ಬೆಂಗಳೂರು: ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್‌ಟಿಸಿ) ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು ಇನ್ನುಂದೆ ಕೆಎಸ್ಆರ್‌ಟಿಸಿ ಎಸಿ ಬಸ್ ಗಳಲ್ಲಿ ನೀರಿನ ಬಾಟಲ್, ಪತ್ರಿಕೆ ಸೇರಿದಂತೆ ಉಚಿತ ವೈಫೈ ಸೇವೆಯನ್ನು ಒದಗಿಸಲು ಮುಂದಾಗಿದೆ.
ಸಾಮಾನ್ಯ ಬಸ್, ಎಸಿ ಬಸ್ ಗಳು ಸೇರಿದಂತೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ಒದಗಿಸುವ ಟೆಂಡರ್ಗೆ ಕೆಎಸ್ಆರ್‌ಟಿಸಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ಅಂದರಂತೆ ರಾಜ್ಯದಲ್ಲಿರುವ 18 ಸಾವಿರ ಬಸ್(ಕೆಎಸ್ಆರ್‌ಟಿಸಿ, ಈಶಾನ್ಯ, ನೈರುತ್ಯ ಸಾರಿಗೆ) ಗಳಲ್ಲಿ ಪ್ರಯಾಣಿಕರಿಗೆ ಉಚಿತ ವೈಫೈ ಸೇವೆ ಸಿಗಲಿದೆ ಎಂದು ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್ ಆರ್ ಉಮಾಶಂಕರ್ ಹೇಳಿದ್ದಾರೆ.
ಸದ್ಯ ರಾಜ್ಯದ 24 ಬಸ್ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ಆರಂಭವಾಗಿದ್ದು ಇದನ್ನು 458 ಬಸ್ ನಿಲ್ದಾಣಗಳಲ್ಲಿ ಆರಂಭಿಸಲು ಯೋಜನೆ ಕೈಗೊಳ್ಳಲಾಗಿದೆ. ಇನ್ನು ಎಸಿ ಬಸ್ ಗಳಲ್ಲಿ ವೈಫೈ ಜತೆಗೆ ಬಾಟಲ್ ನೀರು ಮತ್ತು ಸುದ್ದಿ ಪತ್ರಿಕೆಗಳನ್ನು ನೀಡಲಾಗುತ್ತದೆ. ಬೆಳಿಗ್ಗೆ 5 ಗಂಟೆಯಿಂದ 11 ಗಂಟೆ ಕಾಲಾವಧಿಯಲ್ಲಿ ಸುದೀರ್ಘ ಪ್ರಯಾಣ ಪ್ರಾರಂಭಿಸುವ ಬಸ್ ಗಳಲ್ಲಿ ಸುದ್ದಿ ಪತ್ರಿಕೆಗಳನ್ನು ನೀಡಲಿದ್ದು ಸರಿಸುಮಾರು 4500 ಸುದ್ದಿ ಪತ್ರಿಕೆಗಳನ್ನು ದಿನಂಪ್ರತಿ ನೀಡಲಾಗುವುದು ಎಂದರು.