ಸಾಂದರ್ಭಿಕ ಚಿತ್ರ 
ರಾಜ್ಯ

ಕಬೋರ್ಡ್ ನಲ್ಲಿ ಶವ ಸಿಕ್ಕ ಪ್ರಕರಣ: ಮೊಮ್ಮಗನನ್ನು ಬಂಧಿಸಿದ ಕೆಂಗೇರಿ ಪೊಲೀಸರು

ಅಜ್ಜಿಯನ್ನು ಕೊಂದು ಶವವನ್ನು ಕಬೋರ್ಡ್ ನಲ್ಲಿ ಬಚ್ಚಿಟ್ಟಿದ್ದ ಪ್ರಕರಣ ಸಂಬಂಧ ಕೆಂಗೇರಿ ಪೊಲೀಸರು ಆರೋಪಿಯನ್ನು...

ಬೆಂಗಳೂರು: ಅಜ್ಜಿಯನ್ನು ಕೊಂದು ಶವವನ್ನು ಕಬೋರ್ಡ್ ನಲ್ಲಿ ಬಚ್ಚಿಟ್ಟಿದ್ದ ಪ್ರಕರಣ ಸಂಬಂಧ ಕೆಂಗೇರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ,
2016ರ ಆಗಸ್ಟ್ ತಿಂಗಳಲ್ಲಿ ಶಾಂತಕುಮಾರಿ ಅವರಿಗೆ ತಿನ್ನಲು ಮೊಮ್ಮಗ ಸಂಜಯ್ ಊಟ ತಂದಿದ್ದ, ಆದರೆ ಶಾಂತಕುಮಾರಿ ತಿನ್ನಲು ನಿರಾಕರಿಸಿದ್ದರು, ಇದರಿಂದ ಕೋಪಗೊಂಡ ಸಂಜಯ್ ದೋಸೆ ಪ್ಯಾನ್ ನಿಂದ ತಲೆ ಮೇಲೆ ಹೊಡೆದಿದ್ದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದರು. 
ಶಾಂತಕುಮಾರಿ ಪುತ್ರಿ ಹಾಗೂ ಸಂಜಯ್ ತಾಯಿ ಶಶಿಕಲಾ ಗೆ ಈ ವಿಷಯ ತಿಳಿಯಿತು. ಕೂಡಲೇ ಆಕೆ ಪೊಲೀಸರಿಗೆ ವಿಷಯ ತಿಳಿಸುವಂತೆ ಮಗನಿಗೆ ಹೇಳಿದ್ದಾರೆ. ಆದರೆ ತಾಯಿಯ ಮನವೊಲಿಸಿದ ಸಂಜಯ್ ಈ ವಿಷಯ ಹೇಳಿದರೆ ತನ್ನ ಭವಿಷ್ಯಕ್ಕೆ ತೊಂದರೆ ಉಂಟಾಗುತ್ತದೆ, ಹೀಗಾಗಿ ಯಾರಿಗೂ ಹೇಳುವುದು ಬೇಡವೆಂದು ತಿಳಿಸಿದ,
ತನ್ನ ಸ್ನೇಹಿತ ನಂದೀಶನಿಗೆ ಕರೆ ಮಾಡಿದ ಸಂಜಯ್ ಶವವನನ್ನು ಶಿಫ್ಟ್ ಮಾಡಲು ಸಹಾಯ ಕೋರಿದ್ದ, ಆದರೇ ಮನೆಯಿಂದ ಶವವನ್ನು ಹೊರಗೆ ಸಾಗಿಸುವುದು ಅಸಾಧ್ಯ ಎಂದು ತಿಳಿದ ನಂತರ, ಕಬೋರ್ಡ್ ನ ಒಳಗೆ  ಹಳ್ಳ ತೋಡಿ, ಅದರಲ್ಲಿ ಶವವನ್ನು ಹಾಕಿ, ನಂತರ ಶವವನ್ನು ಸಿಮೆಂಟ್ ನಿಂದ ಪ್ಲಾಸ್ಟರ್ ಮಾಡಿದ್ದರು.
ಎರಡು ದಿನ ಕಳೆದ ನಂತರ ಕಬೋರ್ಡ್ ನಿಂದ ಶವದ ವಾಸನೆ ಬಂದ ಹಿನ್ನೆಲೆಯಲ್ಲಿ ಶಶಿಕಲಾ ಮತ್ತು ಸಂಜಯ್ ಮನೆ ಬಿಟ್ಟು ತೆರಳಿದ್ದರು.
ಮೇ 7 ರಂದು ಮನೆ ಮಾಲೀಕ ನವೀನ್ ಮನೆಯಲ್ಲಿ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರಿಗೆ ವಿಷಯ ತಿಳಿಸಿದ್ದರು, ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಮೊದಲು ಸಂಜಯ್ ಸ್ನೇಹಿತ ನಂದೀಶ್ ನನ್ನು ಬಂಧಿಸಿದ್ದರು, ನಂತರ ಆತನ ವಿಚಾರಣೆ ನಡೆಸಿ ಶಿವಮೊಗ್ಗದ ಸಾಗರದಲ್ಲಿ ಸಂಜಯ್ ನನ್ನು ಬಂಧಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT