ರಾಜ್ಯ

ಅಧಿಕಾರಿಗೆ ನಿಂದಿಸಿದ ಶಾಸಕ ಭೀಮಾ ನಾಯ್ಕ: ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಆಡಿಯೋ

Shilpa D
ಬಳ್ಳಾರಿ: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಾ ನಾಯ್ಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (ಸಿ.ಡಿ.ಪಿ.ಒ) ಪ್ರಭಾಕರ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆಡಿಯೊ ಎಲ್ಲೆಡೆ ಹರಿದಾಡುತ್ತಿದೆ. 
ತಾಲ್ಲೂಕಿನ ಜಿ. ನಾಗಲಾಪುರ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ 2012ರಲ್ಲಿ ಅರ್ಜಿ ಕರೆಯಲಾಗಿತ್ತು. ಇದಕ್ಕೆ ಸ್ಥಳೀಯರಿಂದ 4 ಅರ್ಜಿಗಳು ಬಂದಿದ್ದು, ಅದರಲ್ಲಿ ಒಬ್ಬರು ನೇಮಕಗೊಂಡಿದ್ದರು.
ಅರ್ಜಿದಾರರ ಪೈಕಿ ಒಬ್ಬರು ಹೈಕೋರ್ಟ್ ಮೊರೆ ಹೋಗಿ ಇದಕ್ಕೆ ತಡೆಯಾಜ್ಞೆ ತಂದಿದ್ದರು. ಈವರೆಗೂ ತಡೆ ತೆರವಾಗದ ಕಾರಣ ಪಕ್ಕದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಈ ಕೇಂದ್ರ ನೋಡಿಕೊಳ್ಳುತ್ತಿದ್ದಾರೆ.
ಈ ವಿಚಾರವಾಗಿ ಕರೆ ಮಾಡಿದ್ದ ಶಾಸಕ ಭೀಮಾ ನಾಯ್ಕ ತಡೆಯಾಜ್ಞೆಯನ್ನು ಯಾತೆ ಕೆರವುಗೊಳಿಸಿಲ್ಲ ಎಂದು ಪ್ರಶ್ನಿಸಿದ್ದಾರೆ,. ಇದಕ್ಕೆ ಉತ್ತರಿಸಿದ ಸಿಡಿಪಿಓ ಪ್ರಕರಣ ಹೈಕೋರ್ಟ್ ನಲ್ಲಿರುವುದರಿಂದ ತಾವು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಶಾಸಕರು ಅಧಿಕಾರಿಯನ್ನವು ನಿಂದಿಸಿದ್ದಾರೆ. ತನ್ನನ್ನು ಏಕೆ ನಿಂದಿಸಿರುವುದಾಗಿ ಪ್ರಭಾಕರ್ ಪ್ರಶ್ನಿಸಿದ್ದಾರೆ. ಈ ಆಡಿಯೋ ವಾಟ್ಸ್ ಅಪ್ ಗಳಲ್ಲಿ ಹರಿದಾಡುತ್ತಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸಮರ್ಥನೆ ನೀಡಿರುವ ಶಾಸಕ ಭೀಮಾನಾಯ್ಕ. ತಡೆಯಾಜ್ಞೆ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಅಧಿಕಾರಿಯ ಕರ್ತವ್ಯವಾಗಿದೆ, ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಕೆಲಸ ಮಾಡಬೇಕಿತ್ತು, ಆದರೆ ಅವರು ಈ ಕೆಲಸ ಮಾಡಲಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. 
SCROLL FOR NEXT