ರಾಜ್ಯ

ಬೆಳ್ಳಂದೂರು ಕೆರೆ: ಭರದಿಂದ ಸಾಗುತ್ತಿರುವ ಕಳೆ ಕೀಳುವ ಕೆಲಸ

Sumana Upadhyaya
ಬೆಂಗಳೂರು: ಕಳೆ ಕೊಯ್ಲುಗಾರರ ಸಹಾಯದಿಂದ ಬೆಳ್ಳಂದೂರು ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೈಗೊಂಡಿದೆ. ನಿನ್ನೆ ಮುಂಬೈಯ ಮತ್ತೊಬ್ಬ ಕಳೆ ಕೊಯ್ಲು ಯಂತ್ರವನ್ನು ಕರೆತಂದು ದಟ್ಟವಾಗಿ ನೀರಿನಲ್ಲಿ ಆವೃತ್ತವಾದ ಕಳೆಯನ್ನು ಕೀಳಲಾಯಿತು. ನಾಡಿದ್ದಿನಿಂದ ಒಟ್ಟು 4 ಕಳೆ ಕೊಯ್ಲುಗಾರರ ನೆರವಿನಿಂದ ಕೆರೆಯನ್ನು ಸ್ವಚ್ಛಗೊಳಿಸಲಾಗುವುದು ಎಂದು ಹೇಳಿದರು.
ಪ್ರತಿ ಯಂತ್ರವು ಪ್ರತಿದಿನ 25 ಟನ್ ಕಳೆಯನ್ನು ಕೀಳುವ ಸಾಮರ್ಥ್ಯ ಹೊಂದಿದ್ದು ಬೆಳಗ್ಗೆ 7ರಿಂದ ಸಾಯಂಕಾಲ 7 ಗಂಟೆಯವರೆಗೆ ಕಳೆ ಕೊಯ್ಯಲಾಗುತ್ತದೆ. ನಾಲ್ಕು ಯಂತ್ರಗಳು ಇಡೀ ದಿನ ಕಾರ್ಯನಿರ್ವಹಿಸಲಿದ್ದು ಇನ್ನು ಎರಡು ತಿಂಗಳಲ್ಲಿ ಕೆರೆ ಸಂಪೂರ್ಣ ಸ್ವಚ್ಛಗೊಳ್ಳುವ ನಿರೀಕ್ಷೆಯಿದೆ.
ಚಲ್ಲಘಟ್ಟ ತೀರದಲ್ಲಿ ಕಳೆ ದಟ್ಟವಾಗಿ ಬೆಳೆದಿದ್ದು ಅದನ್ನು ತೆಗೆಯಲು ಸಾಕಷ್ಟು ಶ್ರಮ ಬೇಕು. ಕಳೆ ಸಾಮಾನ್ಯವಾಗಿ ತೇಲುತ್ತಿರುತ್ತದೆ. ಆದರೆ ಬೆಳ್ಳಂದೂರು ಕೆರೆಯಲ್ಲಿ ತಳಮಟ್ಟದಿಂದಲೇ ಬೆಳೆದಿರುವುದರಿಂದ ಕಳೆ ದಟ್ಟವಾಗಿ ಅಂಟಿಕೊಂಡಿದೆ. ಅವುಗಳನ್ನು ಕೀಳಲು ಸಾಕಷ್ಟು ಸಮಯ ಬೇಕು ಎನ್ನುತ್ತಾರೆ ನಾಗರಾಜ್.
ಅಧಿಕ ಪ್ರಮಾಣದಲ್ಲಿರುವ ಕಳೆಯನ್ನು ಎಲ್ಲಿ ರಾಶಿ ಹಾಕುವುದು ಎಂಬ ಸಮಸ್ಯೆ ಕೂಡ ಅಧಿಕಾರಿಗಳಿಗೆ. ಸದ್ಯ ಕೆರೆಯ ದಂಡೆಯಲ್ಲಿ ಕಳೆಯನ್ನು ರಾಶಿ ಹಾಕಲಾಗುತ್ತದೆ. ಮಿಶ್ರಗೊಬ್ಬರ ಘಟಕಗಳು ಅಥವಾ ಕ್ವಾರಿ ಹೊಂಡಗಳಿಗೆ ಕಳೆಗಳನ್ನು ಸಾಗಿಸಲು ಅಧಿಕಾರಿಗಳು ಯೋಚಿಸುತ್ತಿದ್ದಾರೆ.
ಮಡಿವಾಳ ಕೆರೆಯಿಂದ ಕಳೆಗಳನ್ನು ಸಾಗಿಸಿದ ಮಾದರಿಯಲ್ಲಿಯೇ ಬೆಳ್ಳಂದೂರು ಕೆರೆಯಿಂದಲೂ ಸಾಗಿಸುವ ಯೋಜನೆಯಲ್ಲಿದ್ದಾರೆ.
SCROLL FOR NEXT