ಬೆಂಗಳೂರು: ಪೊಲೀಸರ ಬೇಕಾಬಿಟ್ಟಿ ವರ್ಗಾವಣೆಯನ್ನು ವಿರೋಧಿಸಿ ಸಿಎಂ ಹಾಗೂ ಸಂಪುಟದ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ.
ಪೊಲೀಸರ ಮಿನಿಟ್ ಅಧಾರಿತ ವರ್ಗಾವಣೆಯಲ್ಲಿ ಸಚಿವರ ಹಸ್ತಕ್ಷೇಪ ಇದೆ ಎಂದು ದೂರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿ 28 ಸಚಿವರ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಕೆಯಾಗಿದೆ. ಪೊಲೀಸ್ ಮಹಾ ಸಭಾ ಅಧ್ಯಕ್ಷ ವಿ. ಶಶಿಧರ್ ಅವರು ದೂರು ಸಲ್ಲಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಸಚಿವರ ಹಸ್ತಕ್ಷೇಪ ಇದ್ದು, ಇದು ಸುಪ್ರೀಂ ಕೋರ್ಟ್ ಅದೇಶ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನಂತೆ ರಾಜ್ಯದಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಅದರ ಪ್ರಕಾರ ‘ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಬೋರ್ಡ್’ ಮೂಲಕ ವರ್ಗಾವಣೆ ಮಾಡಬೇಕು. ಅದರೆ, ಸಿಎಂ ಸೇರಿ ಸಚಿವರು ತಮ್ಮ ಮಿನಿಟ್ ನೀಡಿ ಬೇಕಾದವರ ವರ್ಗಾವಣೆ ಮಾಡಿದ್ದಾರೆ ಮತ್ತು ಇದರಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಶಶಿಧರ್ ದೂರಿದ್ದಾರೆ.
ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಆದೇಶದ ಆಧಾರದ ಮೇಲೆ ದೂರು ಸಲ್ಲಿಸಿರುವ ಮಹಾಸಭಾ, ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಸಚಿವರ ಹಸ್ತಕ್ಷೇಪ ಸರಿಯಲ್ಲ. ಇದು ಕೋರ್ಟ್ ಆದೇಶದ ಉಲ್ಲಂಘನೆ ಎಂದು ಆರೋಪಿಸಿದೆ.
ಸುಪ್ರೀಂಕೋರ್ಟ್ ತೀರ್ಪಿನಂತೆ ರಾಜ್ಯದಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್ ಮೂಲಕ ವರ್ಗಾವಣೆ ಮಾಡಬೇಕು. ಆದರೆ ಸಿಎಂ ಸೇರಿ ಸಚಿವರು ತಮ್ಮ ಪ್ರಭಾವ ಬಳಸಿ ವರ್ಗಾವಣೆ ಮತ್ತು ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಈ ಹಿಂದೆ ವಿ. ಶಶಿಧರ್ ಎಸಿಬಿಗೂ ದೂರು ನೀಡಿದ್ದರು. ಆದರೆ, ವರ್ಗಾವಣೆ ಆಡಳಿತಾತ್ಮಕ ವಿಚಾರವೆಂದು ಎಸಿಬಿ ಪ್ರಕರಣ ದಾಖಲಿಸಿಕೊಂಡಿರಲಿಲ್ಲ.