿಗದಿತ ಹಳ್ಳಿಗೆ ಪ್ರತಿ ದಿನ ಭೇಟಿ ನೀಡಿ, ಆರೋಗ್ಯ ತಪಾಸಣೆ, ಪ್ರಯೋಗಾಲಯ ಪರೀಕ್ಷೆ ಮತ್ತು ಔಷಧಿಗಳನ್ನು ಸಮಾಜದ ಎಲ್ಲಾ ವರ್ಗಗಳ ಜನರಿಗೆ ಉಚಿತವಾಗಿ ನೀಡುತ್ತದೆ. ಸಂಚಾರಿ ಆರೋಗ್ಯ ಘಟಕವು ಗ್ರಾಮದ ಜನರಿಗೆ ದೀರ್ಘಕಾಲದ ಕಾಯಿಲೆಗಳಾದ ಸಕ್ಕರೆ ಖಾಯಿಲೆ, ರಕ್ತದೊತ್ತಡ, ಕೀಲು ನೋವು, ಶ್ವಾಸಕೋಶದ ಕಾಯಿಲೆಗಳಿಗೆ ತಪಾಸಣೆ, ಚಿಕಿತ್ಸೆ, ಅನುಸರಣೆ ಮತ್ತು ವಾರಕ್ಕೆ ಬೇಕಾದ ಔಷಧಿಗಳನ್ನು ಉಚಿತವಾಗಿ ನೀಡುತ್ತದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement