ರಾಜ್ಯ

ಮನೆ ಬಾಗಿಲಿಗೆ ಕ್ಯಾಬ್, ಪ್ರವಾಸೋದ್ಯಮ ಇಲಾಖೆಯಿಂದ ಟೂರ್ ಪ್ಯಾಕೇಜ್

Sumana Upadhyaya
ಬೆಂಗಳೂರು: ನಿಮ್ಮ ಕಣ್ಣಿಗೂ, ಬಾಯಿಗೂ ಸ್ವಾದ. ಇದು ಪ್ರವಾಸೋದ್ಯಮ ಇಲಾಖೆಯ 'ಬೆಂಗಳೂರು ಡಿಟಾಕ್ಸ್' ಸೇವೆಯ ಉದ್ದೇಶವಾಗಿದೆ.
ನಿಮ್ಮ  ಮನೆ ಬಾಗಿಲಿನಿಂದ ಕರೆದುಕೊಂಡು ಹೋಗುವುದು, ಸುವಾಸನೆಯ ಕೆಲವು ಸ್ಥಳೀಯ ತಿನಿಸುಗಳನ್ನು ಸೇವಿಸುವುದು, ನಗರದ ಪ್ರಮುಖ ಸ್ಥಳಗಳ ವೀಕ್ಷಣೆಯನ್ನು ಒಳಗೊಂಡಿದೆ. ಖಾಸಗಿ ಆಪ್ ಆಧಾರಿತ ಕ್ಯಾಬ್ ಗಳನ್ನು ಪಡೆಯುವ ಮೂಲಕ ಪ್ರವಾಸೋದ್ಯಮ ಇಲಾಖೆ  ಈ ಸೇವೆಯನ್ನು ಆರಂಭಿಸಲು ಯೋಜನೆ ರೂಪಿಸುತ್ತಿದೆ.
ಪ್ರವಾಸಿ ಪ್ಯಾಕೆಜ್ ನಲ್ಲಿ ಕೆಲವು ಸ್ಥಳಗಳನ್ನು ಗುರುತಿಸಿ ನಂತರ ಕಬ್ಬನ್ ಪಾರ್ಕ್, ಲಾಲ್ ಬಾಗ್, ಟಿಪ್ಪು ಅರಮನೆ, ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಸಂಗ್ರಹಾಲಯ, ಬನ್ನೇರುಘಟ್ಟ ಮೃಗಾಲಯ, ನಂದಿ ಬೆಟ್ಟ ಮೊದಲಾದವುಗಳನ್ನು ಒಳಗೊಂಡಿದೆ. ಪಟ್ಟಿಯಲ್ಲಿ ಶ್ರೀರಂಗಪಟ್ಟಣ ಮತ್ತು ಮೈಸೂರು ಕೂಡ ಇದೆ.
ಖಾಸಗಿ ಮೊಬೈಲ್ ಆಪ್ ಆಧಾರಿತ ಕ್ಯಾಬ್ ಸೇವೆಯ ಸಹಾಯದಿಂದ ಇಲಾಖೆ ಪ್ರವಾಸಿ ಸೇವೆಯನ್ನು ಆರಂಭಿಸಲಿದೆ. ಈ ಸೇವೆಗೆ ಮೀಸಲಾದ ಚಾಲಕರು ಕೆಲಸ ಮಾಡಲಿದ್ದಾರೆ. ಸೇವೆಗಳನ್ನು ಆನ್ ಲೈನ್ ನಲ್ಲಿ ಕಾಯ್ದಿರಿಸಬಹುದು ಎಂದರು. ಒಲಾ ಜೊತೆ ಕೈಜೋಡಿಸಲು ಇಲಾಖೆ ಪರಿಗಣಿಸುತ್ತದೆ.
ಪ್ರವಾಸೋದ್ಯಮ ಇಲಾಖೆ ನಿಗದಿಪಡಿಸಿದ ಮಾರ್ಗಗಳಲ್ಲಿ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಮೊಬೈಲ್ ಆಪ್ ನಲ್ಲಿ ಸೇವೆಗಳನ್ನು ಬುಕ್ ಮಾಡಬಹುದು. ಸಂಚಾರ, ಆಹಾರ, ಪ್ರವೇಶ ಶುಲ್ಕ, ಮಾರ್ಗದರ್ಶನ ಶುಲ್ಕಗಳು ದರಗಳಲ್ಲಿ ಸೇರಿವೆ. 
SCROLL FOR NEXT