ರಾಜ್ಯ

ಕರ್ನಾಟಕ ಉಸ್ತುವಾರಿ ವೇಣುಗೋಪಾಲ್ ಬಳಿ ದೂರಿನ ಮೂಟೆ ಹೊತ್ತು ಬಂದ ಕಾಂಗ್ರೆಸ್ ನಾಯಕರು

Sumana Upadhyaya
ಬೆಂಗಳೂರು: ಮಂತ್ರಿಗಳು ಮತ್ತು ಶಾಸಕರುಗಳ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಲು ಸಾಲು ಸಾಲು ಆಗಮಿಸಿದ್ದರು. ಆದರೆ ಸಮಯಾಭಾವದಿಂದಾಗಿ ತಮ್ಮ ಅನೇಕ ಸಮಸ್ಯೆಗಳನ್ನು ಹೇಳಿಕೊಳ್ಳಲು, ಅಭಿಪ್ರಾಯ ಕೇಳಲು ಗುಂಪಾಗಿ ವೇಣುಗೋಪಾಲ್ ಅವರ ಬಳಿಗೆ ಹೋಗಬೇಕಾಯಿತು.
ಕಾಂಗ್ರೆಸ್ ನ ಅನೇಕ ಹಿರಿಯ ನಾಯಕರಿಗೆ ಪಕ್ಷದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಲು ಸಮಯವೇ ಸಿಗಲಿಲ್ಲ. ಅನೇಕ ಶಾಸಕರು ತಮ್ಮ ಜಿಲ್ಲೆಗಳು ಮತ್ತು ಆ ಜಿಲ್ಲೆಗಳಲ್ಲಿ ಸಂಘಟನೆ ಕೊರತೆ ಬಗ್ಗೆ ಹೇಳಿಕೊಂಡರು.
ಪಕ್ಷದಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ದೊಡ್ಡದೆನ್ನುವಂತೆ ಬಿಂಬಿಸಲಾಯಿತು. ಎ.ಎಚ್. ವಿಶ್ವನಾಥ್ ನಂತಹ ಕೆಲವು ನಾಯಕರು ಹೇಳಿರುವಂತೆ ಪಕ್ಷದಲ್ಲಿ ಪರಿಸ್ಥಿತಿ ಅಷ್ಟು ಹದಗೆಟ್ಟಿದ್ದರೆ ಉಪ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಹಿರಿಯ ನಾಯಕರ ಅನಿಸಿಕೆಯಾಗಿದೆ.
SCROLL FOR NEXT