ವಿಧಾನಸೌಧ 
ರಾಜ್ಯ

ವಿಧಾನಸೌಧ ನಿರ್ವಹಣೆ ಆದೇಶ ತಿರಸ್ಕರಿಸಿದ ಪಿಡಬ್ಲ್ಯೂಡಿ: ಸ್ಪೀಕರ್ ಗೆ ಮುಖಭಂಗ

ವಿಧಾನ ಸೌಧ ನಿರ್ವಹಣೆಗೆ ಸಂಬಂಧಿಸಿದಂತೆ ಉಭಯ ಸದನಗಳ ಸ್ಪೀಕರ್ ಗಳು ನೀಡಿದ್ದ ನಿರ್ದೇಶನವನ್ನು ಲೋಕೋಪಯೋಗಿ ಇಲಾಖೆ ತಿರಸ್ಕರಿಸಿದ್ದು,

ಬೆಂಗಳೂರು: ವಿಧಾನ ಸೌಧ ನಿರ್ವಹಣೆಗೆ ಸಂಬಂಧಿಸಿದಂತೆ ಉಭಯ ಸದನಗಳ ಸ್ಪೀಕರ್ ಗಳು ನೀಡಿದ್ದ ನಿರ್ದೇಶನವನ್ನು ಲೋಕೋಪಯೋಗಿ ಇಲಾಖೆ ತಿರಸ್ಕರಿಸಿದ್ದು, ಇದರಿಂದ ವಿಧಾನಸಭೆ ಮತ್ತು ವಿಧಾನ ಪರಿಷತ್ ಸಭಾಧ್ಯಕ್ಷರುಗಳಿಗೆ ಮುಜುಗರ ಉಂಟಾಗಿದೆ.
ವಿಧಾನಸೌಧದ ಒಂದು ಮತ್ತು ಎರಡನೆ ಮಹಡಿ, ಶಾಸಕರ ಭವನ, ಬೆಳಗಾವಿ ಸುವರ್ಣಸೌಧ, ಸಿವಿಲ್‌ ಮತ್ತು ಎಲೆಕ್ಟ್ರಿಕಲ್‌ ಕಾಮಗಾರಿಗಳನ್ನು  ನಿಯಂತ್ರಣಕ್ಕೆ ಪಡೆಯುವ ಸಂಬಂಧ ವಿಧಾನಸಭೆ ಸಚಿವಾಲಯ ಇದೇ 3ರಂದು ಆದೇಶ ಹೊರಡಿಸಿತ್ತು. ಅದರಂತೆ ವಿಧಾನಸೌಧದ ನಿರ್ವಹಣೆ ಹೊಣೆಯನ್ನು ಸಚಿವಾಲಯಕ್ಕೆ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಆದೇಶಿಸಿತ್ತು. 
ಶಾಸನಗಳನ್ನು ರೂಪಿಸಬೇಕಾದ ವಿಧಾನಸಭೆ ಸಚಿವಾಲಯ, ಕಾಮಗಾರಿಗಳ ವಿಷಯದಲ್ಲಿ ಮೂಗು ತೂರಿಸುವುದು ಸರಿಯಲ್ಲ ಎಂದು ಸಚಿವರು ಆಕ್ಷೇಪ ವ್ಯಕ್ತವಾಗಿತ್ತು.
ವಿಧಾನಸೌಧ ನಿರ್ಮಾಣವಾದಾಗಿನಿಂದಲೂ ಲೋಕೋಪಯೋಗಿ ಇಲಾಖೆಯೇ  ಸರ್ಕಾರಿ ಕಚೇರಿಗಳ ಮತ್ತು ವಿಧಾನಸೌಧದ ನಿರ್ವಹಣೆ ನೋಡಿಕೊಂಡು ಬರುತ್ತಿದೆ. ಈ ಆದೇಶದ ಹಿಂದೆ ಯಾವ ಉದ್ದೇಶ ಅಡಗಿದೆ ಎಂಬುದು ನಮಗೆ ತಿಳಿಯುತ್ತಿಲ್ಲ,  ನಿರ್ಮಾಣ ಮತ್ತು ನಿರ್ವಹಣೆ ನಮ್ಮ ಮೂಲ ಜವಾಬ್ದಾರಿ, ಮಾಡಲು ನಮಗೆ ಅವಶ್ಯಕವಾದ ಸಂಪನ್ಮೂಲಗಳಿವೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸ್ಪೀಕರ್ ಆದೇಶ ಸರ್ಕಾರದ ಆದೇಶವಲ್ಲ, ‘ವಿಧಾನಸೌಧ ಲೋಕೋಪಯೋಗಿ ಇಲಾಖೆಗೆ ಸೇರಿದ ಸ್ವತ್ತು. ಈ ಬಗ್ಗೆ  ಇಲಾಖೆ  ಪ್ರಧಾನ ಕಾರ್ಯದರ್ಶಿ ಹೊರಡಿಸುವ ಆದೇಶ  ಮಾತ್ರ ಅಧಿಕೃತ ಆಗುತ್ತದೆ, ವಿಧಾನಸೌಧದ ನಿರ್ವಹಣೆ ಕೆಲಸವನ್ನು ಸಚಿವಾಲಯಕ್ಕೆ ಯಾವುದೇ ಕಾರಣಕ್ಕೂ ನೀಡುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ ಮಹಾದೇವಪ್ಪ ಹೇಳಿದ್ದಾರೆ.
ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ  ಏನಿದೆ, ಸಚಿವಾಲಯ ಅಥವಾ ಲೋಕೋಪಯೋಗಿ ಇಲಾಖೆ ಯಾರಾದರೂ ನಿರ್ವಹಿಸಲಿ, ಅಂತಿಮವಾಗಿ ಹೇಗೆ ನಿರ್ವಹಣೆ ಮಾಡಿದ್ದಾರೆ ಎಂಬುದಷ್ಟೆ ಮುಖ್ಯವಾಗುತ್ತದೆ ಎಂದು ಕೋಳಿವಾಡ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT