ಬೆಂಗಳೂರಿನ ಕುರುಬರಹಳ್ಳಿಯಲ್ಲಿರುವ ಖಾಸಗಿ ಶಾಲೆ 
ರಾಜ್ಯ

ಬೆಂಗಳೂರಿನ ಈ ಶಾಲೆಯ ಕಟ್ಟಡ ಅಳತೆ ಕೇವಲ 10x10 ಚದರಡಿ

ಕುರುಬರಹಳ್ಳಿಯ ಈ ವಾಣಿಜ್ಯ ಸಂಕೀರ್ಣವನ್ನು ದಾಟಿ ನೀವು ಹೋದರೆ ಅಲ್ಲಿ ಶಾಲೆಯೊಂದು ಇದೆ ಎಂದು...

ಬೆಂಗಳೂರು: ಕುರುಬರಹಳ್ಳಿಯ ಈ ವಾಣಿಜ್ಯ ಸಂಕೀರ್ಣವನ್ನು ದಾಟಿ ನೀವು ಹೋದರೆ ಅಲ್ಲಿ ಶಾಲೆಯೊಂದು ಇದೆ ಎಂದು ನೀವು ನಿರೀಕ್ಷಿಸಲು ಸಾಧ್ಯವಿಲ್ಲ. ನಿಮಗೆ ಆಶ್ಚರ್ಯವಾದರೂ ಕೂಡ ಸತ್ಯ. ಈ ಶಾಲೆಯ ಕಟ್ಟಡದ ಅಳತೆ ಕೇವಲ 10x10 ಚದರಡಿ. ಬಾಡಿಗೆ ಕಟ್ಟಡದಲ್ಲಿರುವ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೇವಲ 5. 
10 ವಿದ್ಯಾರ್ಥಿಗಳಿಗಿಂತ ಕಡಿಮೆಯಿರುವ ಶಾಲಾ ಕಾಲೇಜುಗಳನ್ನು ರಾಜ್ಯ ಶಿಕ್ಷಣ ಇಲಾಖೆ ಒಂದು ಕಡೆ ಮುಚ್ಚುತ್ತಿದ್ದರೆ ಇನ್ನೊಂದೆಡೆ ಸಾರ್ವಜನಿಕ ಶಿಕ್ಷಣ ಇಲಾಖೆ ಈ ವಾಣಿಜ್ಯ ಸಂಕೀರ್ಣದಲ್ಲಿ ಖಾಸಗಿ ಶಾಲೆ ನಡೆಸಲು ಅನುಮತಿ ನೀಡಿದೆ.
 ಇಷ್ಟೊಂದು ಸಣ್ಣ ಜಾಗದಲ್ಲಿ ಶಾಲೆ ನಡೆಸಲು ಶಿಕ್ಷಣ ಇಲಾಖೆ ಹೇಗೆ ಅನುಮತಿ ನೀಡಿರಬಹುದು ಎಂದು ಸುತ್ತಮುತ್ತಲಿನ ನಿವಾಸಿಗಳು ಸಂದೇಹ ವ್ಯಕ್ತಪಡಿಸುತ್ತಿದ್ದು ಈ ಸಂಬಂಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಲಾಗಿದೆ.
ದೂರಿನ ಜೊತೆ ಶಾಲೆಯ ಫೋಟೋವನ್ನು ಕೂಡ ನೀಡಿದ್ದಾರೆ. ದೂರಿನ ಆಧಾರದ ಮೇಲೆ ಶಿಕ್ಷಣ ಇಲಾಖೆಗೆ ಪತ್ರ ಬರೆಯಲು ಆಯೋಗ ನಿರ್ಧರಿಸಿದೆ. ಕರ್ನಾಟಕ ಸರ್ಕಾರದಿಂದ ಅಂಗೀಕೃತಗೊಂಡ ಸೈಂಟ್ ಜಾಸೆಫ್ ಶಾಲೆ ಎಂದು ದೂರಿನಲ್ಲಿ ಬರೆಯಲಾಗಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಮಕ್ಕಳ ಹಕ್ಕು ಆಯೋಗದ ಅಧಿಕಾರಿಯೊಬ್ಬರು, ಶಿಕ್ಷಣ ಇಲಾಖೆ ಶಾಲೆ ನಡೆಸಲು ಅನುಮತಿ ನೀಡಿರುವುದರಿಂದ ದೂರಿನ ಆಧಾರದ ಮೇಲೆ ನೊಟೀಸ್ ಜಾರಿ ಮಾಡಿ ವರದಿ ಕೇಳುತ್ತವೆ ಎಂದು ತಿಳಿಸಿದ್ದಾರೆ.
ದೂರಿನ ಪ್ರಕಾರ,  ಕಳೆದ ಶೈಕ್ಷಣಿಕ ವರ್ಷದಲ್ಲಿ ಕೇವಲ 5 ಮಂದಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇನ್ನೊಂದು ಆಸಕ್ತಿಕರ ವಿಷಯವೆಂದರೆ ಇವರೆಲ್ಲರೂ ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾದವರು.
ಈ ಬಗ್ಗೆ ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿದಾಗ, ನಗರದಲ್ಲಿ ಸಾವಿರಾರು ಶಾಲೆಗಳಿವೆ. ಮಕ್ಕಳ ಹಕ್ಕು ಆಯೋಗದಿಂದ ದೂರು ಬಂದ ತಕ್ಷಣ ಅದನ್ನು ಪರೀಕ್ಷಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT