ಬೆಂಗಳೂರು: ಮೆಟ್ರೋ ರೈಲ್ ಕಾರ್ಪ್ ಮಾಯಸಂದ್ರ ಕೆರೆಗೆ ಕಾಂಕ್ರೀಟ್ ತ್ಯಾಜ್ಯ ಸುರಿಯುತ್ತಿದೆ ಎಂಬ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಎಂಆರ್ ಸಿಎಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೆಟ್ರೋ ಫೇಸ್-II ರ ಕಾಮಗಾರಿಯ ಕಾಂಕ್ರೀಟ್ ತ್ಯಾಜ್ಯವನ್ನು ಕೆರೆಗೆ ಸುರಿಯುತ್ತಿರುವುದರ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ವರದಿ ಪ್ರಕಟವಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡಿರುವ ಬಿಎಂಆರ್ ಸಿಎಲ್ ವಕ್ತಾರ ವಸಂತ್ ರಾವ್ ಈ ಬಗ್ಗೆ ಪರಿಶೀಲನೆ ನಡೆಸಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಧಿಕಾರಿಗಳಿಂದ ವರದಿ ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಕೆರೆಯ ಬಳಿ ಹಾಗೂ ಬಫರ್ ಜೋನ್ ಗಳ ಬಳಿ ಒಣ ಅಥವಾ ಹಸಿ ತ್ಯಾಜ್ಯ ಸುರಿಯುವವರಿಗೆ 5 ಲಕ್ಷ ದಂಡ ವಿಧಿಸುವುದಾಗಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ಕೆಎಲ್ ಸಿಡಿಎ) ಎಚ್ಚರಿಕೆ ನೀಡಿದ್ದರೂ ಸಹ ಮಾಯಸಂದ್ರ ಕೆರೆಯ ಬಳಿ ಕಾಂಕ್ರೀಟ್ ತ್ಯಾಜ್ಯವನ್ನು ಸುರಿಯಲಾಗುತ್ತಿರುವುದರ ಬಗ್ಗೆ ಮೇ.09 ರಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಟಿಸಿತ್ತು.