ಮಂಗಳೂರು: ನಗರದ ಮಾರ್ಣಮಿಕಟ್ಟೆ ಅಪಾರ್ಟ್ ಮೆಂಟ್ ನ ಏಳನೇ ಮಹಡಿಯಿಂದ ಒಂದೂವರೆ ವರ್ಷದ ಮಗು ಕೆಳಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮನೆಯ ಹೊರಗೆ ಬಾಲ್ಕನಿಯಲ್ಲಿ ಕುರ್ಚಿಯಲ್ಲಿ ಮಗು ಮೊಹಮ್ಮದ್ ಶಾನ್ ಕುಳಿತು ಆಟವಾಡುತ್ತಿದ್ದಾಗ ಗ್ರಿಲ್ ಮೇಲೆ ಹತ್ತಿದ್ದಾನೆ. ಆ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾನೆ. ಘಟನೆ ನಿನ್ನೆ ಸಂಜೆ ನಡೆದಿದೆ.
ಮಗು ಹೊರಗಿದ್ದಾಗ ಮಗುವಿನ ತಾಯಿ ಮನೆಯೊಳಗೆ ಏನೋ ಕೆಲಸ ಮಾಡುತ್ತಿದ್ದರು. ಶಾನ್ ನ ತಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
ಅಸ್ವಾಭಾವಿಕ ಸಾವು ಎಂದು ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.