ಸಾಂದರ್ಭಿಕ ಚಿತ್ರ 
ರಾಜ್ಯ

ಆನ್ ಲೈನ್ ಮಾರಾಟಕ್ಕೆ ವಿರೋಧ: ಮೇ 30ರಂದು ರಾಜ್ಯಾದ್ಯಂತ ಔಷಧ ಅಂಗಡಿಗಳು ಬಂದ್‌

ಆನ್‌ ಲೈನ್‌ ಮೂಲಕ ಔಷಧ ಮಾರಾಟ ವಿರೋಧಿಸಿ ಇದೇ ಮೇ 30ರಂದು ರಾಜ್ಯಾದ್ಯಂತ ಔಷಧ ಅಂಗಡಿಗಳನ್ನು ಬಂದ್ ಮಾಡುವಂತೆ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಕರೆ ನೀಡಿದೆ.

ಬೆಂಗಳೂರು: ಆನ್‌ ಲೈನ್‌ ಮೂಲಕ ಔಷಧ ಮಾರಾಟ ವಿರೋಧಿಸಿ ಇದೇ ಮೇ 30ರಂದು ರಾಜ್ಯಾದ್ಯಂತ ಔಷಧ ಅಂಗಡಿಗಳನ್ನು ಬಂದ್ ಮಾಡುವಂತೆ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಕರೆ ನೀಡಿದೆ.

ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಕರೆ ನೀಡಿರುವ ಈ ಬಂದ್ ನಿಂದಾಗಿ ರಾಜ್ಯಾದ್ಯಂತ ಇರುವ ಸುಮಾರು 28 ಸಾವಿರ ಔಷಧ ಅಂಗಡಿಗಳು ಬಂದ್‌ ಆಗಲಿದ್ದು, ಬಂದ್‌ಗೆ ಬೃಹತ್‌ ಬೆಂಗಳೂರು ಕೆಮಿಸ್ಟ್ಸ್ಅಂಡ್‌ ಡ್ರಗ್ಗಿಸ್ಟ್‌  ಸಂಘ ಸಂಪೂರ್ಣ ಬೆಂಬಲ ನೀಡಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಾಯಣ್ಣ, ಔಷಧ ವ್ಯಾಪಾರಿಗಳ ಹಿತರಕ್ಷಣೆಗಾಗಿ ಆನ್‌ ಲೈನ್‌ ಔಷಧ ಮಾರಾಟ ವಿರೋಧಿಸಿ  ದೇಶಾದ್ಯಂತ ಮೇ 30ರಂದು ಒಂದು ದಿನದ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ಅಂತೆಯೇ ಸಂಘದ ವತಿಯಿಂದ ಬೆಂಗಳೂರಿನ ಪುರಭವನದ ಆವರಣದಲ್ಲಿ ಬೆಳಗ್ಗೆ 10ರಿಂದ 1ರವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಯಾವುದೇ ವ್ಯಾಪಾರ ವಹಿವಾಟು ಇರುವುದಿಲ್ಲ ಎಂದು ಹೇಳಿದರು. ಆನ್‌ ಲೈನ್‌  ಮೂಲಕ ನಡೆಯುವ ಔಷಧ ಮಾರಾಟದಿಂದ ಕಳಪೆ ಗುಣಮಟ್ಟದ ಔಷಧ ಮತ್ತು ಬಳಕೆಯ ವಿಧಿ ವಿಧಾನದ ಮಾಹಿತಿ ಕೊರತೆಯಿಂದಾಗಿ ರೋಗಿಗಳ ಮೇಲೆ ಮಾರಕ ಪರಿಣಾಮ ಉಂಟಾಗುತ್ತದೆ. ಯಾವುದೇ ಅಡೆತಡೆಗಳಿಲ್ಲದೆ  ಸುಲಭವಾಗಿ ಸಿಗುವ ಮಾದಕ ಹಾಗೂ ಪ್ರತಿಬಂಧಕ ಔಷಧಗಳ ಮಾರಾಟ ಸಮಾಜಕ್ಕೆ ಮಾರಕವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇದೇ ಉದ್ಯಮವನ್ನು ನಂಬಿ ಜೀವಿಸುತ್ತಿರುವ 50 ಲಕ್ಷಕ್ಕೂ ಹೆಚ್ಚಿನ ನೌಕರರು, 1.5 ಕೋಟಿ ಅವಲಂಬಿತ ಕುಟುಂಬಗಳು ಆನ್‌ ಲೈನ್‌ ವ್ಯವಸ್ಥೆಯಿಂದ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮೇ 30ರಂದು  ದೇಶಾದ್ಯಂತ ಇರುವ 8.5 ಲಕ್ಷಕ್ಕೂ ಅಧಿಕ ಔಷಧ ವ್ಯಾಪಾರಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

59 ವರ್ಷಗಳ ನಂತರ ತಮಿಳುನಾಡಿನಲ್ಲಿ ಕಾಂಗ್ರೆಸ್​ಗೆ ಅಧಿಕಾರ ಹಂಚಿಕೆ; ನಾಳೆ ಸಚಿವರಾಗಿ ಇಬ್ಬರು ಪ್ರಮಾಣ

ಹವಾಮಾನ: ಬಿಸಿಲಿನ ಝಳ, Heat wave ಗೆ ಉತ್ತರ ಭಾರತ ತತ್ತರ; ದೇಶದಲ್ಲೇ ಅತಿ ಹೆಚ್ಚು ತಾಪಮಾನ ಪ್ರದೇಶ ಯಾವುದು ಗೊತ್ತೇ?

ಪಾಕಿಸ್ತಾನಕ್ಕೆ ಮತ್ತೆ ಆಘಾತ, ಬಾಂಗ್ಲಾದೇಶಕ್ಕೆ 2ನೇ ಜಯ: WTC ಅಂಕಪಟ್ಟಿಯಲ್ಲಿ ಭಾರತವನ್ನೇ ಹಿಂದಿಕ್ಕಿದ ಬಾಂಗ್ಲಾ ಟೈಗರ್ಸ್!

ಬಿಡದಿ ಟೌನ್​​ಶಿಪ್​​ಗೆ ರೈತರ ಒಪ್ಪಿಗೆ; HDK ವಿರೋಧದ ನಡುವೆ ಜೂನ್ 1 ರಿಂದಲೇ ಹಣ ಬಿಡುಗಡೆ: ಡಿಕೆಶಿ ಮಹತ್ವದ ಘೋಷಣೆ

Twisha Sharma: 'ಮತ್ತೆ ಮರಣೋತ್ತರ ಪರೀಕ್ಷೆ ಇಲ್ಲ' ಎಂದ ಭೋಪಾಲ್ ಕೋರ್ಟ್, ಮೃತದೇಹ ಸ್ವೀಕರಿಸಲು ಕುಟುಂಬ ನಿರಾಕರಣೆ

SCROLL FOR NEXT