500 ವರ್ಷ ಪುರಾತನವಾದ ಮಾವಿನ ತೋಪು
ಬೆಂಗಳೂರು: ಬಳ್ಳಾರಿ ಜಿಲ್ಲೆಯ ಹಂಪಿಯಲ್ಲಿ 500 ವರ್ಷ ಪುರಾತನವಾದ ಮಾವಿನ ತೋಪು ಪತ್ತೆಯಾಗಿದೆ. ಈ ತೋಪು ವಿಜಯ ನಗರ ಸಾಮ್ರಾಟ ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ಬೆಳೆಸಿರುವುದಾಗಿ ತಿಳಿದು ಬಂದಿದೆ.
ಈ ತೋಪು ವಿಶ್ವ ಪ್ರಸಿದ್ದ ಹಂಪಿಯಲ್ಲಿ ಪತ್ತೆಯಾಗಿದ್ದು, ಮೂರು ಮರಗಳು ಹಾಳಾಗಿವೆ ಇನ್ನೂ ತುಂಗಭದ್ರಾ ನದಿ ದಂಡೆಯ ಮೇಲಿರುವ ಹಲವು ಮರಗಳು ಉರುಳಿ ಬೀಳುವ ಸ್ಥಿತಿ ತಲುಪಿವೆ.
7ನೇ ಶತಮಾನಕ್ಕೂ ಹಿಂದಿನ ಹಂಪಿಯ ವಿರೂಪಾಕ್ಷ ದೇವಾಲಯದ ಬಳಿ ಮಾವಿನ ತೋಪು ಪತ್ತೆಯಾಗಿದ್ದು, 21 ಬಗೆಯ ವಿವಿಧ ಮಾವಿನ ಹಣ್ಣಿನ ತಳಿಯ ಮರಗಳಿವೆ, ಈ ಮರಗಳನ್ನು ಸುಮಾರು 300 ರಿಂದ 400 ವರ್ಷಗಳ ಹಿಂದೆ ನೆಟ್ಟು ಬೆಳಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಕೋತಿಗಳ ಹಾವಳಿಯಿಂದ ತಪ್ಪಿಸಿ ಕೊಳ್ಳಲು ಈ ತೋಪನ್ನು ಬೆಳೆಸಲಾಯಿತು. ಹಾಗಾಗಿ ಇದನ್ನು ಕೋತಿ ಮಾನ್ಯ ಎಂದು ಕರೆಯಲಾಗುತ್ತದೆ. ಈ ಮರದ ಹಣ್ಣುಗಳಸಿಹಿ ಸ್ವಲ್ಪ ಕಡಿಮೆಯಿದೆ.
ಇಂದಿಗೂ ಈ ಮರಗಳಲ್ಲಿ ಟನ್ ಗಟ್ಟಲೇ ಮಾವಿನ ಹಣ್ಣು ದೊರೆಯುತ್ತದೆ, ಪ್ರತಿಯೊಂದು ಮರ ಸುಮಾರು 80 ರಿಂದ 100 ಅಡಿ ಎತ್ತರ ಇವೆ. 13ರಿಂದ15 ಅಡಿ ದಪ್ಪ ಇರುವ ಮರಗಳಾಗಿವೆ.
ಈ ಪ್ರದೇಶವನ್ನು ಸಂಪೂರ್ಣವಾಗಿ ಪವಿತ್ರ ಪರಂಪರೆಯ ತಾಣ ಎಂದು ಗುರುತಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಬೆಂಗಳೂರು ಪರಿಸರ ಟ್ರಸ್ಟ್ ನ ಅಧ್ಯಕ್ಷ ಯಲ್ಲಪ್ಪ ರೆಡ್ಡಿ ಹೇಳಿದ್ದಾರೆ,ವಿಜಯನಗರ ಸಾಮ್ರಾಜ್ಯದ ಅರಸರು ಆಳಿದ ಕಾಲ ಅಂದರೆ 1536ರಲ್ಲಿ ಈ ಸ್ಥಳ ಸ್ಥಾಪನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.